ಸೋಮವಾರಪೇಟೆ, ಆ. ೭: ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ನಿರ್ವಹಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಯೋರ್ವರು ಆಸ್ಪತ್ರೆಯ ಹಿರಿಯ ಶುಶ್ರೂಷಕಿಯರು ಹಾಗೂ ಡಿ ಗ್ರೂಪ್ ನೌಕರರಿಗೆ ಬೆದರಿಕೆ ಹಾಕಿರುವ ಬಗ್ಗೆ ದೂರೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕರ್ತವ್ಯ ಇಲ್ಲದ ಸಂದರ್ಭ ತಾವುಗಳು ಮೊಬೈಲ್ ಬಳಸಿದರೂ ಅದನ್ನು ಚಿತ್ರೀಕರಿಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮ್ಮದೇ ಸರಕಾರ ಇರುವುದು. ಏನೂ ಮಾಡಲು ಸಾಧ್ಯವಿಲ್ಲ ಎಂದು ಧಮಕಿ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸಿಬ್ಬಂದಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಗೆ ಸಂಬAಧಿಸಿದ ಸಿಬ್ಬಂದಿಯನ್ನು ಕರೆದು ವಿಚಾರಣೆ ನಡೆಸಿದ ಸಂದರ್ಭ ಸ್ಥಳೀಯ ಕಾಂಗ್ರೆಸ್ ಮುಖಂಡರೋರ್ವರು ಠಾಣೆಗೆ ಆಗಮಿಸಿ, ಆಕೆಯ ಪರವಾಗಿ ವಕಾಲತ್ತು ವಹಿಸಿದ್ದು, ಹಿರಿಯ ಶುಶ್ರೂಷಕಿಯರನ್ನು ಉದ್ದೇಶಿಸಿ ನೀವುಗಳು ಎಷ್ಟು ವರ್ಷದಿಂದ ಇಲ್ಲೇ ಇದ್ದೀರಾ, ನಿಮ್ಮಗಳ ಟ್ರಾನ್ಸ್ಫರ್ ಲಿಸ್ಟ್ ನನ್ನ ಬಳಿಯಿದೆ ಎಂದು ಅವಾಜ್ ಹಾಕಿದ್ದಾರೆ ಎನ್ನಲಾ ಗಿದೆ. ಎಲ್ಲವನ್ನೂ ಆಲಿಸಿದ ಪೊಲೀಸರು ಪ್ರಕರಣವನ್ನು ಸೌಹಾರ್ದಯು ತವಾಗಿ ಮುಗಿಸಲು ಮುಂದಾಗಿರುವ ಬಗ್ಗೆ ತಿಳಿದುಬಂದಿದೆ.