ವೀರಾಜಪೇಟೆ, ಆ. ೬: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ವೀರಾಜ ಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ಪದಿನೆಟ್ಟ್ ನಮ್ಮೆ ಆಚರಿಸಲಾಯಿತು.

ಈ ಸಂದರ್ಭ ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕಿ ಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೂಪದೀರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾರದಾ ನಂಜಪ್ಪ ಅವರು, ಕೊಡವ ಭಾಷೆ ಹಾಗೂ ಕೊಡವರ ಮೇಲೆ ಅಭಿಮಾನ ಇರುವ ಯಾವುದೇ ಜಾತಿ ಧರ್ಮದ ವ್ಯಕ್ತಿಗಳನ್ನು ಕೂಡ ನಾವು ಅಭಿನಂದಿಸಬೇಕಿದೆ ಹಾಗಾದರೆ ಮಾತ್ರ ಒಂದು ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯಾವುದೇ ಜಾತಿ ಧರ್ಮಗಳಿರಲಿ ಮಕ್ಕಳಿಗೆ ಮನೆಯಲ್ಲಿ ಮಾತೃಭಾಷೆ ಯನ್ನು ಕಲಿಸಬೇಕಿದೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಬಾರದು. ನಾವು ಯಾವುದೇ ಗೌರವಗಳನ್ನು ಅದರ ಹಿಂದೆ ಹೋಗಿ ಪಡೆಯುವುದಕ್ಕಿಂತ ಅದು ತಾನಾಗಿಯೇ ಬಂದರೆ ಒಳ್ಳೆಯದು ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವರು ಕೊಡಗಿನಲ್ಲಿರುವವರ ಸಂಖ್ಯೆ ಹೆಚ್ಚಾಗಿ ಹೊರ ಜಿಲ್ಲೆಯಲ್ಲಿ ಹೊರ ರಾಜ್ಯದಲ್ಲಿ ನೆಲೆಸಿದ್ದಾರೆ. ಅವರು ಉದ್ಯೋಗದ ನಿಮಿತ್ತ ಅಥವಾ ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಜಿಲ್ಲೆಯಿಂದ ಹೊರಗೆ ಬದುಕು ಕಟ್ಟಿಕೊಂಡಿ ರುವುದು ತಪ್ಪೇನು ಇಲ್ಲ, ಆದರೆ ಕನಿಷ್ಟ ತಮ್ಮ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರೂ ಕೊಡಗಿನಲ್ಲಿ ಮತದಾರರ ಚೀಟಿ ಹೊಂದಬೇಕಿದೆ ಎಂದರು. ಜಿಲ್ಲೆಯ ಶ್ರೀಮಂತ ಸಂಸ್ಕöÈತಿಯನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕಾಗಿ ರುವುದು ನಮ್ಮ ಕರ್ತವ್ಯವಾಗಿದ್ದು, ಮುಂದಿನ ತಲೆಮಾರಿಗೂ ಇಲ್ಲಿನ ಜನಾಂಗ ಹಾಗೂ ಶ್ರೀಮಂತ ಸಂಸ್ಕöÈತಿ ಅಳಿಯದೆ ಉಳಿಯಲಿ ಎಂದರು. ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಅಖಿಲ ಕೊಡವ ಸಮಾಜ ಎನ್ನುವುದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿದ್ದು ಕೊಡವರಾಗಿ ಹುಟ್ಟಿದ ಪ್ರತಿಯೊಬ್ಬರೂ ಅಖಿಲ ಕೊಡವ ಸಮಾಜದಲ್ಲಿ ಸದಸ್ಯ ರಾಗಿದ್ದು, ಆಗ ಹುಟ್ಟಿದ ಮಗು ಗಂಡು ಇರಲಿ ಅಥವಾ ಹೆಣ್ಣಿರಲಿ ತಾನಾಗಿಯೇ ಸಂಸ್ಥೆಯ ಸದಸ್ಯ ನಾಗುತ್ತಾನೆ. ಸಂಸ್ಥೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದರೆ ಕೊಡವ ಜನಾಂಗದ ಪ್ರತಿಯೊಂದು ಕುಟುಂಬ ತಮ್ಮ ವಕ್ಕ ಸದಸ್ಯತ್ವ ತೆಗೆದುಕೊಳ್ಳುವ ಮೂಲಕ ಮಾತೃ ಸಂಸ್ಥೆಗೆ ಬಲ ತುಂಬಬೇಕಿದೆ. ಹಿರಿಯರು ದೂರದೃಷ್ಟಿಯಿಂದ ಕಟ್ಟಿಬೆಳೆಸಿದ ಸಂಸ್ಥೆಯನ್ನು ಮುಂದಿನ ಪೀಳಿಗೆಗೂ ನಾವು ಉಳಿಸಿ ಬೆಳೆಸಲು ವಕ್ಕ ಸದಸ್ಯ ಅಥವಾ ಜನಾಂಗದ ವಂತಿಗೆ ಅನಿವಾರ್ಯವಾಗಿದೆ ಎಂದರು. ಕೊಡವ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಕಕ್ಕಡಕ್ಕೆ ಅರ್ಥವಿಲ್ಲ ದಾಗಿದೆ, ಹಿಂದಿನ ಮಳೆ ಗಾಳಿಯ ಕಕ್ಕಡ ಇದೀಗ ಕಾಣುತ್ತಿಲ್ಲ, ಸುಮಾರು ಐವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆ, ಇತ್ತೀಚಿನ ವರ್ಷಗಳ ಪರಿಸ್ಥಿತಿ ಬೇರೆ. ಜನರು ಬದಲಾದಂತೆ ಪ್ರಕೃತಿ ಯಲ್ಲಿಯೂ ಬದಲಾವಣೆಯಾಗಿದೆ. ದೇಹದ ಉಷ್ಣಾಂಶವನ್ನು ಸಮತೋಲನ ವಾಗಿಟ್ಟುಕೊಳ್ಳಲು ನಮ್ಮ ಪೂರ್ವಿಕರು ಕಂಡುಕೊAಡ ಉಪಾಯ ಈ ಕಕ್ಕಡದ ಹಲವು ತಿನಿಸುಗಳು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದರ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಕಕ್ಕಡ ವಿಶೇಷತೆಗಳ ಬಗೆ ತಿಳಿಸಿ ಕೊಡವತಿಯರು ಪೊಮ್ಮಕ್ಕಡ ಪರಿಷತ್ ಜೊತೆ ಕೈಜೋಡಿಸಲು ಮನವಿ ಮಾಡಿದರು. ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ, ಸಹ ಕಾರ್ಯದರ್ಶಿ ನಂದೇಟೀರ ರಾಜ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಉಪಸ್ಥಿತರಿದ್ದರು. ಪೊಮ್ಮಕ್ಕಡ ಪರಿಷತ್ ಕಾರ್ಯದರ್ಶಿ ಮಂಡೇಪAಡ ಗೀತಾ ಮಂದಣ್ಣ ಮಳವಂಡ ಪೂವಿ ಅಜ್ಜಿಕುಟ್ಟೀರ ಶಾಂತಿ, ತೀತೀರ ಊರ್ಮಿಳಾ ಸೇರಿದಂತೆ ಇತರ ಸದಸ್ಯರು ಇದ್ದರು. ಬಳಿಕ ಮದ್ದ್ಪುಟ್ಟ್, ಮದ್ದ್ ಪಾಯಸ ಸೇರಿದಂತೆ ಸಾಮೂಹಿಕ ಕಕ್ಕಡ ಭೋಜನವನ್ನು ಏರ್ಪಡಿಸಲಾಗಿತ್ತು.

- ಈಶಾನ್ವಿ