ನಿರಂತರ ಪುಸ್ತಕ ಓದುವಿಕೆ ಒಂದು ಮೌನಕ್ರಾಂತಿ. ಮನಸ್ಸು ತಿಳಿಯಾಗಿಸಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಓದು ಸಹಕಾರಿ. ಇಂದು ರಾಷ್ಟಿçÃಯ ಪುಸ್ತಕ ಪ್ರೇಮಿಗಳ ದಿನ.

ಕೇವಲ ೬ ನಿಮಿಷಗಳ ಓದುವಿಕೆ ಶೇ. ೬೮ ರಷ್ಟು ಒತ್ತಡ ನಿವಾರಣೆಗೆ ಸಹಕಾರಿ ಎಂಬುದು ಸಸ್ಸೆಕ್ಸ್ ವಿಶ್ವವಿದ್ಯಾಲಯದ ಅಧ್ಯಯನವೊಂದರ ವರದಿ. ಪುಸ್ತಕಗಳ ಓದುವಿಕೆ ಮನಸ್ಸು ಹಗುರಾಗಿಸಿ, ಸಹನೆಯನ್ನು ರೂಢಿಸುತ್ತದೆ.

ಓದುವ ಪ್ರವೃತ್ತಿ ಬೆಳೆಸಿಕೊಂಡವರು ಜೀವನಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತಾರೆ. ಕ್ಲಿಷ್ಟಕರ ಸನ್ನಿವೇಶಗಳನ್ನೂ ಯಶಸ್ವಿಯಾಗಿ ನಿಭಾಯಿಸಿ ಪಾರಾಗಬಲ್ಲರು. ಬಾಲ್ಯದಿಂದಲೂ ಓದುವ ಹವ್ಯಾಸ ಮನೆಮಾಡಿದರೆ ಮರೆಗುಳಿತನವೂ ದೂರಾಗುವುದು.

ನಿರಂತರ ಓದುವಿಕೆಯಿಂದ ಜ್ಞಾಪಕಶಕ್ತಿ ವೃದ್ಧಿಸುವುದು. ಓದು ರಾತ್ರಿ ಹಾಯಾದ ನಿದ್ರೆಗೆ ಸೋಪಾನ. ಮೆದುಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದು. ಓದುವ ಪ್ರವೃತ್ತಿಯಿಂದ ಮಾತು ಕಡಿಮೆ, ಇತರರ ಮಾತುಗಳನ್ನು ಸಹನೆಯಿಂದ ಆಲಿಸುವ ಪ್ರವೃತ್ತಿ ಬೆಳೆದು, ಸಮಾಜವನ್ನು ಹೊಸ ದೃಷ್ಟಿಕೋನದಿಂದ ನೋಡುವ, ಮುಕ್ತ ಆಲೋಚನೆಗಳೊಂದಿಗೆ ಸಮಾಜಮುಖಿಯಾಗಿ ಬೆರೆಯುವ ಪ್ರವೃತ್ತಿ ಬೆಳೆಯುತ್ತದೆ. ಉತ್ತಮ ಓದುಗರು, ಉತ್ತಮ ಜೀವನ ಸಂಗಾತಿಗಳೂ ಆಗಬಲ್ಲರು.

ಪುಸ್ತಕಗಳು ನೀಡುವ ಸುಖ ಓದುಗನಿಗೆ ಮಾತ್ರ ವೇದ್ಯ. ‘ನಾನು ಸ್ವರ್ಗ ಹೇಗಿರುತ್ತದೆ ಎಂದು ಕಲ್ಪಿಸಿದಾಗ, ಅದೊಂದು ಪುಸ್ತಕಾಲಯದಂತೆ ಕಾಣಿಸುತ್ತದೆ’ ಎಂಬುದು ಜಾರ್ಜ್ ಲೂಯಿಸ್ ಬೋರ್ಜನ್ ನುಡಿಗಳು.

ಸ್ಮಾರ್ಟ್ಫೋನ್ ಬದಿಗಿರಿಸಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ತುಸು ನೆಮ್ಮದಿ ಪಡೆಯಬಹುದು. ‘ಒಮ್ಮೆ ಓದಲು ಕಲಿತರೆ, ನೀವು ಎಂದೆAದಿಗೂ ಮುಕ್ತರಾದಂತೆ’ ಇದು ಫ್ರೆಡರಿಕ್ ಡಗ್ಲಸ್ ಅವರ ಅನುಭವದ ಮಾತು.

‘ಪುಸ್ತಕ ಪ್ರೇಮಿ ಅಲ್ಲದವನು ಹಣವಿದ್ದರೂ ಬಡವ’ ಎಂಬ ಲಾಂಗ್‌ಫರ್ಡ್ ಮಾತುಗಳು ಮತ್ತು ‘ಪುಸ್ತಕಗಳು ಮನುಷ್ಯರು ಬರಲಿರುವ ಪೀಳಿಗೆಗೆ ನಾವು ಕೊಡುವ ಕಾಣಿಕೆ, ಬಿಡುವ ಆಸ್ತಿ’ ಎಂಬ ಅಡಿಸನ್ ನುಡಿಗಳು ಅರ್ಥಗರ್ಭಿತವಾಗಿವೆ.

