ಮಡಿಕೇರಿ, ಆ. ೯: ಕೊಡಗು ಪೊಲೀಸ್ ಇಲಾಖೆ ಕಳೆದ ಕೆಲವು ಅವಧಿಯಿಂದ ಜಿಲ್ಲೆಯಲ್ಲಿ ನಿರಂತರ ಕಾರ್ಯಾಚರಣೆ ಮೂಲಕ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿದೆ. ಪ್ರಸ್ತುತ ಸ್ಥಿತಿಯಲ್ಲಿ ಕೊಡಗಿಗೆ ಹೊರ ಜಿಲ್ಲೆಗಳು, ರಾಜ್ಯಗಳಿಂದ ಬರುತ್ತಿದ್ದ ಮಾದಕ ವಸ್ತು ಜಾಲದ ಮಾರಾಟಗಾರ ತಂಡಗಳನ್ನು ನಿಯಂತ್ರಿಸಲು ಸಫಲವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಬಹಿರಂಗಪಡಿಸಿದರು.
ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜನೆಗೊಂಡಿದ್ದ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇದೀಗ ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ. ಹೊರಗಿನಿಂದ ಬರುತ್ತಿದ್ದ ಮಾದಕ ವಸ್ತುಗಳು ಪೊಲೀಸ್ ಧಾಳಿ ಭಯದಿಂದ ಸ್ಥಗಿತಗೊಂಡಿವೆ. ಹೊರಗಿನವರು ಇಲ್ಲಿ ತಂದು ಮಾರಾಟಗೊಳಿಸುವ ದುಸ್ಸಾಹಸವನ್ನು ಕೈ ಬಿಟ್ಟಿದ್ದಾರೆ. ಇದರಿಂದ ಕೊಡಗಿನ ಮಾದಕ ವಸ್ತು ವ್ಯಸನಿಗಳಾದ ಯುವಕರು ತಲ್ಲಣಗೊಂಡಿದ್ದಾರೆ. ವ್ಯಸನವನ್ನು ಬಿಡಲಾಗದೆ ಕೆಲವರು ತಾವೇ ಮೈಸೂರು ಇತ್ಯಾದಿ ಸ್ಥಳಗಳಿಗೆ ತೆರಳಿ ತಮಗೆ ಮಾತ್ರವಲ್ಲದೆ ತಮ್ಮ ಸ್ನೇಹಿತರಿಗೂ ಇರಲಿ ಎಂದು ತರಲಾರಂಭಿಸಿದ್ದಾರೆ. ಈ ನಡುವೆ ತಮ್ಮ ನಿಕಟವರ್ತಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ತಮ್ಮ ಆಸೆ ಈಡೇರುವುದರೊಂದಿಗೆ ಹಣ ಗಳಿಕೆಯ ತಂತ್ರವನ್ನೂ ರೂಪಿಸಲು ಪ್ರ್ರಾರಂಭಿಸಿದ್ದಾರೆ. ಇದೀಗ ಇಲಾಖೆ ಕೊಡಗಿನಲ್ಲಿಯೇ ಹುಟ್ಟಿಕೊಂಡ ಮಾರಾಟಗಾರರನ್ನು ಪತ್ತೆ ಹಚ್ಚಲು ಪ್ರಾರಂಭಿಸಿದೆ. ಅಂತಹವರನ್ನು ಬಂಧಿಸಿ ಕ್ರಮ ಕೈಗೊಳ್ಳುವ ಮೂಲಕ ಬಹುತೇಕ ಜಿಲ್ಲೆಯನ್ನು “ಡ್ರಗ್ ಮುಕ್ತ” ಗೊಳಿಸುವತ್ತ ಇಲಾಖೆ ಹೆಜ್ಜೆ ಹಾಕಿದೆ. ಈ ದಿಸೆಯಲ್ಲಿ ಕೊಡಗಿನ ಜನರ ಸಹಕಾರ ಅಗತ್ಯವಿದೆ ಎಂದು ರಾಮರಾಜನ್ ಮನವಿ ಮಾಡಿದರು. ಕೊಡಗಿನಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಪ್ರಕರಣಗಳು ಹೆಚ್ಚಾದರೆ ಅದು ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕೌಟುಂಬಿಕ ಪ್ರವಾಸೋದ್ಯಮಕ್ಕೆ ಧಕ್ಕೆ ಬರಲಿದೆ ಎಂದು