ಗುಡ್ಡೆಹೊಸೂರು, ಆ. ೭: ವಾಲ್ನೂರು ತ್ಯಾಗತ್ತೂರು ಗ್ರಾ. ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಂಜುಳ, ಉಪಾಧ್ಯಕ್ಷರಾಗಿ ಮಹೇಶ್ಚಂದ್ರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆಯೂ ಇಲ್ಲಿಯ ಅಡಳಿತ ಮಂಡಳಿ ಬಿ.ಜೆ.ಪಿ ಪಕ್ಷದಾಗಿತ್ತು. ಚುನಾವಣಾಧಿಕಾರಿಯಾಗಿ ಮೀನುಗಾರಿಕಾ ಸಹಾಯಕ ಅಭಿವೃದ್ಧಿ ಅಧಿಕಾರಿ ಸಚಿನ್ ಆಗಮಿಸಿದ್ದರು. ಪಿ.ಡಿ.ಓ. ಲೊಕೇಶ್, ಪಂಚಾಯ್ತಿ ಸದಸ್ಯರು ಹಾಜರಿದ್ದರು.