ಮಡಿಕೇರಿ, ಆ. ೯: ನಗರದ ದೇಚೂರಿನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ದೇಚೂರಿನ ಹೆಚ್.ಎಸ್. ಪ್ರತಾಪ್ (೨೨), ಇಬ್ನಿವಳವಾಡಿಯ ಐ.ಆರ್. ಮೋನಿಷ್ (೨೦), ಕರ್ಣಂಗೇರಿ ಗ್ರಾಮದ ಡಿ. ಲಿಖಿತ್ (೨೩), ಪಿ.ಎಸ್. ಅಕ್ಷಯ್ (೨೩) ಬಂಧಿತ ಆರೋಪಿಗಳು.
ತಾ. ೮ ರಂದು ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮಾದಕ ವಸ್ತು ತಡೆಗಟ್ಟುವ ನಿಟ್ಟಿನಲ್ಲಿ ಡಿವೈಎಸ್ಪಿ ಗಂಗಾಧರಪ್ಪ, ಸಿಪಿಐ ಅನೂಪ್ ಮಾದಪ್ಪ, ಪಿಎಸ್ಐಗಳಾದ ಶ್ರೀನಿವಾಸ್, ಎ.ಬಿ. ರಾಧಾ, ಡಿಸಿಆರ್ಬಿ ಘಟಕದ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿದ್ದು, ಮಾದಕ ವಸ್ತು ಮಾರಾಟ, ಸೇವನೆ ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕೆಎಸ್ಪಿ ತಂತ್ರಾAಶದ ಮೂಲಕ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೋರಿದ್ದಾರೆ.