ವೀರಾಜಪೇಟೆ, ಆ. ೭: ಮೀನುಪೇಟೆ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ನಡೆದ ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶ ನಾಡಹಬ್ಬ ಒಕ್ಕೂಟದ ಸಭೆ ಅಧ್ಯಕ್ಷ ಬಿ.ಜೆ. ಸಾಯಿನಾಥ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಜೆ. ಸಾಯಿನಾಥ್ ನಾಯ್ಕ್, ಗೌರವ ಅಧ್ಯಕ್ಷರಾಗಿ ಎಸ್.ಆರ್. ಜಗದೀಶ್ ಹಾಗೂ ಗೋಪಾಲಕೃಷ್ಣ ಕಾಮತ್, ಉಪಾಧ್ಯಕ್ಷರಾಗಿ ಎಂ.ಎಸ್ ಸನ್ನಿ ಕಾರ್ಯಪ್ಪ. ಕೇಶವ ಕುಮಾರ್, ರಾಜಪ್ಪ, ಪ್ರಧಾನ ಕಾರ್ಯದರ್ಶಿ ರಜನಿಕಾಂತ್, ಸಹ ಕಾರ್ಯದರ್ಶಿ ಸುಮೇಶ್, ಬೊಯಿಕೇರಿ ಮನೋಹರ, ಲವ ಕುಕ್ಲೂರು, ಖಜಾಂಚಿ ಟಿ.ಎಸ್. ಶ್ರೀಕಾಂತ್,
(ಮೊದಲ ಪುಟದಿಂದ) ಕಾನೂನು ಸಲಹೆಗಾರರಾಗಿ ಟಿ.ಪಿ ಕೃಷ್ಣ, ಗೌರವ ಸಲಹೆಗಾರರಾಗಿ ಪಿ.ಎಸ್. ಮನೋಜ್ ಕುಮಾರ್, ಪ್ರದೀಪ್ ರೈ, ಅನಿಲ್ ಮಂದಣ್ಣ, ಸತೀಶ್, ಭರತ್, ಸಚೀಂದ್ರ, ಕೂತಂಡ ಸಚಿನ್, ವಿವೇಕ್ ರೈ, ಪ್ರಚಾರ ಸಮಿತಿಗೆ ಯುವರಾಜ್ ಕೃಷ್ಣ ಆಯ್ಕೆಯಾದರು.
ಈ ಸಂದರ್ಭದಲ್ಲಿ ವೀರಾಜಪೇಟೆಯ ೨೨ ಗಣೇಶ ಉತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.