ಸೋಮವಾರಪೇಟೆ, ಆ. ೮: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಮಕ್ಕಳಿಗೆ ಸಣ್ಣ ಕಥೆ ಅಭಿಯಾನ ಕಾರ್ಯಕ್ರಮ ನಡೆಯಿತು.
ಅಭಿಯಾನದ ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಸನ ಕಾಲೇಜಿನ ಉಪನ್ಯಾಸಕಿ ಸ್ಪೂರ್ತಿ, ಎಂಜಿಓ ಪ್ರಮುಖರಾದ ಸುನೀತಾ ಹಾಗೂ ಹರೀಶ್ ಅವರುಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಂಥಾಲಯ ಮೇಲ್ವಿಚಾರಕಿ ಪದ್ಮಾವತಿ, ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ನೋಂದಣಿ ಕಾರ್ಯಕ್ರಮ, ರೀಡ್ ಅಲೌಡ್, ಕಮ್ಯುನಿಟಿ ಎಂಗೇಜ್ಮೆAಟ್ ಆಕ್ಟಿವಿಟೀಸ್, ವಾರ್ಷಿಕ ಕಥೆ ಹೇಳುವ ಅಭಿಯಾನ, ಒಂದು ದಿನ-ಒಂದು ಕಥೆ, ನಾನು ಮತ್ತು ನನ್ನ ಸ್ನೇಹಿತರು ಗ್ರಂಥಾಲಯದೆಡೆಗೆ, ಪುಸ್ತಕ ಜೋಳಿಗೆ, ಅಮ್ಮನಿಗೊಂದು ಪತ್ರ, ಬೇಸಿಗೆ ಶಿಬಿರ, ನನ್ನ ಪ್ರೀತಿಯ ಗ್ರಂಥಾಲಯ, ಸಣ್ಣ ಕಥೆ ಬರೆಯುವ ಅಭಿಯಾನ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಗ್ರAಥಾಲಯಕ್ಕೆ ಸ್ಥಳೀಯ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ೧೦ ಸಾವಿರ ರೂಗಳ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಪುಸ್ತಕಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಭಿಯಾನದಲ್ಲಿ ಭಾಗವಹಿಸಿ ಉತ್ತಮವಾಗಿ ಕಥೆಗಳನ್ನು ಬರೆದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.