ಸೋಮವಾರಪೇಟೆ, ಆ. ೮: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ-೧೮ರ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.
ಔಷಧೀಯ ಗುಣಗಳುಳ್ಳ ಮಧುಬಾನ ಸೊಪ್ಪಿನ ಪಾಯಸವನ್ನು ಸೇವಿಸಿದರು. ಕೊಡಗಿನಲ್ಲಿ ಆಟಿ ಹಬ್ಬದ ವಿಶೇಷತೆಯ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಜರಿದ್ದರು.