*ಗೋಣಿಕೊಪ್ಪ, ಆ. ೬: ಕಕ್ಕಡ ತಿಂಗಳಿನ ಮದ್ದ್ ಸೊಪ್ಪಿನ ೧೮ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಒತ್ತಾಯಿಸಿತು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ‘ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ’ ವೇದಿಕೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರು ಮಾತನಾಡಿ, ಔಷಧೀಯ ಗುಣಗಳ ಬಗ್ಗೆ ಸಂಶೋಧÀನೆ ನಡೆಯಬೇಕು ಎಂದು ಆಗ್ರಹಿಸಿದರು. ಹಿರಿಯರು ರೂಪಿಸಿರುವ ಕಕ್ಕಡ ಪದ್‌ನೆಟ್ಟ್ ಆಚರಣೆಯಿಂದ ಸಾಕಷ್ಟು ಪರಿಜ್ಞಾನ ಬಂದಿದೆ.
ಆದರೆ ೧೮ ಔಷಧೀಯ ಗುಣಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ. ಈ *ಗೋಣಿಕೊಪ್ಪ, ಆ. ೬: ಕಕ್ಕಡ ತಿಂಗಳಿನ ಮದ್ದ್ ಸೊಪ್ಪಿನ ೧೮ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಒತ್ತಾಯಿಸಿತು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ‘ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ’ ವೇದಿಕೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರು ಮಾತನಾಡಿ, ಔಷಧೀಯ ಗುಣಗಳ ಬಗ್ಗೆ ಸಂಶೋಧÀನೆ ನಡೆಯಬೇಕು ಎಂದು ಆಗ್ರಹಿಸಿದರು. ಹಿರಿಯರು ರೂಪಿಸಿರುವ ಕಕ್ಕಡ ಪದ್‌ನೆಟ್ಟ್ ಆಚರಣೆಯಿಂದ ಸಾಕಷ್ಟು ಪರಿಜ್ಞಾನ ಬಂದಿದೆ.
ಆದರೆ ೧೮ ಔಷಧೀಯ ಗುಣಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ. ಈ ಸೊಪ್ಪಿನ ಬಗ್ಗೆ ಅರಿವು ಇಲ್ಲದವರು ಸೊಪ್ಪಿನ ಆಹಾರ ಸೇವಿಸಿ ಮೂತ್ರದ ಬಣ್ಣದಲ್ಲಿ ಆಗುವ ಬದಲಾವಣೆಯಿಂದ ವೈದ್ಯರ ಸಲಹೆ ಪಡೆದ ನಿದರ್ಶನಗಳಿವೆ. ಪಶ್ಚಿಮಘಟ್ಟದಲ್ಲಿ ಹೆಚ್ಚು ಬೆಳೆಯುವ ಸೊಪ್ಪು ಕೇರಳ ಮತ್ತು ಮಲಬಾರ್ ಬೆಟ್ಟದಲ್ಲಿ ಕಾಣಸಿಗುತ್ತದೆ. ಪೈಟೋಕೆಮಿಕಲ್ ಮತ್ತು ಆಚಿಟಿ ಯೋಕ್ಷಿಥೆಂಟ್ ಎಂಬ ರಾಸಾಯನಿಕ ಗುಣ ಹೊಂದಿದೆ. ಸೊಪ್ಪಿನ ರಸದಲ್ಲಿ ಕೊಲೆಸ್ಟಾçಲ್ ಕರಗಿಸುವ ಶಕ್ತಿ ಇದೆ ಎಂಬ ಸಂಶೋಧನಾ ಮಾಹಿತಿ ಇದೆ ಎಂದರು.
ವೇದಿಕೆ ಸದಸ್ಯೆ ನಿರ್ಮಲ ಬೋಪಣ್ಣ ಮಾತನಾಡಿ, ಕಾಡಿನಲ್ಲಿ ದೊರೆಯುತ್ತಿದ್ದ ಸೊಪ್ಪಿನ ಮಹತ್ವ ಅರಿವಾಗಿದೆ. ಸೊಪ್ಪಿನ ರಸದಿಂದ ನಾನಾ ರೀತಿಯ ಖಾದ್ಯಗಳ ತಯಾರಿಸುವುದು ಹೆಚ್ಚಾಗುತ್ತಿದೆ. ಬೆಲ್ಲ ಮತ್ತು ಜೇನು ಬಳಸಿಕೊಂಡು ಉಷ್ಣ ಮತ್ತು ತಂಪು ಹೊಂದಾಣಿಕೆ ಮಾಡಿಕೊಳ್ಳಬಹುದು. ಸೊಪ್ಪಿನ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ. ೧೮ ಔಷಧೀಯ ಗುಣಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. ಹಿರಿಯರಾದ ಮಾಣಿಪಂಡ ಕಾವೇರಮ್ಮ ಮಾತನಾಡಿ, ಮಕ್ಕಳಿಗೆ ಔಷಧಿಯ ಗುಣಗಳ ಮಾಹಿತಿ ಕಾರ್ಯ ನಡೆಯಬೇಕಿದೆ. ತಿಳುವಳಿಕೆ ಕೊರತೆ ಇದೆ. ಮದ್ದ್ ಸೊಪ್ಪಿನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಬೇಕಿದೆ ಎಂದರು.
ಅಧ್ಯಕ್ಷ ಚೆಕ್ಕೇರ ಸನ್ನಿ ಸುಬ್ಬಯ್ಯ, ಕಾರ್ಯದರ್ಶಿ ಚೇಂದೀರ ಬೋಪಣ್ಣ, ಪಾರುವಂಗಡ ಸನ್ನಿ ಮೊಣ್ಣಪ್ಪ, ಮಾಚಿಮಾಡ ಲೌಲಿ, ಚೇನಂಡ ಕಿಶೋರ್, ಕಾವೇರಮ್ಮ, ಬೊಟ್ಟಂಗಡ ಕಾವೇರಮ್ಮ, ನಾಣಯ್ಯ, ಚೊಟ್ಟೆಕಾಳಪಂಡ ಅಚ್ಚಯ್ಯ, ಟೆಕ್ಕಿ ಅಣ್ಣಯ್ಯ, ಕೊಳ್ಳಿಮಾಡ ಕಾರ್ಯಪ್ಪ, ಆಲೆಮಾಡ ಸೋಮಯ್ಯ, ಪೂವಯ್ಯ, ದೇವಯ್ಯ, ಗಾಣಂಗಡ ಸುಬ್ಬಯ್ಯ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕ ಜಗದೀಶ್ ಜೋಡುಬೀಟಿ, ಸದಸ್ಯ ಡಿ. ನಾಗೇಶ್ ಇದ್ದರು.