ಮಡಿಕೇರಿ, ಆ. ೬: ಅಪಘಾತ ಗಳಲ್ಲಿ ಕಾಲು ಕಳೆದುಕೊಂಡವರಿಗೆ, ಹುಟ್ಟಿನಿಂದಲೇ ಕಾಲಿನಲ್ಲ್ಲಿ ಸ್ವಾಧೀನ ಕಳೆದುಕೊಂಡಿದ್ದ ಅಥವಾ ಇನ್ನಾವುದಾದರೂ ಕಾರಣಗಳಿಗೆ ಚಲಿಸಲಸಾಧ್ಯವಿರುವ ವ್ಯಕ್ತಿಗಳಿಗೆ ಬದುಕಿನಲ್ಲಿ ಭರವಸೆ ತುಂಬುವು ಪ್ರಾಯೋಗಿಕ ಕಾರ್ಯವನ್ನು ಕೊಯಮತ್ತೂರಿನ ರೋಟರಿ ಮಿಡ್‌ಟೌನ್ ಸಂಸ್ಥೆ ಮಾಡುತ್ತಿದ್ದು, ಕೇವಲ ಕೊಯಮತ್ತೂರಿಗೆ ಮಾತ್ರ ಸೀಮಿತವಾಗದೆ, ೫೦ ವರ್ಷಗಳ ಹಿಂದೆ ಪ್ರಾರಂಭವಾದ, ಇದೀಗ ೮೦ ಸದಸ್ಯರನ್ನು ಒಳಗೊಂಡಿರುವ ಈ ಸಂಸ್ಥೆಯು ಹೊರಜಿಲ್ಲೆ, ರಾಜ್ಯ ಹಾಗೂ ಹೊರದೇಶಗಳಲ್ಲಿಯೂ ತನ್ನ ಸಮಾಜ ಸೇವೆಯನ್ನು ವಿಸ್ತರಿಸಿದೆ. ಕೊಡಗು ಜಿಲ್ಲೆಯೂ ಈ ಸೇವೆಯ ಫಲಾನುಭವಿಯಾಗಿದ್ದು ಕಳೆದ ಕೆಲವು ವರ್ಷಗಳಿಂದ ಸಂಸ್ಥೆಯು ಜಿಲ್ಲೆಯಲ್ಲಿ ನಡೆಸಿರುವ ೪ ಶಿಬಿರಗಳಲ್ಲಿ ೨೫೦ ಸಾರ್ವಜನಿಕರು ಕೃತಕ ಕಾಲುಗಳನ್ನು ಪಡೆದು ಮತ್ತೇ ಚಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ರೋಟರಿ ಸಂಸ್ಥೆ ಕೂಡ ಇವರಿಗೆ ಸಾಥ್ ನೀಡಿದ್ದು, ಸುಂಟಿಕೊಪ್ಪ ಸ್ವಸ್ಥ ಪುನರ್ವಸತಿ ಕೇಂದ್ರದಲ್ಲಿ ಕಳೆದ ೨ ಶಿಬಿರಗಳನ್ನು ಆಯೋಜಿಸಿದ್ದು, ಫಲಾನುಭವಿಗಳ ಆಯ್ಕೆಯು ಪುನರ್ವಸತಿ ಕೇಂದ್ರದ ಮೂಲಕವೇ ನಡೆಯುತ್ತಿದೆ.

