ಶ್ರೀಮಂಗಲ, ಆ. ೫: ಬರವಣಿಕೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಮೂಲಕ ನಮ್ಮ ಸಂಸ್ಕೃತಿ, ಆಚಾರ - ವಿಚಾರ, ಸಾಹಿತ್ಯದ ರಕ್ಷಣೆ ಆಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ದಾಖಲೆಯಾಗಿ ಉಳಿಯುತ್ತದೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅಭಿಪ್ರಾಯ ಪಟ್ಟರು. ಕೊಡವ ತಕ್ಕ್ ಎಳ್ತ್'ಕಾರಡ ಕೂಟದ ಬೆಳ್ಳಿ ಹಬ್ಬದ ಪ್ರಯುಕ್ತ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಕೊಡವ ತಕ್ಕ್ ಎಳ್ತ್'ಕಾರಡ ಕೂಟ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ೨೫ ಕೊಡವ ಭಾಷೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ೧೮ ಸಾಹಿತಿಗಳು ಬರೆದಿರುವ ೨೫ ಕೊಡವ ಪುಸ್ತಕಗಳನ್ನು ಬಿಡುಗಡೆ ಮಾಡಿರುವುದು ದಾಖಲೆಯಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಾಧನೆಯನ್ನು ಶ್ಲಾಘಿಸಿದರು.

ಕೊಡವ ಸಂಸ್ಕೃತಿ, ಸಾಹಿತ್ಯ ರಕ್ಷಣೆ, ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾತನಾಡುವುದು ಸುಲಭ ಆದರೆ ಅದನ್ನು ಬರವಣಿಗೆ ರೂಪದಲ್ಲಿ ತರುವುದು ಕಷ್ಟವಾಗುತ್ತದೆ. ಬರವಣಿಗೆ ಯನ್ನು ಮಕ್ಕಳು ಕಲಿಯುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಕೊಡವ ಭಾಷೆಯ ಹೊಸ ಲಿಪಿಯ ಭವಿಷ್ಯದ ಬಗ್ಗೆ ಮತ್ತು ಅದರ ಬಳಕೆಯ ಬಗ್ಗೆ ಕೊಡವ ಭಾಷಾ ತಜ್ಞರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ತದನಂತರ ಅವರು ನೀಡುವ ಮಾರ್ಗದರ್ಶನದಂತೆ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವನ್ನು ಮಾಡಲಾಗುವುದು. ಭಾಷೆ ಹಾಗೂ ಸಂಸ್ಕöÈತಿಯ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ಅಗತ್ಯವಾಗಿರುವ ಎಲ್ಲಾ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಬೆಳ್ಳಿ ಹಬ್ಬದ ‘ಬೊಳ್ಳಿ ಚಂದೂಕ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಪ್ರತಿಯೊಬ್ಬ ಮನುಷ್ಯ ಒಂದಲ್ಲ ಒಂದು ತರದಲ್ಲಿ ಪ್ರತಿಭಾವಂತನಾಗಿರುತ್ತಾನೆ. ತಮ್ಮ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ದೊರೆತರೆ ಸಾಧನೆ ಮಾಡಬಹುದೆಂಬುದಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ. ಪುಸ್ತಕಗಳು ಸಂಗ್ರಹ ಯೋಗ್ಯವಾಗಿರಬೇಕು. ಪುಸ್ತಕ ಬರೆಯಲು ಸಮಯ ಪ್ರಜ್ಞೆ, ಜ್ಞಾನ ಹಾಗೂ ಬರಹದಲ್ಲಿ ಆಸಕ್ತಿ ಇರುವ ವರಿಂದ ಈ ಸಾಧನೆ ಸಾಧ್ಯ ಹಾಗೆಯೇ ಬರವಣಿಗೆಯಲ್ಲಿ ಸತ್ಯ ಇರಬೇಕು ಎಂದರು. ಮತ್ತೋರ್ವ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ, ಸರ್ಕಾರದ ಯಾವುದೇ ಅನುದಾನ ಇಲ್ಲದೆ ಕಳೆದ ೨೫ ವರ್ಷಗಳಿಂದ ಕೊಡವ ಸಾಹಿತ್ಯ, ಕಲೆ, ಸಂಸ್ಕೃತಿಗಳ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಾ ಬಂದಿರುವುದಿAದ ನೂರಾರು ಪ್ರತಿಭೆಗಳು ಬೆಳಕಿಗೆ ಬಂದಿದೆ. ಕೊಡವ ತಕ್ಕ್ ಎಳ್ತ್ಕಾರಡ ಕೂಟ ಒಂದು ರೀತಿಯಲ್ಲಿ ತರಬೇತಿ ಕಾರ್ಯಾಗಾರವಾಗಿ ಕೊಡವ ಭಾಷೆ, ಸಾಹಿತ್ಯ, ಕಲೆಯ ಬೆಳವಣಿಗೆಗೆ ಕೆಲಸ ಮಾಡಿದೆ. ಕೂಟ ಸ್ಥಾಪನೆಯಾದ ನಂತರ ಕೊಡವ ಭಾಷೆಯಲ್ಲಿ ಬಹಳಷ್ಟು ಕವಿಗೋಷ್ಠಿ, ವಿಚಾರಗೋಷ್ಠಿ ನಡೆದಿದ್ದು, ಪುಸ್ತಕಗಳು ಹಾಗೂ ನಾಟಕಗಳು ರಚನೆಯಾಗಿದೆ. ಕೊಡವ ಕಲೆ, ಸಾಹಿತ್ಯಲೋಕಕ್ಕೆ ದೊಡ್ಡ ಕಾಣಿಕೆಯನ್ನು ಕೂಟ ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿಸುಬ್ಬಯ್ಯ ಅವರು ಕೊಡವ ಸಾಹಿತ್ಯದ ಬಗ್ಗೆ ಯಾವುದೇ ಅರಿವಿಕೆ ಇಲ್ಲದಂತಹ ಕಾಲಘಟ್ಟದಲ್ಲಿ ಕೂಟ ಸ್ಥಾಪನೆ ಆಯಿತು. ಮಡಿಕೇರಿ ಆಕಾಶವಾಣಿ ಎಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಲಾಗಿದೆ. ಇದುವರೆಗೆ ಕವಿಗೋಷ್ಠಿ, ನಾಟಕ, ಕೊಡವ ಕಥೆ, ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಕೂಟ ರಚನೆ ಮಾಡಿದ ೧೨ ನಾಟಕಗಳನ್ನು ೧೪೦ ಕಡೆ ಪ್ರದರ್ಶನ ಮಾಡಿದೆ. ಸಾಹಿತಿಗಳು ಬರೆದ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಜನರು ಪ್ರೋತ್ಸಾಹ ನೀಡಬೇಕು. ಕೊಡವ ಭಾಷೆ, ಸಂಸ್ಕೃತಿ ಸಾಹಿತ್ಯಕ್ಕೆ ಒತ್ತು ನೀಡಬೇಕೆಂದು ಅವರು ಕರೆ ನೀಡಿದರು. ಇದೇ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಸಂದರ್ಭ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರನ್ನು ಆ ಸ್ಥಾನಕ್ಕೆ ತರುವ ಬದಲು ಭಾಷೆ, ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಜ್ಞಾನ ಇರುವ ಹಾಗೂ ಸೇವೆ ಸಲ್ಲಿಸುತ್ತಿರುವವರಿಗೆ ಮಾನ್ಯತೆ ನೀಡಿದಾಗ ಅಕಾಡೆಮಿಯ ಉದ್ದೇಶ ಪರಿಪೂರ್ಣವಾಗುತ್ತದೆ ಎಂದು ವೇದಿಕೆಯಲ್ಲಿದ್ದ ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಸುಜಾ ಕುಶಾಲಪ್ಪ ಅವರ ಗಮನಕ್ಕೆ ತಂದರು. ಕೊಡವ ಸಾಹಿತ್ಯಾಭಿವೃದ್ಧಿಗೆ ನೆರವು ನೀಡಿರುವ ಸುಮಾರು ೩೦೦ ಸಾಧಕರಿಗೆ ಈ ಸಂದರ್ಭ ಸನ್ಮಾನ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ೨೫ ಪುಸ್ತಕ ಬಿಡುಗಡೆ ವಿವರ: ಪುಡ್‌ತ ತಪುö್ಪನ ಮನಸ್ಸ್- ಚೊಟ್ಟೆಯಾಂಡ ಮಾಡ ಲಲಿತಾ ಕಾರ್ಯಪ್ಪ, ಕೊಡವ ಜಾನಪದ ಆಟ್‌ಪಾಟ್ ಪದ್ದತ್ತಿ- ಕಾಳಿಮಾಡ ಎಂ. ಮೋಟಯ್ಯ, ನಂಗ ಕೊಡವ ಹಾಗೂ ಕೊಡವಾಮೆಲ್ ಪೊಂಗ, ಕಸ್ತೂರಿರ ಕವನ- ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ವೀರ ಸೇನಾನಿ-ಉಳುವಂಗಡ ಕಾವೇರಿ ಉದಯ, ತುಳಿ ಕವನ-ನೂರೇರ ಸರಿತಾ ಉತ್ತಯ್ಯ, ವಿದ್ಯಾ-ಚಿಮ್ಮಚ್ಚಿರ ಪವಿತಾ ರಜನ್, ಕಲ್ಯಾಟಜ್ಜಪ್ಪ- ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಪೊಂಬೊಳ್‌ಚ, ಬೋಳೆಲ್ ಕುತ್ತ್ಂಗಜಿ ಹಾಗೂ ನಿಧಿ - ಕೊಟ್ರಂಗಡ ಸಜನಿ ಸೋಮಯ್ಯ, ಚೋಮಂಡ, ಚಿಣಿ, ಚಿಣಿ ಪೊಟ್ಟಿ, ಮಕ್ಕಳ ಕಥೆ- ಮೊಣ್ಣಂಡ ಶೋಭ ಸುಬ್ಬಯ್ಯ, ಭಕ್ತಿ ಪಾಟ್‌ರ ಜೊಪ್ಪೆ - ಪುಷ್ಪಾಂ ಶಿವರಾಂ ರೈ, ಮಳೆ ಕವನ, ಅಂಗದಾನ - ಚಟ್ಟಂಗಡ ರವಿ ಸುಬ್ಬಯ್ಯ, ಚೆರ್‌ಕಥೆರ ಪಯಿಂಬೆ-ಕೊಡವ ತಕ್ಕ್ ಎಳ್ತ್ಕಾರಡ ಕೂಟ, ಬಾಕೆ ಬುಟ್ಟ್ ಪೋನ ಪಿಂಞ (ಕಾದಂಬರಿ)- ಪೆಮ್ಮಂಡ ಮೀರ ಬಿದ್ದಪ್ಪ, ಗೌರು- ಬೋಡಂಗಡ ಜಗದೀಶ್ ತಿಮ್ಮಯ್ಯ, ಆತ್ಮವಿಶ್ವಾಸ -ಮಕ್ಕಳ ನಾಟಕ- ಮಾದೇಟಿರ ಪ್ರಮಿಳಾ ಜೀವನ್, ಬೊಳ್ಳೀ ನೂರ್ ಜೊಪ್ಪೆ - ಮುಕಾಟ್ಟಿರ ಮೌನಿ ನಾಣಯ್ಯ, ಮನತುದ್‌ಚ ಕವನ - ಕೊಟ್ಟಂಗಡ ಕವಿತಾ ಬೋಜಮ್ಮ, ಪೊಣ್ಣರ ಜನ್ಮ-ಮಲ್ಲಂಡ ಶೃತಿ ಮುದ್ದಪ್ಪ, ಚಾಂದ್-ಪೊಡಮಾಡ ಭವಾನಿ ನಾಣಯ್ಯ, ಚುಪ್ಪಿಯಡ ಸಾಹಿತ್ಯ-ಕೊಡವ ತಕ್ಕ್ ಎಳ್ತ್ಕಾರಡ ಕೂಟ.

ವೇದಿಕೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ನಿರ್ದೇಶಕರಾದ ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಕೂಟದ ಉಪಾಧ್ಯಕ್ಷ ಚೆಂಬಾAಡ ಶಿವಿ ಭೀಮಯ್ಯ ಸ್ವಾಗತಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಉತ್ತಪ್ಪ ವಂದಿಸಿದರು.