ವಿಸ್ಮಯಗಳಿಂದ ಕೂಡಿರುವ ಈ ವಿಶಾಲವಾದ ಜಗತ್ತಿನಲ್ಲಿ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ., ಪರಸ್ಪರ ಪ್ರೀತಿ, ವಿಶ್ವಾಸದಿಂದ ಬೆರೆಯುವ ಅವಕಾಶಗಳಿವೆ. ಅದರಲ್ಲೂ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಒಂದು ಹೆಜ್ಜೆ ಮುಂದೆ ಇದ್ದು ಮಾತನಾಡಲು, ಕೆಲಸ ಮಾಡಲು ಶಕ್ತನಾಗಿದ್ದಾನೆ. ಆದರೆ., ಪ್ರಾಣಿಗಳು ಅವನಿಗಿಂತಲೂ ಮೇಲು ಎಂದು ತೋರ್ಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಮಾತು ಬಾರದಿದ್ದರೂ ಸನ್ನೆಗಳ., ಹಾವ ಬಾವಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಪ್ರಾಣಿಗಳಲ್ಲಿರುವಷ್ಟು ಪ್ರೀತಿ, ವಿಶ್ವಾಸ ಮನುಜನೆಂಬ ಪ್ರಾಣಿಯಲ್ಲಿ ಇಲ್ಲವೆಂಬದನ್ನು ಅನೇಕ ನಿದರ್ಶನಗಳು ಸಾಬೀತುಪಡಿಸಿವೆ. ಹಾಗಾಗಿ ಕೆಲವೊಂದು ಪ್ರಾಣಿಗಳನ್ನು ಮುದ್ದಾಗಿ ಮನೆಯೊಳಗಡೆ ಸಾಕಿ ಸಲಹುತ್ತಾರೆ. ಈ ಪೈಕಿ ಮುದ್ದಾದ ಬೆಕ್ಕು ಕೂಡ ಒಂದಾಗಿದೆ. ಈ ಮುದ್ದು ಪ್ರಾಣಿಯನ್ನು ರಕ್ಷಣೆ ಮಾಡಲು., ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಒಂದು ದಿನವನ್ನು ನಿಗದಿಪಡಿಸಲಾಗಿದೆ. ಇಂದು ಬೆಕ್ಕುಗಳ ದಿನವಾಗಿದೆ..!

‘ಮಿಯಾಂವ್., ಮಿಯಾಂವ್..’ ಈ ಕೂಗು ಕೇಳಿತೆಂದರೆ ಅಲ್ಲೆಲ್ಲೋ ಬೆಕ್ಕು ಇದೆ ಎಂಬದು ಅರಿವಾಗಿಬಿಡುತ್ತದೆ. ವಿಶ್ವದಲ್ಲೇ ಅತ್ಯಂತ ಪ್ರೀತಿ ಪೂರ್ವಕ, ಮುದ್ದಿನ ಸಾಕುಪ್ರಾಣಿಯೆಂದೇ ಹೇಳಲಾಗುವ ಬೆಕ್ಕು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಎಲ್ಲ ವರ್ಗದವರು ಸಲಹುವ ಮುದ್ದು ಪ್ರಾಣಿ ಇದಾಗಿದೆ. ಮನುಷ್ಯರೊಂದಿಗೆ ಹೆಚ್ಚಾಗಿ ಹೊಂದಿಕೊಳ್ಳುವ ಪ್ರಾಣಿಯಾಗಿದ್ದು, ಕೆಲವೊಂದು ಪ್ರಾಣಿಗಳೊಂದಿಗೂ ಒಡನಾಡಿಯಾಗಿರುತ್ತವೆ. ಹೊಟ್ಟೆಕಿಚ್ಚು ಕೂಡ ಇದಕ್ಕಿದ್ದು, ಇದನ್ನು ಮುದ್ದಾಡದೆ ಬೇರೆ ಪ್ರಾಣಿಗಳನ್ನೋ, ಮಕ್ಕಳನ್ನೋ ಮುದ್ದಾಡಿದರೆ ಸಿಟ್ಟು ಮಾಡಿಕೊಳ್ಳವದೂ ಇದೆ. ಸೋಮಾರಿ ಎಂಬ ಹೆಸರನ್ನೂ ಗಳಿಸಿರುವ ಈ ಬೆಕ್ಕು ಊಟ, ಹೊರಗಡೆ ಹೋಗುವ ಕ್ರಮಗಳು ಇಲ್ಲದೇ ಇದ್ದಿದ್ದರೆ ದಿನದ ೨೪ ಗಂಟೆಗಳೂ ನಿದ್ದೆ ಮಾಡುತ್ತಲೇ ಕಾಲ ಕಳೆಯುತ್ತಿತ್ತೇನೋ..!?