‘ಆರ್ಟಿಫಿಷಿಯಲ್ ಲಿಂಬ್ಸ್ ಆನ್ ವ್ಹೀಲ್ಸ್’

೧೯೯೦ ರಲ್ಲಿ ಕೃತಕ ಕಾಲು ಜೋಡಣೆ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಗುರುತಿಸುತ್ತಿದ್ದ ರೋಟರಿ ಸಂಸ್ಥೆ ಫಲಾನುಭವಿಗಳಿಗೆ ಅಗತ್ಯವಿರುವ ಕೃತಕ ಕಾಲು ಒದಗಿಸಲು ಅಳತೆ ಪಡೆದು ೧ ವಾರಗಳ ಕಾಲ ಅವರುಗಳ ಮೇಲೆ ನಿಗಾ ಇಡುತ್ತಿತ್ತು. ಆದರಿದೀಗ ೨,೦೦೦ ಇಸವಿ ಬಳಿಕ ಆರ್ಟಿಫಿಷಿಯಲ್ ಲಿಂಬ್ಸ್ ಆನ್ ವ್ಹೀಲ್ಸ್ ಮೂಲಕ ಸ್ಥಳದಲ್ಲಿಯೇ ಅಳತೆ ತೆಗೆದು ಅಲ್ಲಿಯೇ ಕಾಲು ತಯಾರಿಸುವ ಸಾಮರ್ಥ್ಯ ವಾಹನವೊಂದಕ್ಕಿದೆ. ಈ ವಾಹನದಲ್ಲಿ ಕೃತಕ ಕಾಲುಗಳಿಗೆ ಅಗತ್ಯವಿರುವ ಸಾಮಗ್ರಿಗಳಿರಲಿದ್ದು, ವಿದ್ಯುತ್ ಅಗತ್ಯವಿದೆ. ಅಳತೆ ತೆಗೆದ ಬಳಿಕ ಅಲ್ಲಿಯೇ ಜೋಡಣೆ ಮಾಡುವ ಸಾಮರ್ಥ್ಯವನ್ನು ವಾಹನ ಹೊಂದಿದೆ ಎಂಬುದಾಗಿ ಯೋಜನೆಯ ಪ್ರಮುಖ ರೋಟರಿ ಮಿಡ್‌ಟೌನ್ ಅಧ್ಯಕ್ಷ ಬಾಬು ಕಣ್ಣನ್ ಮಾಹಿತಿ ಇತ್ತಿದ್ದಾರೆ.

ಸಂಸ್ಥೆಯಿAದಲೇ ಕೃತಕ ಕಾಲು ತಯಾರಿಕೆ

ಕೊಯಮತ್ತೂರು ರೋಟರಿಯು ಕೊಯಮತ್ತೂರಿನಲ್ಲಿ ಕೃತಕ ಕಾಲು ತಯಾರಿಕಾ ಕೇಂದ್ರವನ್ನೂ ನಡೆಸುತ್ತಿದ್ದು, ಅಲ್ಲಿಯೇ ಫಲಾನುಭವಿಗಳಿಗೆ ಅಗತ್ಯವಿರುವ ಕೃತಕ ಕಾಲುಗಳನ್ನು ತಯಾರಿಸುತ್ತಿದೆ. ಇಲ್ಲಿ ತಯಾರಿಸಲಾದ ಕಾಲುಗಳನ್ನು ಹೊರಜಿಲ್ಲೆ, ರಾಜ್ಯ ಹಾಗೂ ರಾಷ್ಟçಗಳ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಗೆ ಅಗತ್ಯವಿರುವ ಕೃತಕ ಕಾಲುಗಳ ಅಳತೆಯನ್ನು ಪಡೆದು ಬಳಿಕ ಶಿಬರಗಳನ್ನು ಆಯೋಜಿಸಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವು ದಾಗಿ ಸಂಸ್ಥೆಯ ಸದಸ್ಯ ಬದ್ರಿನಾಥ್ ಅವರು ಮಾಹಿತಿ ಇತ್ತಿದ್ದಾರೆ.

