ಕೂಡಿಗೆ, ಆ. ೭: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವುದು ಮತ್ತು ತಡೆಗೋಡೆ ನಿರ್ಮಾಣ ಮಾಡುವ ವಿವಿಧ ಸ್ಥಳಗಳಿಗೆ ಕಾವೇರಿ ನೀರಾವರಿ ಹೂಳು ತೆಗೆಯುವುದು ಮತ್ತು ತಡೆಗೋಡೆ ನಿರ್ಮಾಣ ಮಾಡುವ ವಿವಿಧ ಸ್ಥಳಗಳಿಗೆ ಕಾವೇರಿ ನೀರಾವರಿ ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದ ಪ್ರವಾಹದ ಸಂದರ್ಭದಲ್ಲಿ ಆದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸುಭದ್ರವಾದ ತಡೆಗೋಡೆ ಮತ್ತು ಕಿರು ಸೇತುವೆ, ಹಿನ್ನೀರಿನಲ್ಲಿ ಹೂಳೆತ್ತಲು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಮತ್ತು
ನೀಲಿ ನಕ್ಷೆಯನ್ನು ತಯಾರಿಸುವ ಸಂಬAಧ ಕಳೆದ ನಾಲ್ಕು
ದಿನಗಳಿಂದ ಬೆಳಗಾವಿಯ ಜಿಲ್ಲೆಯ ಲ್ಲಿರುವ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಹ್ರೆöÊಡ್ರೋಲಾಜಿಯ ನೀರು ಮತ್ತು ಮಣ್ಣಿನ ವಿಷಯಕ್ಕೆ ಸಂಬAಧಿಸಿದ ರಾಷ್ಟಿçÃಯ ಅಧ್ಯಯದ ತಂಡದ ವಿಜ್ಞಾನಿಗಳಾದ ಡಾ. ವೆಂಕಟೇಶ್, ಡಾ. ಅವಿನಾಶ್, ಹಾರಂಗಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕೆ.ಕೆ. ರಘುಪತಿ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಪುಟ್ಟಸ್ವಾಮಿ, ಇಂಜಿನಿಯರ್ ಸಿದ್ದರಾಜು ತಂಡ ವಿವಿಧ ಸ್ಥಳಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳಿಗೆ ಸಂಬAಧಿಸಿದAತೆ ನೀಲಿ ನಕ್ಷೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಮಕ್ಕAದೂರು, ಹಟ್ಟಿಹೊಳೆ, ಹಾರಂಗಿಯ
(ಮೊದಲ ಪುಟದಿಂದ) ಹಿನ್ನೀರಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ತಂಡ ಮಾಹಿತಿಯನ್ನು ಪಡೆದುಕೊಂಡು ರಾಜ್ಯಮಟ್ಟದ ನೀರಾವರಿ ಇಲಾಖೆಗೆ ವರದಿ ನೀಡಲಿದೆ. ಮುಂದಿನ ಯೋಜನೆಯನ್ನು ಹಂತಹAತವಾಗಿ ಕೈಗೊಳ್ಳುವುದು ಎಂದು ಅಭಿಯಂತರ ಕೆ.ಕೆ. ರಘುಪತಿ ತಿಳಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಹೂಳು ಎತ್ತುವಿಕೆ, ತಡೆಗೋಡೆ, ಕಿರು ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ರೂ. ೧೩೦ ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದೆ. ಈಗಾಗಲೇ ಮಹಾರಾಷ್ಟçದ ಕಂಪನಿ ಟೆಂಡರ್ ಪಡೆದಿದೆ. ಎಲ್ಲಾ ಪ್ರಕ್ರಿಯೆಯು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಅಣೆಕಟ್ಟೆಯು ಭರ್ತಿಯಾಗಿದ್ದು, ನೀರಿನ ಮಟ್ಟ ಕಡಿಮೆಯಾದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರ ಕೆ.ಕೆ. ರಘುಪತಿ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