ಅವರು ಈ ಸಂದರ್ಭ ಎಚ್ಚರಿಸಿದರು. ಒಮ್ಮೆಯೇನಾದರೂ ಕೊಡಗು ಮಾದಕ ವಸ್ತು ವ್ಯಸನಿಗಳ ತಾಣ ಎಂದು ಕೆಟ್ಟ ಹೆಸÀರು ಬಂದರೆ ಇಂತಹ ಉತ್ತಮ ಜಿಲ್ಲೆಯ ಬೆಳವಣಿಗೆಗೆ ಅದು ಧಕ್ಕೆಯುಂಟು ಮಾಡಲಿದೆ. ಇದಕ್ಕಾಗಿ ಇಲಾಖೆ ಈ ದಿಸೆಯಲ್ಲಿ ಮುನ್ನಡಿಯಿಟ್ಟಿದೆ ಎಂದು ಮುಕ್ತ ನುಡಿಯಾಡಿದರು. ರಾಜ್ಯದ ಇತರ ಜಿಲ್ಲೆಗಳು ಅಥವಾ ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಕೊಡಗು ಶಾಂತಿಯುತ ಜಿಲ್ಲೆ. ಕೆಲವು ಕಳವು ಪ್ರಕರಣಗಳು ಹಾಗೂ ಇತ್ತೀಚೆಗೆ ಕೆಲವು ಯುವತಿಯರು ನಾಪತ್ತೆಯಾಗಿ ಬೇರೆಡೆ ಸಾವಿಗೀಡಾದ ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳ ನಡೆಯದಂತೆ ಇಲಾಖೆ ಜಾಗೃತವಾಗಿರುತ್ತದೆ. ಆದÀರೆ, ಸದ್ಯದ ಮಟ್ಟಿಗೆ ಮಾದಕ ವಸ್ತು ಸೇವೆನೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಆದ್ಯತೆ ನೀಡಲಾಗಿದೆ ಎಂದು ಅಭಿಪ್ರ್ರಾಯಪಟ್ಟರು. ಜಿಲ್ಲೆಯಲ್ಲಿ ಇಂತಹ ವಿದ್ಯಮಾನಗಳ ಬಗ್ಗೆ ತಮ್ಮ ಹೆಸರುಗಳನ್ನೂ ನೀಡದೆ ಗೌಪ್ಯವಾಗಿ ಜನರು ಮಾಹಿತಿ ನೀಡಬಹುದು. ಕೆಎಸ್ಪಿ ಎನ್ನುವ ಆ್ಯಪ್ ಮೂಲಕ ಯಾವ ಸಂದರ್ಭದಲ್ಲೂ ಮಾಹಿತಿ ನೀಡಬಹುದಾಗಿದೆ. ತಾನೇ ಇದನ್ನು ಖುದ್ದಾಗಿ ಗಮನಿಸುತ್ತಿದ್ದು ತಕ್ಷಣವೇ ಇಲಾಖೆ ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತದೆ ಎಂದು ಅವರು ವಚನವಿತ್ತರು. ಸಮಾಜದ ಅಗತ್ಯತೆಗಳಿಗೆ ತಕ್ಕಂತೆ ಜನರ ಪರವಾಗಿ ಕಾರ್ಯಪ್ರವೃತ್ತವಾಗಲು ಕೊಡಗು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು.
ಗಾAಜಾ ಮಾರಾಟ ದಂಧೆಯಲ್ಲಿ ಆರೋಪಿಗಳ ಪರವಾಗಿ ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿರುವುದು ತಿಳಿದುಬಂದಲ್ಲಿ
(ಮೊದಲ ಪುಟದಿಂದ) ಅಂಥ ಸಿಬ್ಬಂದಿಗಳ ಬಗ್ಗೆ ಕಠಿಣ ಕ್ರಮ ಖಂಡಿತಾ ಎಂದು ಭರವಸೆ ನೀಡಿದ ರಾಮರಾಜನ್, ಗಾಂಜಾ ದಂಧೆಯಲ್ಲಿ ಬೃಹತ್ ಜಾಲವೇ ಶಾಮೀಲಾಗಿದ್ದು ಅಂಥವರನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ ಎಂದರು. ದಾರಿ ತಪ್ಪುವ ಸಿಬ್ಬಂದಿ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿತಿಯಿತ್ತರು.
