ಸುಂಟಿಕೊಪ್ಪ, ಆ. ೬: ಮಧು ಮೇಹದಲ್ಲಿ ಇಳಿಕೆ ಯಾಗಿ ಮರ ದಿಂದ ಬಿದ್ದು ಪೊಲೀಸ್ ಸಿಬ್ಬಂದಿಯೊಬ್ಬರೂ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್ ಗ್ರಾಮದ ನೆಟ್ಲಿ ‘ಬಿ’ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ್ದ ನೆಟ್ಲಿ’ಬಿ’ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ಲೋಕೇಶ್(೩೮) ಮೃತಪಟ್ಟ ದುರ್ದೈವಿ.

ಕಳೆದ ೧೫ ವರ್ಷಗಳಿಂದ ಜಿಲ್ಲಾ ಪೊಲೀಸ್ ಸಿಬ್ಬಂದಿಯಾಗಿ ಸೇರ್ಪಡೆಯಾದ ಲೋಕೇಶ್ ಅವರು ಕಳೆದ ೧೨ ವರ್ಷಗಳಿಂದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಾನ್‌ಬೈಲ್ ಗ್ರಾಮದ ನೆಟ್ಲಿ’ಬಿ’ಯಲ್ಲಿರುವ ಅವರ ಮನೆಯ ಪಕ್ಕದಲ್ಲಿರುವ ೫೦ ಅಡಿ ಎತ್ತರದಲ್ಲಿರುವ ಮಾವಿನ ಮರಕ್ಕೆ ಹತ್ತಿ ಕಸಿ ಮಾಡುತ್ತಿದ್ದ ವೇಳೆ ದಿಢೀರ್ ಆಗಿ ಮಧುಮೇಹದಲ್ಲಿ ಇಳಿಕೆ ಕಂಡುಬAದಿದೆ. ಕಣ್ಣು ಮಂಕಾಗುತ್ತಿರುವುದನ್ನು ಮನಗಂಡ ಲೋಕೇಶ್ ಕೂಡಲೇ ಮರದ ಕೆಳಗಿದ್ದ ತನ್ನ ಸಹೋದರ ಮನು ಅವರಿಗೆ ಸಕ್ಕರೆ ತರಲು ತಿಳಿಸಿದ್ದಾರೆ. ಮನೆಗೆ ಹೋಗಿ ಸಕ್ಕರೆ ತರುವಷ್ಟರಲ್ಲಿ ೪೦ ಅಡಿ ಎತ್ತರದಿಂದ ಕಾಂಕ್ರಿಟ್ ರಸ್ತೆಗೆ ಬಿದ್ದಿದ್ದಾರೆ.

ಬಿದ್ದ ರಭಸಕ್ಕೆ ಕಾಲು ಮತ್ತು ಕೈ ಮೂಳೆ ಮುರಿದಿದ್ದು, ಎದೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯ ಅಸುನೀಗಿದ್ದಾರೆ. ನಂತರ ಮರಣೋತ್ತರ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದರು.

ಮೃತರ ಅಂತ್ಯಕ್ರಿಯೆ ಅವರ ಸ್ವಂತ ತೋಟದಲ್ಲಿ ಪೊಲೀಸ್ ಗೌರವದೊಂದಿಗೆ ತಾ. ೮ರಂದು (ಇಂದು) ಬೆಳಿಗ್ಗೆ ನಡೆಯಲಿದೆ. ಮೃತ ಲೋಕೇಶ್ ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಕಣ್ಣೀರಿಟ್ಟ ಮಾಜಿ ಶಾಸಕ : ಕಳೆದ ೧೦ ವರ್ಷಗಳಿಂದ ತನ್ನೊಂದಿಗೆ ಒಬ್ಬ ಗನ್ ಮ್ಯಾನ್ ಬದಲಾಗಿ ಕುಟುಂಬದ ಒಬ್ಬ ಸದಸ್ಯನಾಗಿದ್ದ ಲೋಕೇಶ್ ಅವರ ಅಗಲಿಕೆ ಬಹಳಷ್ಟು ನೋವು ತಂದಿದೆ. ಬಹಳ ಬುದ್ಧಿವಂತನಾಗಿದ್ದ ಅವರು ೨೦೧೮ರ ಭೂಕುಸಿತ ಸಂದರ್ಭ ತನ್ನ ಸುರಕ್ಷ ಕವಚವಾಗಿ ಕಾರ್ಯ ನಿರ್ವಹಿಸಿದ್ದು ಮರೆಯುವುದಕ್ಕೂ ಸಾಧ್ಯವಿಲ್ಲ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.

ಸ್ಥಳಕ್ಕೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಎಂ.ಎಲ್.ಸಿ ಸುಜಾ ಕುಶಾಲಪ್ಪ, ಬಿಜೆಪಿ ಮುಖಂಡ ಬಿ.ಬಿ. ಭಾರತೀಶ್, ವಿವಿಧ ಪಕ್ಷದ ಮುಖಂಡರು ಇದ್ದರು.