ಕೂಡಿಗೆ, ಆ. ೫: ಇಲ್ಲಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್. ವಿಶ್ವ, ಮತ್ತು ಪಿ.ಎನ್. ಕುಸುಮ ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ಸಿ.ಎಲ್. ವಿಶ್ವ, ಮತ್ತು ಪಿ.ಎನ್. ಕುಸುಮ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು.
೮ ಮಂದಿಯ ಆಡಳಿತದ ಮಂಡಳಿಯ ಸದಸ್ಯರಲ್ಲಿ ಓರ್ವ ಸದಸ್ಯರು ಗೈರು ಹಾಜರಿಯಾಗಿದ್ದರು.
ಈ ಸಂದರ್ಭ ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಡಿ. ರವಿ, ಜಿಲ್ಲಾ ಜೆಡಿಎಸ್, ಪ್ರಮುಖರಾದ ಆದರ್ಶ್ ತಿಮಯ್ಯ, ಸೇರಿದಂತೆ ವಿವಿಧ ಘಟಕದ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.
ಚುನಾವಣೆಯ ನಂತರ ಗ್ರಾಮಸ್ಥರು ಸೇರಿದಂತೆ ಯುವಕರ ತಂಡದವರು ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.