ಶ್ರೀಮಂಗಲ, ಆ. ೪: ಮಕ್ಕಳಿಗೆ ಒಳ್ಳೆಯ ಅವಕಾಶ ಕಲ್ಪಿಸಿ ಬೆಳೆಸಿದರೆ, ಅವರು ನಾಳೆ ನಮ್ಮ ಸಂಸ್ಕೃತಿ ಮತ್ತು ನಾಡನ್ನು ಬೆಳಗುತ್ತಾರೆ, ಅವರೊಂದಿಗೆ ನಾವು ಬೆಳೆಯುತ್ತೇವೆ ನಮ್ಮ ನಾಡು-ಸಂಸ್ಕೃತಿ ರಕ್ಷಣೆಯಾಗುತ್ತದೆ. ಇಂತಹ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಇದು ಸಹ ನಾಡಿನ ಹಾಗೂ ಸಂಸ್ಕೃತಿಯ ರಕ್ಷಣೆಗೆ ಮಾಡಿದಂತಹ ಕೆಲಸವಾಗಲಿದೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ.ಎಸ್. ಪೊನ್ನಣ್ಣ ಪ್ರತಿಪಾದಿಸಿದರು
ಕೊಡವ ಹಿತರಕ್ಷಣಾ ಬಳಗ ಕ್ಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ಆಶ್ರಯದಲ್ಲಿ ಸಂಜೆ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ‘ಕಕ್ಕಡ ಪದ್ನೆಟ್ಟ್’ ಹಬ್ಬ ಆಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶದಲ್ಲಿ ವಿಭಿನ್ನವಾದ ಸಂಸ್ಕೃತಿಯನ್ನು ಕೊಡವ ಜನಾಂಗ ಹೊಂದಿದೆ. ನೂರಾರು ಜನರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಮ್ಮ ಹಬ್ಬ ಹೊಂದಿದೆ, ಹೊರಗಿನ ಸಂಸ್ಕೃತಿಯ ಪ್ರಭಾವದ ನಡುವೆಯೂ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು, ಹಬ್ಬಗಳ ಆಚರಿಸುವ ಮೂಲಕ ಯಾರಿಗೂ ತೊಂದರೆಯಾಗದAತೆ ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾಕುಶಾಲಪ್ಪ ಮಾತನಾಡಿ, ಕೊಡಗಿನ ಭೂಮಿ, ಪರಿಸರ ಮತ್ತು ಕೊಡಗಿನ ಸಾಂಸ್ಕೃತಿಕ ಹಿರಿಮೆಯನ್ನು ನಾವೆಲ್ಲರೂ ರಕ್ಷಣೆ ಮಾಡುವ ಜವಾಬ್ದಾರಿ ಇದೆ. ಇದಕ್ಕೆ ಸರಕಾರ ಮತ್ತು ಜನಪ್ರತಿನಿಧಿಗಳ ಸಹಕಾರ ಸಹ ಬೇಕಾಗಿದೆ. ಅಲ್ಪಸಂಖ್ಯಾತ ಕೊಡವ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನಾಂಗದ ಮುಖಂಡರು, ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಕೃಷಿ ಕಸುಬು ಜೀವನಾಶ್ರಯವಾಗಿ ಮಾಡಿಕೊಂಡಿರುವ ಕೊಡವ ಜನಾಂಗ, ವ್ಯಾಪಾರ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕಾಗಿದೆ ಎಂದು ಕರೆ ನೀಡಿದರು.