ಹಿಂದಿನ ಕಾಲದಲ್ಲಿ ಕೃಷಿಯೇ ಪ್ರಧಾನವಾಗಿದ್ದ ಕಾಲಘಟ್ಟದಲ್ಲಿ ಬೆಳೆದ ಧಾನ್ಯವನ್ನು ಮನೆಯೊಳಗಡೆ ಸಂಗ್ರಹಿಸಿಡಲಾಗುತ್ತಿತ್ತು. ಸುತ್ತಲೂ ಕಾಡುಗಳಿರುತ್ತಿದ್ದುದರಿಂದ ಇಲಿಗಳ ಕಾಟವೂ ಅಷ್ಟೇ ಇತ್ತು. ಹಾಗಾಗಿ ಇಲಿಗಳನ್ನು ಹಿಡಿಯಲೆಂದು ಬೆಕ್ಕುಗಳನ್ನು ಸಾಕಲು ಶುರುವಿಟ್ಟುಕೊಂಡಿದ್ದು ಬರಬರುತ್ತಾ ಅದೊಂದು ಹವ್ಯಾಸವೇ ಆಗಿಬಿಟ್ಟಿದೆ. ಕೆಲವರಿಗೆ ಬೆಕ್ಕು ಸಾಕುವದೇ ಕಾಯಕವಾಗಿದೆ. ಹಿಂದೆ ಒಂದೇ ತೆರನಾದ ಬೆಕ್ಕುಗಳು ಕಾಣ ಸಿಗುತ್ತಿತ್ತು. ಇದೀಗ ತಳಿಗಳ ಅಭಿವೃದ್ಧಿ ಮೂಲಕ ತರಾವರಿಯ ತಳಿಗಳ ಬೆಕ್ಕುಗಳಿದ್ದು, ಮೂಲ ತಳಿಯ ಬೆಕ್ಕಿಗೆ ‘ಕಂತ್ರಿ ಬೆಕ್ಕು’ ಎಂಬ ಹೆಸರು ಬಂದಿರುವದು ಮಾತ್ರ ಬೇಸರದ ಸಂಗತಿ..! ‘ಕ್ಲೋಡರ್’ ಎಂಬ ಗುಂಪಿಗೆ ಸೇರಿರುವ ಬೆಕ್ಕು ಮಾಂಸಾಹಾರಿ ಪ್ರಾಣಿ., ಹಾಲು ಇದರ ಇಷ್ಟವಾದ ಪೇಯ., ಕಳ್ಳಬೆಕ್ಕು ಎಂದು ಖ್ಯಾತಿಗಳಿಸಿರುವ ಈ ಮುದ್ದಿನ ಪ್ರಾಣಿ ಕದ್ದು ತಿನ್ನುವದು ಯಾರಿಗೂ ಗೊತ್ತಾಗುವದೇ ಇಲ್ಲ., ತನ್ನ ಮನೆ ಮಾತ್ರವಲ್ಲದೆ, ಬೇರೆಯವರ ಮನೆಗೆ ಸದ್ದಿಲ್ಲದೆ ಕನ್ನ ಹಾಕುವ ಚಾಣಾಕ್ಷತನ ಇದರಲ್ಲಿದೆ. ಅಲ್ಲದೆ ಪುಟಾಣಿ ಬೆಕ್ಕು ಮರಿಗಳ ಆಟಗಳು ನೋಡಲು ಸುಂದರವಾಗಿ ಮನಸ್ಸಿಗೆ ಮುದನೀಡುವಂತಿರುತ್ತದೆ. ಇವುಗಳನ್ನು ಮುದ್ದು ಮಾಡಿ., ಬುದ್ಧಿಹೇಳಿ ಸಾಕಿದರೆ ಮನೆ ಮಕ್ಕಳಂತೆ ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಜೀವಿಸುವ ಗುಣವನ್ನು ಇದು ಹೊಂದಿದೆ.

