ಸಿಂಹ ಎಂದಾಕ್ಷಣ ಎಲ್ಲರ ಸ್ಮೃತಿಪಟಲದಲ್ಲಿ ಮೂಡಿಬರುವದು ದೊಡ್ಡ ಗಾತ್ರದ, ದಷ್ಟ ಪುಷ್ಟವಾದ ದೇಹರಚನೆಯನ್ನು ಹೊಂದಿರುವ ಮೊನಚಾದ ಕಣ್ಣುಗಳಿರುವ, ದೊಡ್ಡದಾದ ಬಾಯಲ್ಲಿ ಚೂಪಾದ ಹಲ್ಲುಗಳಿರುವ ಕುತ್ತಿಗೆಯ ಸುತ್ತಲೂ ಕೇಸರಿ ಬಣ್ಣದ ಉದ್ದುದ್ದ ರೋಮಗಳನ್ನು ಹೊಂದಿರುವ ದೊಡ್ಡ ಪ್ರಾಣಿ., ಶಕ್ತಿಯುತವಾದ., ಬಲಿಷ್ಠ ಸ್ನಾಯುಗಳುಳ್ಳ., ನೋಡಲೂ ಚಂದವಿರುವ ಸಿಂಹ ಒಮ್ಮೆ ಗರ್ಜಿಸಿತೆಂದರೆ ಇಡೀ ಕಾಡೇ ನಡುಗುತ್ತದೆ., ಎಲ್ಲ ಪ್ರಾಣಿಗಳು ಭಯದಿಂದಲೋ ಏನೋ ಗೌರವ ನೀಡುವದರಿಂದ ‘ಕಾಡಿನ ರಾಜ’ ಎಂಬ ಬಿರುದು ಬಂದಿದೆ.
ಈ ಭವ್ಯವಾದ ಹಾಗೂ ಧೈರ್ಯಶಾಲಿ ಪ್ರಾಣಿಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂರಕ್ಷಣೆ ಮಾಡುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ ೧೦ ರಂದು ವಿಶ್ವ ಸಿಂಹ ದಿನವೆಂದು ಆಚರಿಸಲಾಗುತ್ತಿದೆ.
ಪ್ರಪಂಚದಾದ್ಯAತ ಸಿಂಹಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬAದಿತು. ಸಮೀಕ್ಷೆ ಪ್ರಕಾರ ಶೇ. ೮೦ ರಷ್ಟು ಕುಸಿತ ಕಂಡುಬAದ ಹಿನ್ನೆಲೆಯಲ್ಲಿ ಸಿಂಹವನ್ನು ರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಿಂಹ ದಿನವನ್ನು ಆಚರಣೆಗೆ ತರಲಾಗಿ ಆಗಸ್ಟ್ ೧೦ ರಂದು ಆಚರಿಸಲು ನಿರ್ಧರಿಸಲಾಯಿತು.
೨೦೧೩ ರಲ್ಲಿ ಪ್ರಥಮ ವಿಶ್ವ ಸಿಂಹ ದಿನ ಆಚರಿಸಲಾಗಿದ್ದು, ಡೆರೆಕ್ ಮತ್ತು ಬೆವರ್ಲಿ ಜೋಬರ್ಟ್ ಎಂಬವರುಗಳು ಬಿಗ್ ಕ್ಯಾಟ್ ಇನಿಶಿಯೇಟಿವ್ ಅಂಡ್ ಜಿಯಾಗ್ರಾಫಿಕ್ ಪಾಲುದಾರಿಕೆಯಲ್ಲಿ ಈ ದಿನವನ್ನು ಆಚರಿಸಿದರು. ಅಂದಿನಿAದ ಪ್ರತಿವರ್ಷ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.