‘ಒಬ್ಬ ನೈಜ ಓದುಗ, ಸಾವಿರ ಜೀವನ ನಿರ್ವಹಿಸಿದ ಅನುಭವ ಪಡೆಯುತ್ತಾನೆ. ಓದುವ ಹವ್ಯಾಸವಿಲ್ಲದವನು, ಒಂದೇ ಬಾರಿ ಜೀವಿಸುತ್ತಾನೆ’ ಎಂದು ಅಮೇರಿಕಾದ ಕಾದಂಬರಿಕಾರ ಜಾರ್ಜ್ ಮಾರ್ಟಿನ್ ಹೇಳಿರುವುದು, ಓದುವಿಕೆ ನೀಡುವ ಜೀವನಾನುಭನಕ್ಕೆ ಕನ್ನಡಿ ಹಿಡಿಯುತ್ತದೆ. ‘ಓದುಗರ ಬಳಗವನ್ನೊಮ್ಮೆ ತೋರಿಸಿಬಿಡಿ. ವಿಶ್ವ ಪರ್ಯಟನೆ ಮಾಡಿರವರನ್ನು ತೋರುವೆ’ ಎಂದಿದ್ದಾರೆ ನೆಪೋಲಿಯನ್ ಬೋನಾಪರ್ಟೆ.

ಜೀವನ ಜಂಜಾಟದಲ್ಲಿ ಸಿಲುಕಿ ಬಸವಳಿದಿದ್ದರೆ, ಉತ್ತನ ಗೆಳೆಯ -ಗೆಳತಿ, ಬಂಧು-ಬಳಗ, ಸಂಗಾತಿ ಇಲ್ಲವೆಂದು ಪರಿತಪಿಸುತ್ತಿದ್ದರೆ, ಒಂದು ಪುಸ್ತಕವನ್ನು ಕೈಗೆತ್ತಿಕೊಂಡುಬಿಡಿ. ಒಂಟಿತನದ ಅನುಭವವಾಗುತ್ತಿದ್ದರೆ, ಉತ್ತಮ ಕೃತಿಯ ಹಾಳೆಗಳನ್ನೊಮ್ಮೆ ತಿರುಗಿಬಿಡಿ. ಓದು ನಿಮ್ಮ ಉತ್ತಮ ಸಂಗಾತಿಯಾಗಬಹುದು. ತಡವೇಕೆ? ಒಮ್ಮೆ ಪ್ರಯತ್ನಿಸಿ ನೋಡಿ!

‘ನಮ್ಮ ಅಂತರAಗದ ಪುಸ್ತಕ ತೆರೆಯುವವರೆಗೆ, ಉಳಿದ ಪುಸ್ತಕಗಳು ಉಪಯೋಗಕ್ಕೆ ಬಾರವು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ತೆರೆದ ಮನದೊಂದಿಗೆ ಉತ್ತಮ ಕೃತಿಗಳ ಓದುವಿಕೆ ಬದುಕು ಹಸನಾಗಿಸಬಲ್ಲದು.

‘ದಿನಕೊಮ್ಮೆ ಗ್ರಂಥಾಲಯಕ್ಕೆ ಭೇಟಿ ನೀಡಿದರೆ ನಿಮಗಿರುವ ವಿಚಾರಶಕ್ತಿಯ ಚೈತನ್ಯ ವ್ಯಕ್ತವಾಗುವುದು’ ಎಂಬುದು ಡಾ. ಮಸ್ತಫಾ ಸ್ಸಬಾಯ್ ಅವರ ನುಡಿಗಳಾದರೆ ‘ಪುಸ್ತಕ ಭಂಡಾರವೇ ನಿಜವಾದ ವಿಶ್ವವಿದ್ಯಾಲಯ’ ಎಂದಿದ್ದಾರೆ ಥಾಮಸ್ ಕಾರ್ಲೈಲ್.

ನಾವು ಉತ್ತಮ ಕೃತಿಗಳನ್ನೋದುವುದರ ಜೊತೆಗೆ ಮಕ್ಕಳಲ್ಲೂ ಓದುವ ಪ್ರವೃತ್ತಿ ಬೆಳೆಸಲು ಶ್ರಮಿಸೋಣ. ‘ನೀವು ಓದದೇ ಇರುವ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಡಿ’ ಎಂದಿದ್ದಾರೆ ಜಾರ್ಜ್ ಬರ್ನಾಡ್ ಶಾ. ನಾವೂ ಪುಸ್ತಕಗಳನ್ನೋದಿ, ಇತರರನ್ನೂ ಓದಲು ಪ್ರೇರೇಪಿಸೋಣ. ರಾಷ್ಟಿçÃಯ ಪುಸ್ತಕ ಪ್ರೇಮಿಗಳ ದಿನ ಅರ್ಥಪೂರ್ಣ ವಾಗಿಸೋಣ.

(ಸಂಗ್ರಹ)

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.