ಮಾದಕ ದ್ರವ್ಯ ಸೇವನೆ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಸಂಘಸAಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪೋಷಕರೊಂದಿಗೆ ಚರ್ಚಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದೂ ಭರವಸೆ ನೀಡಿದರು.
ವಾಹನ ಸಂಚಾರ ಕ್ರಮಗಳ ಬಗ್ಗೆಯೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿಯೂ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಡಿಕೇರಿ ನಗರದಲ್ಲಿ ಪೊಲೀಸ್ ಸಂಚಾರಿ ವಾಹನಗಳ ಮೂಲಕ ಸಂಚಾರ ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಾಹನ ನಿಲುಗಡೆಯ ಬಗ್ಗೆಯೂ ಧ್ವನಿವರ್ಧಕದ ಮೂಲಕ ಸಂಚಾರಿ ವಾಹನಗಳಲ್ಲಿ ತಿಳಿಸಲಾಗುತ್ತದೆ. ಪೊಲೀಸ್ ಗಸ್ತನ್ನು ನಗರ ಮತ್ತು ಹೊರವಲಯದಲ್ಲಿ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ.
ತಾನು ಸ್ವv:À ಮಫ್ತಿಯಲ್ಲಿ ಖುದ್ದಾಗಿ ನಗರ ಪ್ರದೇಶಗಳಲ್ಲಿ ರಾತ್ರಿ ಬೀಟ್ ತೆರಳಿ ಪುಂಡ ಪೋಕರಿಗಳ ಹಾವಳಿ ನಿಯಂತ್ರಿಸಲು ಮುಂದಾಗುವುದಾಗಿಯೂ ರಾಮರಾಜನ್ ಘೋಷಿಸಿದರು.
ಮಡಿಕೇರಿ ಗಿರಿ ಪ್ರದೇಶವಾದ್ದರಿಂದಾಗಿ ಸ್ಥಳದ ಕೊರತೆ ಬಹಳವಾಗಿ ಕಾಡುತ್ತಿದೆ. ಹೀಗಾಗಿಯೇ ಮಡಿಕೇರಿಯಲ್ಲಿ ಮುಂದಿನ ದಿನಗಳಲ್ಲಿ ವಾಹನ ನಿಲುಗಡೆಯೇ ಬೃಹತ್ ಸಮಸ್ಯೆಯಾಗಿ ಕಾಡಲಿದೆ. ಈ ನಿಟ್ಟಿನಲ್ಲಿ ನಗರಸಭೆ, ಜಿಲ್ಲಾಡಳಿತ, ಮೂಡಾ ಸೂಕ್ತ ಸ್ಥಳಗಳನ್ನು ವಾಹನ ನಿಲುಗಡೆಗೆ ಗುರುತಿಸಬೇಕು, “ಮಲ್ಟಿ ಲೆವಲ್ ಪಾರ್ಕಿಂಗ್” ವ್ಯವಸ್ಥೆಯೂ ನಗರದ ೨-೩ ಕಡೆಗಳಲ್ಲಿ ಜಾರಿಯಾಗುವ ಅನಿವಾರ್ಯತೆ ಇದೆ ಎಂದು ರಾಮರಾಜನ್ ಹೇಳಿದರು.
ಮಡಿಕೇರಿ - ಕುಶಾಲನಗರ ಹೆದ್ದಾರಿಯಲ್ಲಿ ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆಯ ಫಲಕ ಅಳವಡಿಸುವಿಕೆ. ರಾತ್ರಿ ವೇಳೆ ಕಾಣುವಂತೆ ರಸ್ತೆ ಬದಿಗಳಲ್ಲಿ ಬ್ಲಿಂಕರ್ಸ್ಗಳನ್ನು ಹಾಕಲಾಗುತ್ತದೆ. ಕೊಡಗು ಜಿಲ್ಲೆಯ ಪ್ರವೇಶ ದ್ವಾರದಲ್ಲಿಯೇ ಡ್ರಗ್ಸ್ ಸೇವನೆ ಬಗ್ಗೆ ಎಚ್ಚರಿಕೆಯ ಸಂದೇಶ ಫಲಕ ಅಳವಡಿಸಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಮಡಿಕೇರಿಯ ಕೈಗಾರಿಕಾ ಬಡಾವಣೆಯ ರಸ್ತೆ ಸೇರಿದಂತೆ ನಗರದ ಕೆಲವು ರಸ್ತೆಗಳಲ್ಲಿ ಏಕ ಮುಖ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ರಾಮರಾಜನ್, ಈ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಂಡು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ಹೇಳಿದರು.