ಗಣನೀಯ ಕುಸಿತ
ಸರಿ ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾ, ಏಷ್ಯಾ, ಯೂರೋಪ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಸಿಂಹಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದವು. ಬರ ಬರುತ್ತಾ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖ ವಾಗತೊಡಗಿತು. ಇಂಟರ್ನ್ಯಾಷನಲ್ ಯೂನಿಯನ್ ಪಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಸಿಂಹÀಗಳನ್ನು ಅಪಾಯಕ್ಕೊಳಗಾದ ಪ್ರಬೇಧಗಳ ಕೆಂಪು ಪಟ್ಟಿಯಲ್ಲಿ ದುರ್ಬಲ ಜಾತಿಯೆಂದು ಗೊತ್ತುಪಡಿಸಿದೆ. ಆಫ್ರಿಕಾವನ್ನು ಹೊರತುಪಡಿಸಿ ವಿಶ್ವದಾದ್ಯಂತ ಸಿಂಹಗಳ ಸಂಖ್ಯೆ ಕಡಿಮೆಯಾಗಿದ್ದು, ಭಾರತವೂ ಇದರಲ್ಲಿ ಸೇರಿದೆ. ಬೇಟೆ ನಿಷೇಧಿಸಿದ ಬಳಿಕ ಕೊಂಚ ಏರಿಕೆ ಕಂಡು ಬಂದಿದ್ದು, ಭಾರತ ದೇಶದಲ್ಲಿ ೨೦೧೫ರ ಗಣತಿಯ ಪ್ರಕಾರ ೫೨೩ ಸಿಂಹಗಳಿದ್ದುದು ೨೦೨೦ರ ಗಣತಿ ವೇಳೆಗೆ ೬೭೪ಕ್ಕೆ ಏರಿದೆ. ಪ್ರತಿ ವರ್ಷ ಸರಾಸರಿ ೫೦ ಸಿಂಹಗಳು ಸಾವನ್ನಪ್ಪುತ್ತಿವೆ. ಅವುಗಳ ಆವಾಸಸ್ಥಾನ ನಾಶ, ಕಳ್ಳಬೇಟೆ ಹಾಗೂ ಕಾಯಿಲೆಗಳು ಸಿಂಹಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಕಳೆದ ಆಗಸ್ಟ್ ೧೫-೨೦೨೦ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾಜೆಕ್ಟ್ ಲಯನ್ ಅಡಿಯಲ್ಲಿ ಸಿಂಹಗಳನ್ನು ರಕ್ಷಿಸುವ ಸಲುವಾಗಿ ಕುನೋ-ಪಾಲ್ಪುರ್ ಅಭಯಾರಣ್ಯವನ್ನು ಹೊರತುಪಡಿಸಿ ಆರು ಹೊಸ ಪ್ರದೇಶಗಳನ್ನು ಗುರುತಿಸಿದ್ದಾರೆ. ಮಧ್ಯಪ್ರದೇಶದ ಮಾಧವ್ ರಾಷ್ಟಿçÃಯ ಉದ್ಯಾನವನ, ಗಾಂಧಿಸಾಗರ್ ವನ್ಯಜೀವಿ ಅಭಯಾರಣ್ಯ, ರಾಜಸ್ಥಾನದ ಸೀತಾಮಾತಾ ವನ್ಯಜೀವಿ ಅಭಯಾರಣ್ಯ, ಮುಕುಂದ್ರ ಹಿಲ್ಸ್ ಟೈಗರ್ ರಿವರ್ಸ್, ಕುಂಬಲ್ಘಡ್ ವನ್ಯಜೀವಿ ಅಭಯಾರಣ್ಯ ಹಾಗೂ ಗುಜರಾತ್ನ ಜೆಸ್ಸೋರ್-ಬಲರಾಮ್ ಅಂಬಾಜಿ ಡಬ್ಲೂö್ಯಎಲ್ಎಸ್ ಪಕ್ಕದ ಭೂಪ್ರದೇಶಗಳಾಗಿವೆ.
‘ಅಂದವಾದ., ಬಲಿಷ್ಠವಾದ ಪ್ರಾಣಿಯಾಗಿರುವ ಸಿಂಹಗಳ ಸಂತತಿಯನ್ನು ರಕ್ಷಣೆ ಮಾಡದೇ ಹೋದಲ್ಲಿ ಮುಂದೊAದು ದಿನ ಮೃಗಾಲಯಗಳಲ್ಲೂ ಸಿಂಹ ನೋಡಲು ಸಿಗುವುದಿಲ್ಲ., ಮುಂದಿನ ಪೀಳಿಗೆಗೆ ಚಿತ್ರಗಳಲ್ಲಿ ತೋರಿಸ ಬೇಕಾಗಬಹುದು., ಡೈನೋಸರ್ಸ್-ಗಾಡ್ಝಿಲ್ಲಾಗಳನ್ನು ತೋರಿಸಿದಂತೆ..!’
? ಕುಡೆಕಲ್ ಸಂತೋಷ್