೨೦,೦೦೦ ಕ್ಕೂ ಅಧಿಕ ಕಾಲುಗಳು

ರೋಟರಿ ಕೊಯಮತ್ತೂರು ಮಿಡ್‌ಟೌನ್ ಭಾರತದಲ್ಲಿ ೨೦,೦೦೦ ಹಾಗೂ ಪ್ರುಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್ ಸೇರಿದಂತೆ ವಿದೇಶಗಳಲ್ಲಿ ಸುಮಾರು ೪,೦೦೦ ಕೃತಕ ಕಾಲುಗಳನ್ನು ಫಲಾನುಭವಿಗಳಿಗೆ ವಿತರಿಸಿದೆ. ಪ್ರಸ್ತುತ, ಯೋಜನೆಯ ತಾಂತ್ರಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಶಂಕರ್ ಸುಬ್ಬ ಅವರು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೭,೦೦೦ ಕೃತಕ ಕಾಲುಗಳನ್ನು ತಯಾರಿಸಿದ್ದಾರೆ. ಮಂಡಿ ಕೆಳಗಿನ ಭಾಗದ ಕೃತಕ ಕಾಲಿಗೆ ರೂ.೩,೫೦೦ ಹಾಗೂ ಮಂಡಿಯ ಮೇಲ್ಭಾಗವೂ ಸೇರಿದ್ದರೆ ರೂ.೮,೦೦೦ ದಷ್ಟು ವೆಚ್ಚವಾಗುತ್ತದೆ. ರೋಟರಿ ಅಂತರರಾಷ್ಟಿçÃಯ ಗ್ರಾಂಟ್‌ಅನ್ನು ಬಳಸಿಯು ಯೋಜನೆಗೆ ಅಗತ್ಯವಿರುವ ಆರ್ಥಿಕ ವೆಚ್ಚವನ್ನು ಭರಿಸಲಾಗುತ್ತಿದೆ. ‘ಹೈ ಡೆನ್ಸಿಟಿ ಪಾಲಿಈತೈಲೀನ್’ ಮೂಲಕ ಕಾಲು ತಯಾರಿಸಲಾಗುತ್ತಿದ್ದು, ನೀರಿನಲ್ಲಿಯೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದಾಗಿ ಬಾಬು ಕಣ್ಣನ್ ಅವರು ತಿಳಿಸಿದ್ದಾರೆ.

ಸ್ವಸ್ಥ ಕೇಂದ್ರದ ಮೂಲಕ ಜಿಲ್ಲೆಯಲ್ಲಿರುವ ಅರ್ಹ ಫಲಾನು ಭವಿಗಳನ್ನು ಕಳೆದ ಕೆಲ ವರ್ಷಗಳಿಂದ ಆಯ್ಕೆ ಮಾಡಲಾಗುತ್ತಿದೆ. ಉಚಿತವಾಗಿ ಕೃತಕ ಕಾಲುಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವ ರೋಟರಿಯ ಸೇವೆ ಶ್ಲಾಘನೀಯ ಎಂದು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಅಭಿಪ್ರಾಯಿಸಿದ್ದಾರೆ. ಕೊಡಗಿನಲ್ಲಿ ಯಾರಿಗಾದರೂ ಕೃತಕ ಕಾಲಿನ ಅವಶ್ಯ ಕತೆ ಇದ್ದಲ್ಲಿ ತಮ್ಮನ್ನು ಸಂಪರ್ಕಿಸು ವಂತೆಯೂ ಅವರು ಕೋರಿದ್ದಾರೆ.

ತಾ.೫ರಂದು ನಡೆದ

ಜೋಡಣಾ ಕಾರ್ಯ

ಸುಂಟಿಕೊಪ್ಪ ಸ್ವಸ್ಥ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ೭ ಮಂದಿಗೆ ಕೃತಕ ಕಾಲುಗಳ ಜೋಡಣೆ ಕಾರ್ಯ ನಡೆಯಿತು. ಕೂರ್ಗ್ ಫೌಂಡೇಶನ್ ನೇತೃತ್ವದ ಸ್ವಸ್ಥ ಕೇಂದ್ರ, ಕೊಯ ಮತ್ತೂರು ಹಾಗೂ ಕುಶಾಲನಗರ ರೋಟರಿ, ಆಶ್ರಯದಲ್ಲಿ ಸಮುದಾಯ ಆಧಾರಿತ ಪುನರ್ವಸತಿ ಮತ್ತು ಕುಶಾಲನಗರ ಸುದ್ದಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ೭ ಮಂದಿ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಹಾಗೂ ಮೂರು ಮಂದಿ ಅಂಗ ವೈಕಲ್ಯ ಹೊಂದಿರುವವರನ್ನು ತಂತ್ರಜ್ಞರಾದ ಸುಬ್ಬು ಅವರು ತಪಾಸಣೆ ನಡೆಸಿದರು.

