ಸೋಮವಾರಪೇಟೆ, ಆ. ೫: ವಾಸ್ತವಾಂಶವನ್ನು ಮುಚ್ಚಿಟ್ಟು ಕರ್ತವ್ಯ ಲೋಪದಿಂದಾಗಿ ನಕಲಿ ದಾಖಲೆ ಗಳನ್ನು ನೀಡಿದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸೆಸ್ಕ್ ಅಭಿಯಂತರ, ಜನನ-ಮರಣ ನೋಂದಣಾ ಧಿಕಾರಿಗಳು, ಆಹಾರ ಇಲಾಖಾಧಿ ಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಕುಶಾಲನಗರ ತಾಲೂಕು ಬೊಳ್ಳೂರು ಗ್ರಾಮದ ವಾಸದ ಮನೆ ಹಾಗೂ ಟಯರ್ ರಿಸೋಲಿಂಗ್ ಫ್ಯಾಕ್ಟರಿ ಜಾಗಕ್ಕೆ ಸಂಬAಧಿಸಿದAತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ, ಗರಗಂದೂರು ಲಕ್ಷö್ಮಣ್ ಎಂಬವರು ದೂರು ನೀಡಿದ್ದು, ಇದಕ್ಕೆ ಸಂಬAಧಿಸಿದAತೆ ಲೋಕಾಯುಕ್ತ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.

ಗರಗAದೂರಿನ ಲಕ್ಷö್ಮಣ್ ಅವರು ನೀಡಿದ ದೂರಿನ ಮೇರೆ, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಯಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಶ್ಯಾಂ ತಿಮ್ಮಯ್ಯ, ವೇಣುಗೋಪಾಲ್, ತಾಲೂಕು ಜನನ ಮತ್ತು ಮರಣ ನೋಂದಣಾಧಿಕಾರಿಗಳು ಹಾಗೂ ಆಹಾರ ನಿರೀಕ್ಷಕರ ವಿರುದ್ಧ ಕರ್ತವ್ಯ ಲೋಪ, ಸೆಸ್ಕ್ನ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್‌ಕುಮಾರ್ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ದೂರು ನೀಡಲಾಗಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬೊಳ್ಳೂರು ಗ್ರಾಮದ ಮನೆ ಸಂಖ್ಯೆ ೩೫೯ರಲ್ಲಿ ತಿಲಕಾನಂದ ಎಂಬವರು ವಾಸವಿದ್ದಾರೆ, ಇದು ಅವರ ಸ್ವಂತ ಮನೆಯಾಗಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಶಿಫಾರಸ್ಸು ಪತ್ರ ನೀಡಿದ್ದಾರೆ. ಆದರೆ ತಿಲಕಾನಂದ ಅವರು ೨೦೧೧ರಲ್ಲಿ ಈ ಮನೆಗೆ ವಾಸಕ್ಕೆ ಬಂದಿದ್ದು, ಇದು ಅವರ ಸ್ವಂತ ಮನೆ ಅಲ್ಲ. ಹಾಗಿದ್ದಾಗ್ಯೂ ಅಧಿಕಾರಿಗಳು ವಾಸದೃಢೀಕರಣ ಸೇರಿದಂತೆ ಇನ್ನಿತರ ದಾಖಲೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇ ಖಿಸಲಾಗಿದೆ.

ಇದರೊಂದಿಗೆ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ನಕಲಿ ಮರಣ ದೃಢೀಕರಣ ಪತ್ರ ನೀಡಿದ್ದು, ಪಡಿತರ ಚೀಟಿಯಲ್ಲಿಯೂ ಸತ್ಯಾಂಶವನ್ನು ಮುಚ್ಚಿಡಲಾಗಿದೆ. ಈ ಹಿನ್ನೆಲೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲಕ್ಷö್ಮಣ್ ಅವರು ದಾಖಲೆಗಳ ಸಹಿತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.