ಖಾಸಗಿ ಬಸ್ ನಿಲ್ದಾಣಕ್ಕೆ ರಾಜಾಸೀಟ್ ಮೂಲಕ ಸಾಗುವ ಬಸ್ಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಅಂತೆಯೇ ಪ್ರೆಸ್ಕ್ಲಬ್ ರಸ್ತೆಯಲ್ಲಿಯೂ ಬಸ್ ಸಂಚಾರ ಕಷ್ಟಕರವಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಮುಖ್ಯಸ್ಥರು, ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಸದ್ಯದಲ್ಲಿಯೇ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿಗಳು ನೇಮಕಗೊಳ್ಳುವ ನಿರೀಕ್ಷೆ ಇದೆ. ಈ ಸಂದರ್ಭ ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತವಾಗಲಿದೆ. ಎಂದು ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ಕುಮಾರ್ ರೈ ಮಾತನಾಡಿ, ಜಿಲ್ಲೆಯಲ್ಲಿರುವ ಕಾನೂನು ಸಂಬAಧಿತ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಈ ಸಂವಾದ ಆಯೋಜಿಸಲಾಗಿದೆ. ಸಮಸ್ಯೆಗಳ ಅನಾವರಣದೊಂದಿಗೆ ಅಂಥ ಸಮಸ್ಯೆಗಳು ಶೀಘ್ರ ನಿವಾರಣೆಯಾಗಲು ಸಂವಾದ ನೆರವಾಗಲಿದೆ. ಪೊಲೀಸ್ ಇಲಾಖೆ ಮತ್ತು ಜನರ ನಡುವಿನ ಸೌಹಾರ್ದ ಸಂಬAಧಕ್ಕೆ ರೋಟರಿ ಮಿಸ್ಟಿಹಿಲ್ಸ್ ವೇದಿಕೆ ಕಲ್ಪಿಸಿದೆ ಎಂದರು.
ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ವಲಯದ ಸಹಾಯಕ ಗವರ್ನರ್ ದೇವಣಿರ ತಿಲಕ್ ಉಪಸ್ಥಿತರಿದ್ದು, ರೋಟರಿ ನಿರ್ದೇಶಕ ಅನಿಲ್ ಎಚ್.ಟಿ. ನಿರೂಪಿಸಿ, ಅಂಬೆಕಲ್ ವಿನೋದ್ ಕುಶಾಲಪ್ಪ ಅತಿಥಿಗಳ ಪರಿಚಯ ನೆರವೇರಿಸಿದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರAಜನ್, ರೋಟರಿ ಮಾಜಿ ಗವರ್ನರ್ ಡಾ.ರವಿ ಅಪ್ಪಾಜಿ, ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕೊಡಗು ಗೌಡ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಹೋಟೇಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಎ.ಕೆ.ನವೀನ್, ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನAಜಯ್, ಭಾರತೀಯ ರೆಡ್ ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ, ಕೊಡಗು ಪತ್ರಕರ್ತರ ಸಂಘ (ರಿ) ನಿರ್ದೇಶಕ ಸುರೇಶ್ ಬಿಳಿಗೇರಿ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯ, ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಗೋಪಾಲಕೃಷ್ಣ, ಹೋಂಸ್ಟೇ ಅಸೋಸಿಯೇಷನ್ ನಿರ್ದೇಶಕಿ ಕಲ್ಮಾಡಂಡ ಶಶಿಮೊಣ್ಣಪ್ಪ, ಸೋಮವಾರಪೇಟೆ ರೈತ ಸಂಘದ ಪ್ರಮುಖ ಕೆ.ಎಂ.ಲಕ್ಷö್ಮಣ್ ಹಾಗೂ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.