ಸೋಮವಾರಪೇಟೆ, ಆ. ೮: ಸಮೀಪದ ಕಲ್ಕಂದೂರು ಗ್ರಾಮದ ಶ್ರೀ ಶಾಸ್ತ ಯುವಕ ಸಂಘದ ನೂತನ ಕಚೇರಿಯನ್ನು ಕೂಡುರಸ್ತೆ ಜಂಕ್ಷನ್ ನಲ್ಲಿರುವ ಕಟ್ಟಡದಲ್ಲಿ ತೆರೆಯಲಾಗಿದ್ದು, ಇದರ ಉದ್ಘಾಟನೆಯನ್ನು ಹಾನಗಲ್ಲು ಗ್ರಾ.ಪಂ. ಸದಸ್ಯ ಕೆ.ಎಸ್. ಪ್ರಕಾಶ್ ನೆರವೇರಿಸಿದರು. ಈ ಸಂದರ್ಭ ಗ್ರಾಮದ ಪ್ರಮುಖರಾದ ನಾರಾಯಣ ಪೂಜಾರಿ, ಸರ್ವೇಶ್ ಭಟ್, ಸಂಘದ ಅಧ್ಯಕ್ಷ ಕೆ.ಟಿ. ಲಿಂಗರಾಜು, ಉಪಾಧ್ಯಕ್ಷ ಸಿ.ಎನ್. ಲೋಕೇಶ್, ಕಾರ್ಯದರ್ಶಿ ಉಮೇಶ್, ಉಪ ಕಾರ್ಯದರ್ಶಿ ಕೆ.ಬಿ. ಹರೀಶ್, ಖಜಾಂಚಿ ಅನಿಲ್ ಸೇರಿದಂತೆ ಕೆ.ಬಿ. ಸುರೇಶ್, ನಾಗೇಂದ್ರ, ಬೆಳ್ಳಿಶೆಟ್ಟಿ, ಪ್ರಜ್ವಲ್, ರಮೇಶ್, ವಿನೋದ್ ಅವರುಗಳು ಉಪಸ್ಥಿತರಿದ್ದರು.