ವೀರಾಜಪೇಟೆ, ಆ. ೭: ೩೫ ವರ್ಷಗಳ ಸುದೀರ್ಘ ಕಾಲ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿರಸ್ತೆದಾರ್ ಎ. ಅಣ್ಣು ನಾಯ್ಕ್ ಅವರನ್ನು ಇಲಾಖೆಯ ವತಿಯಿಂದ ಬೀಳ್ಕೊಡಲಾಯಿತು. ಸಮಾರಂಭದಲ್ಲಿ ತಹಶೀಲ್ದಾರ್ ರಾಮಚಂದ್ರ ಅವರು ಎ. ಅಣ್ಣು ನಾಯ್ಕ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟು ಅವರ ಕಾರ್ಯ ವೈಖರಿಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.