ಕಳೆದ ಹಲವು ದಶಕದಿಂದ ‘ಕೊಡಗರು’ ಎಂಬ ಪದವನ್ನು ‘ಕೊಡವ’ ಎಂದು ತಿದ್ದುಪಡಿ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಈ ತಿದ್ದುಪಡಿಯನ್ನು ನೂತನ ಶಾಸಕ ಎ.ಎಸ್.ಪೊನ್ನಣ್ಣ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮಾಡುವ ಮೂಲಕ ತಮ್ಮ ಪ್ರೌಢಿಮೆ ಮತ್ತು ಬದ್ಧತೆಯನ್ನು ತೋರಿಸಿರುವ ಅವರು ಅಭಿನಂದನಾರ್ಹರು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ನಮ್ಮ ಕಾಲದಲ್ಲಿ ಕೃಷಿ ಕೆಲಸಕ್ಕೆ ಕಾರ್ಮಿಕರು ಇರುತ್ತಿರಲಿಲ್ಲ. ಪರಸ್ಪರ ಸೇರಿ ಕೆಲಸ ಮಾಡುತ್ತಿದ್ದೆವು. ಆದರಿಂದ ಒಗ್ಗಟ್ಟು ಬಲಗೊಂಡಿತ್ತು ಹಾಗೂ ಸಂಬAಧಗಳು ಬೆಸೆದಿದ್ದವು. ಈಗ ಕೊಡವ ಆಚಾರ- ವಿಚಾರಗಳನ್ನು ಇಂದಿನ ಯುವ ಸಮುದಾಯ ಸರಿಯಾಗಿ ಆಚರಣೆ ಮಾಡುವ ಮೂಲಕ ಪದ್ಧತಿ ಪರಂಪರೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕೆAದು ಕರೆ ನೀಡಿದರು. ಕೊಡವ ಯುವತಿಯರು ಅಂತರ್ಜಾತಿ ವಿವಾಹದಿಂದ ಅಲ್ಪಸಂಖ್ಯಾತ ಕೊಡವ ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೊಡವ ಸಂಸ್ಕೃತಿಯ ನೆರಳಿನಲ್ಲಿ ಪೋಷಕರು ಮಕ್ಕಳನ್ನು ಬೆಳೆಸದೇ ಕೊಡವ ಸಂಸ್ಕೃತಿಯ ಹಿರಿಮೆಯನ್ನು ತಿಳಿಸದ ಹಿನ್ನೆಲೆ ಅಂತರ್ಜಾತಿ ವಿವಾಹಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಕೊಡವ ಯುವತಿಯರು ಕೊಡವೇತರ ಯುವಕರನ್ನು ಮದುವೆ ಆಗುವುದು ಅಲ್ಪಸಂಖ್ಯಾತ ಜನಾಂಗದ ಸಂಖ್ಯೆ ಕ್ಷೀಣಿಸಲು ಹಾಗೂ ಸಂಸ್ಕೃತಿಯ ನಾಶಕ್ಕೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ತಿಳಿಸಿದ ಅವರು ಕೊಡವ ಭೂಮಿ, ಸಂಸ್ಕೃತಿ, ಪರಿಸರರ ಮೇಲೆ ಅಭಿಮಾನವಿರುವವರು ಕೊಡವನ್ನೇ ಮದುವೆಯಾಗಿ ಜನಾಂಗ ಮತ್ತು ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ ನಮ್ಮ ಸಂಸ್ಕೃತಿ, ಹಬ್ಬಗಳು, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಯುವಕರು ಮಕ್ಕಳು ಆಸಕ್ತಿ ತೋರಬೇಕು. ಹಿರಿಯರಲ್ಲಿರುವ ಸಂಸ್ಕೃತಿ, ಜಾನಪದ, ಕಲೆ ಆಚಾರ ವಿಚಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲು ಮತ್ತು ಅದರ ರಕ್ಷಣೆಗೆ ಮಕ್ಕಳು ಮತ್ತು ಯುವಕರು ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರು ಕೊಡವ ಸಂಸ್ಕೃತಿ ಉಳಿವು ಮತ್ತು ಮಕ್ಕಳಲ್ಲಿ ಈ ಬಗ್ಗೆ ಆಸಕ್ತಿ ಬೆಳೆಸಲು ಮಹಿಳೆಯರ ಪಾತ್ರ ಹಿರಿದಾಗಿದೆ ಎಂದರು.
ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾಕುಶಾಲಪ್ಪ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿಮಾಚಯ್ಯ ಅವರಿಗೆ ಸನ್ಮಾನ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಸನ್ಮಾನ
ಹತ್ತನೇ ತರಗತಿಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಎರಡನೇ ಸ್ಥಾನ ಪಡೆದ ಕೋಣನಕಟ್ಟೆ-ರುದ್ರಬೀಡು ಗ್ರಾಮದ ಮದ್ರೀರ ವಿವೇಕ್-ರಮ್ಯ ದಂಪತಿ ಪುತ್ರಿ ದೀತ್ಯ ದೇಚಮ್ಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಮ್ಮತ್ತಿ ಗ್ರಾಮದ ಪಾಲಚಂಡ ಮನು ಮುತ್ತಣ್ಣ-ರೇಷ್ಮಾ ದಂಪತಿಯ ಪುತ್ರಿ ಲಿಖಿತಾಕಾವೇರಮ್ಮ ಅವರನ್ನು ಸನ್ಮಾನ ಮಾಡಲಾಯಿತು.
ಪಂಜಿನ ಮೆರವಣಿಗೆ: ಕಾರ್ಯಕ್ರಮದ ಆರಂಭದಲ್ಲಿ ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಆಕರ್ಷಕ ಪಂಜಿನ ಮೆರವಣಿಗೆ ನಡೆಯಿತು. ಬಸ್ ನಿಲ್ದಾಣದಲ್ಲಿ ಒಡ್ಡೋಲಗಕ್ಕೆ ಸಾಮೂಹಿಕವಾಗಿ ನೂರಾರು ಕೊಡವರು ಕುಣಿದು ಸಂಭ್ರಮಿಸಿದರು.
ಸಾAಸ್ಕೃತಿಕ ಕಾರ್ಯಕ್ರಮ: ಪೊನ್ನಂಪೇಟೆ ಕೊಡವ ಸಮಾಜ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕಕ್ಕಡ ಪದ್ನೆಟ್ಟ್ ಹಬ್ಬದ ಸಾಂಪ್ರದಾಯಿಕ ಖಾದ್ಯ ಊಟೋಪಚಾರ ಸಾಮೂಹಿಕವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಸೇರಿದಂತೆ ಜನಾಂಗ ಭಾಂದವರು ಪಾಲ್ಗೊಂಡಿದ್ದರು. ರಾಜಾ ನಂಜಪ್ಪ ಸ್ವಾಗತಿಸಿ, ಲೇಖನ ಅಕ್ಕಮ್ಮ ಪ್ರಾರ್ಥಿಸಿ, ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ ವಂದಿಸಿದರು
ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೆರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ದೇವಯ್ಯ, ಖಜಾಂಚಿ ಕೋಟೆರ ಕಿಶನ್ಉತ್ತಪ್ಪ, ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿಬೋಪಣ್ಣ, ಸದಸ್ಯರುಗಳಾದ ಅಡ್ಡಂಡ ಡಾಲಿಜನಾರ್ಧನ, ಅಡ್ಡಂಡ ಸುನಿಲ್ಸೋಮಯ್ಯ, ಮಲಚೀರ ನಿಶಾನ್ಉತ್ತಪ್ಪ, ಪಟ್ರಂಗಡ ರಂಜನ್, ಚೇಂದಿರ ವಿಜು, ಆಲೇಮಾಡ ಸುಧೀರ್, ಕಳ್ಳಿಚಂಡ ಚಿಪ್ಪದೇವಯ್ಯ, ಕೋಟ್ರಂಗಡ ಬಿಪಿನ್, ಚೆಪ್ಪುಡೀರ ಸುನಿಲ್, ಅಜ್ಜಿಕುಟ್ಟಿರ ರಂಜಿ, ಕೊಣಿಯಂಡ ಸಂಜುಸೋಮಯ್ಯ, ಚೊಟ್ಟೆಕಾಳಪಂಡ ಆಶಾಪ್ರಕಾಶ್, ಸಾಂಸ್ಕೃತಿಕ ಸಂಚಾಲಕಿ ಬಲ್ಲಡಿಚಂಡ ಕಸ್ತೂರಿ ಪಾಲ್ಗೊಂಡಿದ್ದರು.