ಸೋಮವಾರಪೇಟೆ, ಆ.೭ : ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮಗಳ ಸ್ವಚ್ಛತೆ, ತ್ಯಾಜ್ಯ ಸಂಗ್ರಹ-ವಿAಗಡಣೆ, ಮರು ಬಳಕೆ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರದಿಂದ ಗ್ರಾ.ಪಂ.ಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತಿದ್ದು, ಊರುಕೇರಿ ಸ್ವಚ್ಛ ಮಾಡಿದ ಸ್ವಚ್ಛತಾಗಾರರಿಗೆ ಪಿಡಿಓ ಹಣ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳಿಂದ ಸ್ಥಳೀಯ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಸ್ವಚ್ಛತಾ ವಾಹಿನಿ ಮೂಲಕ ಗ್ರಾಮ ಗ್ರಾಮಗಳಿಗೆ ತೆರಳಿ ಮನೆಗಳಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಗ್ರಾಮದ ಸ್ವಚ್ಚತೆಗೆ ಸಹಕಾರಿಯಾಗುತ್ತಿದ್ದಾರೆ.
ಆದರೆ ಈ ಹಿಂದೆ ಮಾಡಿಕೊಂಡಿದ್ದ ಒಡಂಬಡಿಕೆಯAತೆ ಗ್ರಾಮ ಪಂಚಾಯಿತಿಯಿAದ ಹಣ ಪಾವತಿ ಮಾಡದೇ ಸ್ವಚ್ಛತಾಗಾರರನ್ನು ಸತಾಯಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಣ ಪಾವತಿಗೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸAಜೀವಿನ ಮಹಿಳಾ ಒಕ್ಕೂಟದ ಸದಸ್ಯರೇ ಮುಂದೆ ಬಂದು ಗ್ರಾಮಗಳ ಸ್ವಚ್ಛತೆಗೆ ಕೈಜೋಡಿಸಿದ್ದು, ಈವರೆಗೆ ಸುಮಾರು ೩೭ ಸಾವಿರಕ್ಕೂ ಅಧಿಕ ಹಣವನ್ನು ಒಕ್ಕೂಟಕ್ಕೆ ಗ್ರಾ.ಪಂ. ಪಾವತಿಸಬೇಕಿದೆ. ಹಣ ಪಾವತಿಸುವಂತೆ ಗ್ರಾ.ಪಂ. ಆಡಳಿತ ಮಂಡಳಿ ಸೂಚಿಸಿದರೂ ಸಹ ಪಿಡಿಓ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಗ್ರಾ.ಪಂ. ಜನಪ್ರತಿನಿಧಿಗಳು ಆರೋಪಿಸಿದ್ದಾರೆ.
ಪ್ರಸ್ತುತ ಗ್ರಾಮ ಗ್ರಾಮಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾ.ಪಂ. ಕಚೇರಿ ಕಟ್ಟಡದ ಪಕ್ಕದಲ್ಲಿಯೇ ಇರುವ ಹಳೆಯ ಕಟ್ಟಡದ ಮುಂಭಾಗ ಶೇಖರಿಸಿಡಲಾಗಿದೆ. ಇಲ್ಲಿ ಶೇಖರಿಸಿಟ್ಟ ತ್ಯಾಜ್ಯವನ್ನು ವಿಲೇವಾರಿ ಮಾಡದ ಹಿನ್ನೆಲೆ ಇಡೀ ಆವರಣ ದುರ್ನಾತ ಬೀರುತ್ತಿದೆ. ಒಕ್ಕೂಟಕ್ಕೆ ಹಣ ಪಾವತಿಯಾಗದ ಹಿನ್ನೆಲೆ ಕಳೆದ ನಾಲ್ಕೆöÊದು ತಿಂಗಳಿನಿAದ ತ್ಯಾಜ್ಯ ಸಂಗ್ರಹಣೆ ಕಾರ್ಯವೂ ಸ್ಥಗಿತಗೊಂಡಿದೆ. ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛತೆಯತ್ತ ಇಚ್ಛಾಶಕ್ತಿ ಹೊಂದಿಲ್ಲದ ಅಭಿವೃದ್ಧಿ ಅಧಿಕಾರಿಯಿಂದಾಗಿ ಸಮಸ್ಯೆ ಉದ್ಬವಿಸಿದೆ ಎಂದು ಗ್ರಾ.ಪಂ. ಸದಸ್ಯರುಗಳು ಆರೋಪಿಸಿದ್ದಾರೆ.
ಪಿಡಿಓ ಬದಲಾಯಿಸಲು ದೂರು: ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳಿಗೆ ಜನರಿಗೆ ಸೌಲಭ್ಯ ತಲುಪಿಸುವಲ್ಲಿ ಸಹಕರಿಸುತ್ತಿಲ್ಲ. ಗ್ರಾಮದ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿಲ್ಲ ಎಂಬಿತ್ಯಾದಿ ಆರೋಪಗಳನ್ನು ಮುಂದಿಟ್ಟು ಗ್ರಾ.ಪಂ. ಅಧ್ಯಕ್ಷರೂ ಸೇರಿದಂತೆ ಬಹುತೇಕ ಸದಸ್ಯರುಗಳು, ಪಿಡಿಓ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.