ನಾಪೋಕ್ಲು, ಆ. ೧೦: ಸಾರ್ವಜನಿಕರಿಗೆ ನ್ಯಾಯಯುತವಾಗಿ ಸೌಲಭ್ಯ ಸವಲತ್ತುಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಮುಖ್ಯ ಮಂತ್ರಿ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ನಾಪೋಕ್ಲು ಶ್ರೀ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಹಕ್ಕು ಪತ್ರ ಮತ್ತು ಪಿಂಚಣಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ವಸತಿ ಮತ್ತು ವಿದ್ಯಾರ್ಜನೆಗೆ ಮಕ್ಕಳಿಗೆ ಶಾಲೆಗಳು ಅವಶ್ಯಕವಾಗಿದ್ದು ಇವುಗಳಿಗೆ ಪ್ರಮುಖ ಆದ್ಯತೆ ನೀಡುವುದ ರೊಂದಿಗೆ ಇಲಾಖೆಗಳಲ್ಲಿ ಹೊಸ ಕ್ರಾಂತಿ ಆಗಬೇಕಿದೆ ಎಂದರು.
ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ, ತಮ್ಮ ಇಲಾಖೆಗಳಲ್ಲಿ ಹಲವು ಕುಂದು ಕೊರತೆಗಳಿದ್ದು, ಪ್ರತಿ ತಿಂಗಳು ೧೫ ದಿನದಲ್ಲಿ ಒಮ್ಮೆ ಹೋಬಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಸರಿಪಡಿಸುವ ಭರವಸೆ ನೀಡಿದರು.
ಈ ಸಂದರ್ಭ ಸಾಮಾಜಿಕ ಭದ್ರತಾ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ಮತ್ತು ಸಾಗುವಳಿ ಚೀಟಿ ವಿತರಣೆ ಯನ್ನು ಮಾಡಲಾಯಿತು. ಗ್ರಾಮದ ಜಸ್ಮಿತ, ರಾಧಾ ಹಾಗೂ ನರಿಯಂದಡ ಗ್ರಾಮದ ಒಕ್ಕಲಿಗರ ರಾಜು ಎಂಬವರಿಗೆ ಸಾಗುವಳಿ ಚೀಟಿ, ೫೨ ಫಲಾನುಭವಿಗಳಿಗೆ ಮಾಸಾಶನ, ರಾಷ್ಟಿçÃಯ ಭದ್ರತಾ ಯೋಜನೆ ಅಡಿಯಲ್ಲಿ ೧೧. ವಿಧವಾ ವೇತನ, ೨೪ ವೃದ್ಧಾಪ್ಯ ವೇತನ ೧೫ ಸಂಧ್ಯಾ ಸುರಕ್ಷಾ ವೇತನ, ೨ ಅಂಗವಿಕಲರ ವೇತನ ಫಲಾನು ಭವಿಗಳಿಗೆ ಅರ್ಹತಾ ಪತ್ರಗಳನ್ನು ವಿತರಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಹೆಚ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಈ ಸಂದರ್ಭ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ್, ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್, ಲೋಕೋಪಯೋಗಿ ಸಹಾಯಕ ಅಭಿಯಂತರ ಸತೀಶ್, ಉಪ ಅಭಿಯಂತರ ಜವರೇಗೌಡ, ಗ್ರಾಮ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಗ್ರಾಮ ಲೆಕ್ಕಿಗರು, ಸಿಬ್ಬಂದಿ ವರ್ಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ, ಬೂತ್ ಅಧ್ಯಕ್ಷ ಶಿರಾಜುದ್ದೀನ್, ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭ ಶಾಸಕರು ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಕುಲ್ಲೆಟಿರ ಅರುಣ್ ಬೇಬ ಸ್ವಾಗತಿಸಿ ಆರ್.ಐ. ರವಿಕುಮಾರ್ ನಿರೂಪಿಸಿ, ಮಾಚೇಟ್ಟಿರ ಕುಶು ಕುಶಾಲಪ್ಪ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಸ್ಥಳೀಯ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಶಾಸಕ ಎ.ಎನ್. ಪೊನ್ನಣ್ಣ ಅವರನ್ನು ಸ್ವಾಗತ ಮಾಡಲಾಯಿತು. ಬಳಿಕ ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆಯನ್ನು ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.