ಕೂಡಿಗೆ, ಆ. ೬: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಕಾಡು ಬಿಟ್ಟು ನಾಡಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಪ್ರಾಣ ಹಾನಿ ಮಾಡುವುದರೊಂದಿಗೆ ತೋಟ, ಕೃಷಿಭೂಮಿಗಳಿಗೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ಬೆಳೆಗಳನ್ನು ಹಾಳು ಮಾಡಿ ರೈತರ ಪರಿಸ್ಥಿತಿಯನ್ನು ಇಕ್ಕಟ್ಟಿಗೆ ಸಿಲುಕು ವಂತೆ ಮಾಡುತ್ತಿದೆ. ಈ ಹಿನ್ನೆಲೆ ಕುಶಾಲನಗರ ಸಮೀಪದ ಹುದುಗೂರು ಗ್ರಾಮದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹೊಸ ಕಾರ್ಯ ತಂತ್ರದ ಮೊರೆಹೋಗಿದ್ದಾರೆ.
ಹೌದು..ಅಟ್ಟಣಿಗೆಯನ್ನು ನಿರ್ಮಿಸಿ ಅಲ್ಲಿಂದ ಆನೆಗಳ ಚಲನವಲನಗಳನ್ನು ವೀಕ್ಷಿಸಿ ಆನೆ ಬಂದ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಓಡಿಸುವ ಕಾರ್ಯಕ್ಕೆ ರೈತರೇ ಕೈ ಹಾಕಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿ ಯಲ್ಲಿ ಕಳೆದ ಒಂದು ದಶಕಗಳಿಂದ ಆನೆಕಾಡು, ಬೆಂಡೆಬೆಟ್ಟ, ಯಡವ ನಾಡು ಮೀಸಲು ಅರಣ್ಯ ಪ್ರದೇಶ ಗಳಿಂದ ನುಸುಳಿ ಆನೆಗಳು ಗ್ರಾಮಗಳತ್ತ ಬರುತ್ತಿವೆ. ಕಾಡಿನಲ್ಲಿ ಆಹಾರದ ಕೊರತೆ ಉಂಟಾದ ಸಂದರ್ಭ ಹಾರಂಗಿ ನದಿಗೆ ಬರುತ್ತವೆ. ನಂತರ ಸಮೀಪದ ಜಮೀನಿಗೆ ದಾಳಿ ಮಾಡಿ ಆ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳನ್ನು ನಾಶಮಾಡುತ್ತವೆ.
ಇದೀಗ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಗದ್ದೆ ನಾಟಿ ಕೆಲಸ ಆರಂಭಗೊAಡಿದೆ. ಈ ಹೊತ್ತಿನಲ್ಲಿ ಕಾಡಾನೆಗಳ ಉಪಟಳ ಅಧಿಕ ಗೊಂಡಿದೆ. ಕಳೆದ ೧೫ ದಿನಗಳಿಂದ ತುಂಬಿದ್ದ ಹಾರಂಗಿ ನದಿಯನ್ನು ದಾಟಿಕೊಂಡು ಬಂದು ಅಚ್ಚುಕಟ್ಟು ವ್ಯಾಪ್ತಿಯ ಐದು ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ಹಾಳು ಮಾಡುತ್ತಿವೆ.
ಹುದುಗೂರು, ಕಾಳಿದೇವನ ಹೊಸೂರು, ಮಾವಿನಹಳ್ಳ, ಮಾದಲಾಪುರ ವ್ಯಾಪ್ತಿಯಲ್ಲಿ ಬೆಳೆದ ಸಿಹಿ ಗೆಣಸು, ಮೆಕ್ಕೆಜೋಳ, ಶುಂಠಿ, ಬಾಳೆ, ಮರ ಗೆಣಸು ಇನ್ನಿತರ ಬೆಳೆ ಗಳನ್ನು ರೈತರು ಬೆಳೆದಿದ್ದಾರೆ, ಈ ಸಾಲಿನಲ್ಲಿ ಮುಂಗಾರು ಮಳೆ ಕಡಿಮೆ ಯಾದ ಕಾರಣದಿಂದ ಉಪ ಬೆಳೆಗಳು ಉತ್ತಮ ಫಸಲು ನೀಡಿವೆ.
ಆನೆಕಾಡು ಮೀಸಲು ಅರಣ್ಯ ಪ್ರದೇಶದಿಂದ ಬೆಂಡೆಬೆಟ್ಟದ ಮೂಲಕ ಹತ್ತಕ್ಕು ಹೆಚ್ಚು ಕಾಡಾನೆಗಳು ಹಾರಂಗಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನದಿಯನ್ನು ದಾಟಿಕೊಂಡು ಬಂದಿದ್ದು, ಯಡವನಾಡು ಮೀಸಲು ಅರಣ್ಯದ ಕಡೆಯಿಂದ ಮತ್ತು ಆನೆಕಾಡು ಮೀಸಲು ಅರಣ್ಯ ಪ್ರದೇಶದಿಂದ ದಿನಂಪ್ರತಿ ಹುದುಗೂರು ಭಾಗಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡು ತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆಯನ್ನು ಕಾಯಲು ರೈತರು ಮುಂದಾಗಿದ್ದಾರೆ.
