ಮಡಿಕೇರಿ, ಆ. ೬: ಮನೆಯಿಂದ ನಾಪತ್ತೆಯಾಗಿದ್ದ ಕೊಡಗಿನ ಇಬ್ಬರು ಬಾಲಕಿಯರ ಪೈಕಿ ಒಬ್ಬಾಕೆ ಸಮುದ್ರ ಅಲೆಯ ಹೊಡೆತಕ್ಕೆ ಸಿಲುಕಿ ಮೃತ ಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದ್ದು, ಜೊತೆಗಿದ್ದ ಸ್ನೇಹಿತೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.

ಮಡಿಕೇರಿಯ ಹೊಸಬಡಾವಣೆ ನಿವಾಸಿ ಮಾನ್ಯ (೧೭) ಮೃತ ದುರ್ದೈವಿ. ಆಕೆಯ ಸ್ನೇಹಿತೆ ಮೇಕೇರಿ ಯ ನಿವಾಸಿ ಪ್ರಾಣಾಪಾಯದಿಂದ ಪಾರಾದ ಬಾಲಕಿ.

ಮಾನ್ಯ ಹಾಗೂ ಮತ್ತೊಬ್ಬಳು ಮಡಿಕೇರಿ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡು ತ್ತಿದ್ದು, ತಾ. ೩ ರಂದು ಕಾಲೇಜಿಗೆಂದು ಮನೆಯಿಂದ ಹೇಳಿ ಬಂದ ನಂತರ ಇಬ್ಬರು ನಾಪತ್ತೆಯಾಗಿದ್ದಾರೆ. ಸಂಜೆ ಯಾದರೂ ಮನೆಗೆ ಬಾರದಿದ್ದಾಗ ಪೋಷಕರು ಆತಂಕಗೊAಡು ಹುಡುಕಾಟ ಆರಂಭಿಸಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಬಾಲಕಿಯರು ಕೆಲವು ಸ್ಥಳಗಳಿಗೆ ಪಯಣಿಸಿ ಬಳಿಕ ಉಡುಪಿಯ ಮಲ್ಪೆಗೆ ಬಂದಿದ್ದಾರೆ. ಇಬ್ಬರು ಯುವತಿಯರು ರಾತ್ರಿ ೮ ಪೋಷಕರು ಆತಂಕಗೊAಡು ಹುಡುಕಾಟ ಆರಂಭಿಸಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಬಾಲಕಿಯರು ಕೆಲವು ಸ್ಥಳಗಳಿಗೆ ಪಯಣಿಸಿ ಬಳಿಕ ಉಡುಪಿಯ ಮಲ್ಪೆಗೆ ಬಂದಿದ್ದಾರೆ. ಇಬ್ಬರು ಯುವತಿಯರು ರಾತ್ರಿ ೮ (ಮೊದಲ ಪುಟದಿಂದ) ಆದರೆ, ಮಾನ್ಯ ವಿಪರೀತ ನೀರು ಕುಡಿದು ಉಸಿರಾಟದ ಸಮಸ್ಯೆಯಾಗಿ ಅಸುನೀಗಿದ್ದಾಳೆ. ಜೊತೆಯಲ್ಲಿದ್ದ ಬಾಲಕಿಯ ಹೊಟ್ಟೆಯ ಲ್ಲಿದ್ದ ನೀರು ತೆಗೆದು ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮಡಿಕೇರಿಯಿಂದ ಪೊಲೀಸರು ಮಲ್ಪೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮಡಿಕೇರಿಗೆ ತಂದು ಅಂತ್ಯಸAಸ್ಕಾರ ನೆರವೇರಿಸಲಾಯಿತು.