ಮಡಿಕೇರಿ, ಆ. ೭: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಟಾರ್ಪಲ್, ಮಾಸ್ಕ್, ಕಿಟ್‌ಗಳನ್ನು ನೀಡಲಾಯಿತು.

ಸಂಸ್ಥೆಯ ಸಭಾಂಗಣದಲ್ಲಿ ಜರು ಗಿದ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಶಿಕ್ಷಣ ಸಂಸ್ಥೆಯ ಅರ್ಹ ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಮನೆಗೆ ಹೊದಿಸಲು ಟಾರ್ಪಲ್, ಆರ್ಥಿಕ ಸಮಸ್ಯೆಯಲ್ಲಿ ರುವ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪಾತ್ರೆ ಪರಿಕರಗಳ ಕಿಟ್ ವಿತರಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾ ರ್ಥಿಗಳಿಗೂ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್ಗಳನ್ನೂ ನೀಡ ಲಾಯಿತು. ಈ ಸಂದರ್ಭ ಮಾತನಾ ಡಿದ ರವೀಂದ್ರರೈ, ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕ ಸೇವಾ ಸಂಸ್ಥೆ ಯಾಗಿ ಮನ್ನಣೆ ಪಡೆದಿದ್ದು, ಸಮರ ಸಂದರ್ಭದಲ್ಲಿ ಯುದ್ಧ ನಿರತ ದೇಶ ಗಳ ಜನತೆಗೆ ಆರೋಗ್ಯ ನೆರವಿಗೆ ಮುಂದಾ ಗುವುದಲ್ಲದೇ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೂ ಮುಂದಾಗುತ್ತದೆ. ರೆಡ್ ಕ್ರಾಸ್‌ಗೆ ಭಾರತದಲ್ಲಿ ೧೦೦ ವರ್ಷಗಳಿಗೂ ಮೀರಿದ ಇತಿಹಾಸ ವಿದೆ ಎಂದು ರೆಡ್ ಕ್ರಾಸ್ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ಶಿಕ್ಷಣ ಸಂಸ್ಥೆಯಲ್ಲಿ ರೆಡ್ ಕ್ರಾಸ್‌ನ ವಿದ್ಯಾರ್ಥಿ ಘಟಕ ಪ್ರಾರಂಭಿಸುವ ನಿಟ್ಟಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಜಿಲ್ಲಾ ನಿರ್ದೇಶಕ ಎಂ.ಧನAಜಯ್ ಮಾಹಿತಿ ನೀಡಿದರು. ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ, ನಿರ್ದೇಶಕ ಕೆ. ವಸಂತ್ ಕುಮಾರ್, ಡಿ. ಚೆನ್ನಮ್ಮ, ಪ.ಪೂ. ಕಾಲೇಜು ಪ್ರಾಂಶುಪಾಲ ಸಿ.ಮಂದಪ್ಪ, ಶಿಕ್ಷಕ ವೃಂದದವರು ಹಾಜರಿದ್ದರು.