ಮಡಿಕೇರಿ, ಆ. ೭: ಸಾಕುನಾಯಿಗಳು ಕಚ್ಚಿ ಅಕ್ಕ ಹಾಗೂ ತಮ್ಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ.
ಮುಕ್ಕೋಡ್ಲುವಿನ ಪೂವಮ್ಮ (೫೭) ಎಂಬವರು ತಾ. ೨ ರಂದು ಬೆಳಿಗ್ಗೆ ಸಮೀಪದ ಬಾಣೆಯಲ್ಲಿ ಹಸುಕಟ್ಟಿ ಬರುವ ಸಂದರ್ಭ ಅದೇ ಗ್ರಾಮದ ಪಟ್ಟು ಕಾರ್ಯಪ್ಪ ಅವರಿಗೆ ಸೇರಿದ ೭ ನಾಯಿಗಳು ಏಕಾಏಕಿ ಅಟ್ಟಾಡಿಸಿಕೊಂಡು ಹೋಗಿ ಕಚ್ಚಿವೆ. ಇದರಿಂದ ಗಂಭೀರ ಗಾಯಗೊಂಡ ಪೂವಮ್ಮ ಸುಳ್ಯದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಕ್ಕೋಡ್ಲಿನಲ್ಲಿಯೇ ನೆಲೆಸಿರುವ ಪೂವಮ್ಮ ಅವರ ತಮ್ಮ ಮಂದಣ್ಣ (೫೨) ಮರುದಿನ ಹಸುವನ್ನು ಕಟ್ಟಲೆಂದು ತೆರಳಿದ
(ಮೊದಲ ಪುಟದಿಂದ) ಸಂದರ್ಭ ಅದೇ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಪರಿಣಾಮ ಗಂಭೀರಗೊAಡಿರುವ ಮಂದಣ್ಣ ಅವರನ್ನು ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಗಾಯಾಳುಗಳ ಅಕ್ಕ ಕದನೂರು ಗ್ರಾಮದಲ್ಲಿ ನೆಲೆಸಿರುವ ಎ.ಪಿ. ಜಾಜಿ ಮಡಿಕೇರಿ ಗ್ರಾಮಾಂತರ ಠಾಣೆಗೆ ಈ ಸಂಬAಧ ದೂರು ನೀಡಿದ್ದು, ಬೇಕೆಂದೇ ನಾಯಿಗಳನ್ನು ಬಿಟ್ಟು ಕಚ್ಚಿಸಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಗಾಯಾಳುಗಳ ಅಕ್ಕ ಜಾಜಿ ಈ ಬಗ್ಗೆ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಇದೇ ನಾಯಿ ಪೂವಮ್ಮರನ್ನು ಕಚ್ಚಿತ್ತು. ಇದೀಗ ಮತ್ತೆ ದಾಳಿಯಾಗಿದೆ. ತಮ್ಮನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ನಾಯಿಗಳು ಕೈಭಾಗವನ್ನು ಕಚ್ಚಿ ಸೀಳಿರುವುದರಿಂದ ಕೈಯನ್ನು ಕತ್ತರಿಸಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಪೂವಮ್ಮರ ಸ್ಥಿತಿ ಕೂಡ ಗಂಭೀರವಾಗಿದ್ದು, ದೇಹವಿಡಿ ಗಾಯಗಳಾಗಿ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.