ಮಡಿಕೇರಿ, ಆ. ೭: ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ, ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ, ಈಶ ಫೌಂಡೇಶನ್ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್ರೀಚ್, ಆಗಸ್ಟ್ನಿಂದ ಸೆಪ್ಟೆಂಬರ್ ೨೩ ರವರೆಗೆ ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತದೆ. ಈಶ ಗ್ರಾಮೋತ್ಸವವು ಭಾರತದ ಅತಿದೊಡ್ಡ ಕ್ರೀಡಾಕೂಟವಾಗಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲಿ ನಡೆಸಲಾಗುತ್ತದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ೧೧೨ ಅಡಿ ಎತ್ತರದ ಆದಿಯೋಗಿ ಎದುರು ಅಂತಿಮ ಪಂದ್ಯಗಳು ನಡೆಯಲಿವೆ.
ಕರ್ನಾಟಕದಲ್ಲಿ, ಕ್ಲಸ್ಟರ್ ಮಟ್ಟದ ಪಂದ್ಯಗಳು ಆಗಸ್ಟ್ ೧೨ ರಿಂದ ಪ್ರಾರಂಭವಾಗಿ, ಸೆಪ್ಟೆಂಬರ್ ೩ ರಂದು ಗೆದ್ದ ತಂಡಗಳು ವಿಭಾಗ ಮಟ್ಟದ ಪಂದ್ಯವನ್ನು ಆಡಲು ಮುನ್ನಡೆಯುತ್ತವೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಕರ್ನಾಟಕದ ೧೩ ಜಿಲ್ಲೆಗಳ ೩೨೦೦ ಕ್ಕೂ ಹೆಚ್ಚು ಹಳ್ಳಿಗಳು ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗುತ್ತಿವೆ. ಸಮಾರಂಭದಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದೆ.
ವಿವರಗಳು : ಮೊದಲನೇ ಹಂತದ (ಕ್ಲಸ್ಟರ್) ಪಂದ್ಯಗಳು - ಆಗಸ್ಟ್ ೧೨ ಹಾಗೂ ೧೩ ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ, ವಿಜಯನಗರ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ; ಆಗಸ್ಟ್ ೧೯ ಹಾಗೂ ೨೦ ರಂದು ಬೆಂಗಳೂರು ಗ್ರಾಮಾಂ ತರ, ತುಮಕೂರು, ಕೊಡಗು, ಚಾಮ ರಾಜನಗರ ಜಿಲ್ಲೆಗಳಲ್ಲಿ ; ಆಗಸ್ಟ್ ೨೬ ಹಾಗೂ ೨೭ ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿವೆ.
ಎರಡನೇ ಹಂತದ (ವಿಭಾಗ) ಪಂದ್ಯಗಳು - ಸೆಪ್ಟೆಂಬರ್ ೩ರಂದು ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ನಡೆಯಲಿವೆ. ಫೈನಲ್ ಹಂತದ ಪಂದ್ಯಗಳು ಸೆಪ್ಟೆಂಬರ್ ೨೩ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿವೆ.
೨೦೦೪ ರಲ್ಲಿ, ಸದ್ಗುರುಗಳಿಂದ ಪ್ರಾರಂಭವಾದ ಗ್ರಾಮೋತ್ಸವವು ಈ ವರ್ಷ ಪುರುಷರಿಗಾಗಿ ವಾಲೀಬಾಲ್, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ತಮಿಳುನಾಡಿನ ಗ್ರಾಮೀಣ ಆಟಗಳು- ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿಯನ್ನು ಒಳಗೊಂಡಿರುತ್ತದೆ. ಗ್ರಾಮೋತ್ಸವದಲ್ಲಿ ೬೫ ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಈ ಬಾರಿಯ ಬಹುಮಾನದ ಒಟ್ಟು ಮೊತ್ತ ೫೬ ಲಕ್ಷ ರೂಪಾಯಿಗಳನ್ನು ಮೀರಿದೆ. ವಾಲೀಬಾಲ್ ವಿಜೇತರಿಗೆ ೫ ಲಕ್ಷ ರೂಪಾಯಿ ಮತ್ತು ಕಬ್ಬಡಿ ಮತ್ತು ಥ್ರೋಬಾಲ್ನಲ್ಲಿ ಗೆದ್ದ ತಂಡಗಳಿಗೆ ತಲಾ ೨ ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ೮೩೦೦೦ ೩೦೯೯೯ ಗೆ ಕರೆ ಮಾಡಿ.
ಕಾರ್ಯಕ್ರಮಕ್ಕೆ ನೋಂದಾ ಯಿಸಲು : hಣಣಠಿs://ishಚಿ.ಛಿo/gಡಿಚಿmoಣsಚಿvಚಿm-ಞಚಿಟಿಟಿಚಿಜಚಿ ವೆಬ್ಸೈಟ್ಗೆ ಭೇಟಿಯಾಗುವಂತೆ ಪ್ರಕಟಣೆ ತಿಳಿಸಿದೆ.