ಹಾರಂಗಿ ನದಿ ದಂಡೆಗೆ ಹೊಂದಿಕೊAಡAತೆ ಇರುವ ರೈತರ ಜಮೀನಿನ ಮರಗಳ ಮೇಲೆ ಅಟ್ಟಣಿಗಳನ್ನು ನಿರ್ಮಾಣ ಮಾಡಿ ಕೊಂಡು ಆನೆಗಳು ಬರುವುದನ್ನು ನೋಡಿ ಪಟಾಕಿ ಸಿಡಿಸಿ ಅವುಗಳನ್ನು ಕಾಡಿನಂತ ಓಡಿಸುವ ಕೆಲಸವನ್ನು ಈ ಭಾಗದ ರೈತರು ಮಾಡುತ್ತಿದ್ದಾರೆ. ಈ ಮೊದಲೆಲ್ಲ ಭತ್ತದ ಬೆಳೆ ಕಾಯಲು ಡಿಸೆಂಬರ್ ತಿಂಗಳಿನಲ್ಲಿ ಅಟ್ಟಣಿಗೆ ಯನ್ನು ರೈತರು ನಿರ್ಮಿಸಿಕೊಳ್ಳುತ್ತಿ ದ್ದರು. ಆದರೆ, ಈ ಬಾರಿ ಆಗಸ್ಟ್ ತಿಂಗಳಿ ನಿಂದಲೇ ಬೆಳೆ ರಕ್ಷಣೆಗೆ ಅಟ್ಟಣಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಆನೆಕಾಡು ಮತ್ತು ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವುದು ಅರಣ್ಯ ಇಲಾಖೆಯ ಮಾಹಿತಿಯಿಂದ ತಿಳಿದು ಬಂದಿದೆ.
ಕೂಡಿಗೆ ಗ್ರಾಮ ಪಂಚಾಯಿ ತಿ ವ್ಯಾಪ್ತಿಯ ಹುದುಗೂರು, ಕಾಳಿ ದೇವನ ಹೊಸೂರು, ಮಾವಿನಹಳ್ಳ ಮಾದಲಾಪುರ ವ್ಯಾಪ್ತಿಯಲ್ಲಿ ಸತತವಾಗಿ ಕಾಡಾನೆಗಳು ತುಂಬಿ ಹರಿಯುತ್ತಿರುವ ಹಾರಂಗಿ ನದಿಯನ್ನು ದಾಟಿಕೊಂಡು ಬಂದು ಈ ಭಾಗದ ನೂರಾರು ಎಕರೆಗಳಷ್ಟು ಪ್ರದೇಶದ ಬೆಳೆಗಳನ್ನು ಮತ್ತು ನಾಟಿ ಮಾಡಿದ ಗದ್ದೆಗಳನ್ನು ಸೇರಿದಂತೆ ಇತರೆ ಬೆಳೆಗ ಳನ್ನು ಹಾಳುಮಾಡಿ ನಷ್ಟಪಡಿಸುತ್ತಿವೆ.
ಅಳಿದುಳಿದ ಮುಂಗಾರು ಬೆಳೆ ಯನ್ನು ರಕ್ಷಿಸಲು ಈ ಭಾಗದ ರೈತರು ಆರು ಕಡೆಗಳಲ್ಲಿ ಅಟ್ಟಣಿಗೆಯನ್ನು ತಮ್ಮ ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಮೆಕ್ಕೆಜೋಳವು ಹೂ ಅರಳಿ, ತೆನೆ ಕಟ್ಟುವ ಸಮಯವಾಗಿರುವ ಹಿನ್ನೆಲೆ ಯಲ್ಲಿ ಕಾಡಾನೆಗಳಿಂದ ಬೆಳೆ ರಕ್ಷಿಸಿ ಕೊಳ್ಳಲು ಹುದುಗೂರು, ಕಾಳಿದೇವನ ಹೊಸೂರು, ಮಾವಿನಹಳ್ಳ, ಸೀತೆಗದ್ದೆ ವ್ಯಾಪ್ತಿಯಲ್ಲಿ ಅಟ್ಟಣಿಗಳನ್ನು ನಿರ್ಮಿಸಿ ಕೊಂಡು ರಾತ್ರಿ ವೇಳೆಯಲ್ಲಿ ರೈತರು ಕಾವಲು ಕಾಯುತ್ತಿದ್ದಾರೆ.
ಈ ವ್ಯಾಪ್ತಿಯಲ್ಲಿ ಅರಣ್ಯ ಇಲಾ ಖೆಯ ವತಿಯಿಂದ ಮತ್ತು ಸ್ವತಃ ಗ್ರಾಮಸ್ಥರೇ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ತಮ್ಮ ಬೆಳೆಗಳ ರಕ್ಷಣೆಗಾಗಿ ಹುದುಗೂರು ಗ್ರಾಮದ ಚಿಣ್ಣಪ್ಪ, ಸೋಮಯ್ಯ, ರಘು, ಗಣೇಶ್, ಲಕ್ಷಿö್ಮÃಕಾಂತ್, ರಮೇಶ್ ಮರದ ಮೇಲೆ ಅಟ್ಟಣಿಗಳನ್ನು ನಿರ್ಮಿಸಿಕೊಂಡಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