ದಿನದ ಮಹತ್ವ

ಬೆಕ್ಕುಗಳನ್ನು ರಕ್ಷಿಸುವ ಮತ್ತು ಸಹಾಯ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಒಂದು ದಿನವನ್ನು ವಿಶ್ವ ಬೆಕ್ಕು ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ

ಆಗಸ್ಟ್ ೮ ರಂದು ವಿಶ್ವ ಬೆಕ್ಕು

ದಿನವನ್ನು ಆಚರಿಸಲಾಗುತ್ತದೆ. ಈ

ದಿನವನ್ನು ಮೊದಲ ಬಾರಿಗೆ ೨೦೦೨ರಲ್ಲಿ

ಪ್ರಾಣಿ ಕಲ್ಯಾಣಕ್ಕಾಗಿ ಅಂತರರಾಷ್ಟಿçÃಯ ನಿಧಿ ಜಾರಿಗೊಳಿಸಿತು. ವಿಶ್ವದ ಅತಿದೊಡ್ಡ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ದತ್ತಿಗಳಲ್ಲಿ ಒಂದಾಗಿರುವ ಅಂತರರಾಷ್ಟಿçÃಯ ನಿಧಿ ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ನಂತರ ೨೦೨೦ ರಲ್ಲಿ ಅಂತರರಾಷ್ಟಿçÃಯ ಬೆಕ್ಕು ದಿನದ ರಕ್ಷಕತ್ವವನ್ನು ಲಾಭೋದ್ದೇಶವಿಲ್ಲದ ಬ್ರಿಟಿಷ್ ಸಂಸ್ಥೆ ಇಂಟರ್ನ್ಯಾಷನಲ್ ಕ್ಯಾಟ್ ಕೇರ್‌ಗೆ ಹಸ್ತಾಂತರ ಮಾಡಲಾಯಿತು. ಇದು ೧೯೫೮ ರಿಂದ ಪ್ರಪಂಚದಾದ್ಯAತ ಸಾಕು ಬೆಕ್ಕುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.

ಪೂಜಿಸುತ್ತಿದ್ದರು...!

ಭಾರತದಲ್ಲಿ ಬೆಕ್ಕುಗಳನ್ನು ಅಶುಭವೆಂದು ಪರಿಗಣಿಸುತ್ತಾರೆ. ಆದರೆ, ಜಪಾನ್, ಬ್ರಿಟನ್‌ನಂತಹ ದೇಶಗಳಲ್ಲಿ ಬೆಕ್ಕುಗಳನ್ನು ಮಂಗಳಕರವೆAದು ಪರಿಗಣಿಸಲಾಗುತ್ತದೆ. ಅಮೆರಿಕಾದಲ್ಲಿ ಬೆಕ್ಕುಗಳು ನಾಯಿಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ . ಪ್ರಾಚೀನ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಪೂಜಿಸಲಾಗುತ್ತಿತ್ತು ಎಂಬ ಅಂಶ ದಾಖಲೆಯಲ್ಲಿ ತಿಳಿದು ಬರುತ್ತದೆ. ಬೆಕ್ಕುಗಳು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಅವುಗಳಿಗೆ ಸಿಹಿತಿಂಡಿಗಳ ರುಚಿ ತಿಳಿದಿಲ್ಲ. ಬೆಕ್ಕುಗಳು ಮಾರ್ಜಾಲ ಎಂಬ ಬೆಕ್ಕು ಕುಟುಂಬದ ಕೊನೆಯ ಮತ್ತು ಅತ್ಯಂತ ಅದ್ಭುತವಾದ ಸದಸ್ಯನೆಂದು ಹೇಳಲಾಗುತ್ತಿದ್ದು, ಮನೆಗಳಲ್ಲಿ ವಾಸ ಮಾಡುತ್ತವೆ. ಹಿಂದೆಲ್ಲ ಒಂದು ಮನೆಯಿಂದ ಒಂದು ಬೆಕ್ಕು ಪಡೆದು ಕೊಂಡರೆ ಬದಲಿಗೆ ಒಂದು ಕೋಳಿಮರಿಯನ್ನು ಕೊಡಲಾಗುತ್ತಿತ್ತು., ನಂತರದಲ್ಲಿ ಇದು ನಾಲ್ಕಾಣೆ, ಎಂಟಾಣೆಯಿAದ ರೂಪಾಯಿಗೆ ತಿರುಗಿತು. ಇದೀಗ ಕೆಲವೊಂದು ತಳಿಗಳ ಬೆಕ್ಕುಗಳ ಬೆಲೆ ಸಾವಿರದಿಂದ ಲಕ್ಷದ ಸನಿಹಕ್ಕೆ ಏರಿದೆಯೆಂದರೆ ಬೆಕ್ಕಿನ ಮಹತ್ವ ಎಂತದ್ದೆAದು ತಿಳಿಯಬಹುದು.

‘ಮರಿ ಹಾಕಿದ ತಾಯಿ ಬೆಕ್ಕು ತನ್ನ ಮರಿಗಳನ್ನು ರಕ್ಷಿಸುವ ಸಲುವಾಗಿ