ಕೊಯಮತ್ತೂರಿನ ರೋಟರಿ ಮಿಡ್‌ಟೌನ್ ಸಂಸ್ಥೆಯಿAದ ಆಗಮಿಸಿದ್ದ ಬಾಬು ಕಣ್ಣನ್, ಬದರಿನಾಥ್ ಹಾಗೂ ತಂತ್ರಜ್ಞರ ತಂಡ ಕಾಲು ಜೋಡಣೆ ಶಿಬಿರದ ನೇತೃತ್ವ ವಹಿಸಿದ್ದರು. ಕುಶಾಲನಗರ, ಸುಂಟಿಕೊಪ್ಪ, ಕುಟ್ಟ ಮಡಿಕೇರಿ ಮತ್ತಿತರ ಕಡೆಗಳ ಏಳು ಮಂದಿ ಫಲಾನುಭವಿಗಳಿಗೆ ಕಾಲು ಜೋಡಣೆ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭ ಮಾತನಾಡಿದ ಕುಶಾಲನಗರ ರೋಟರಿ ಸಂಸ್ಥೆಯ ಎಸ್ ಕೆ ಸತೀಶ್, ಕೊಯಮತ್ತೂರು ಮತ್ತು ಕುಶಾಲನಗರ ರೋಟರಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಳೆದ ಕೆಲವು ವರ್ಷಗಳ ಕಾಲ ಕೃತಕ ಕಾಲು ಜೋಡಣೆ ಯೋಜನೆಗಳನ್ನು ನಡೆಸಲಾಗಿತ್ತು. ಸ್ವಸ್ಥ ಕೇಂದ್ರದ ಸಹಕಾರದೊಂದಿಗೆ ಯೋಜನೆ ಮುಂದುವರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಸಂಸ್ಥೆಯ ಮೂಲಕ ಸಹಕಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಈ ಯೋಜನೆಗಳಿಗೆ ಕೇಂದ್ರದ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸ್ವಸ್ಥ ಕೇಂದ್ರದ ಆರತಿ ಸೋಮಯ್ಯ ಅವರು ಹೇಳಿದರು. ಈ ಸಂದರ್ಭ ಕೂರ್ಗ್ ಫೌಂಡೇಶನ್ ಹಾಗೂ ಸ್ವಸ್ಥ ಕೇಂದ್ರದ ಪ್ರಮುಖರಾದ ಆರತಿ ಸೋಮಯ್ಯ, ಗಂಗಾ ಚಂಗಪ್ಪ, ಕುಶಾಲನಗರ ರೋಟರಿ ಅಧ್ಯಕ್ಷರಾದ ಸುನಿತಾ ಮಹೇಶ್, ಕಾರ್ಯದರ್ಶಿ ಶರ್ಲಿ ಸಂತೋಷ್, ರೋಟರಿ ಪ್ರಮುಖರಾದ ಎಸ್.ಕೆ. ಸತೀಶ್, ಎ. ಎ. ಚೆಂಗಪ್ಪ, ಶೋಭಾ ಸತೀಶ್, ಸುದ್ದಿ ಸಂಸ್ಥೆಯ ಪ್ರಮುಖರಾದ ವನಿತಾ ಚಂದ್ರ ಮೋಹನ್, ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಸಂಯೋಜಕರಾದ ಮುರುಗೇಶ್ ಮತ್ತಿತರರು ಇದ್ದರು.