ಮಡಿಕೇರಿ, ಆ. ೪: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ.೬ರಂದು (ನಾಳೆ) ಬೆಳಿಗ್ಗೆ ೧೦ರಿಂದ ನಗರದ ಜಿ.ಟಿ. ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕಕ್ಕಡ ತೀನಿ ನಮ್ಮೆ ಕಾರ್ಯಕ್ರಮ ಜರುಗಲಿದೆ. ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಬಿ. ಮುತ್ತಪ್ಪ, ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲಾ ಪ್ರಾಂಶುಪಾಲೆ ಕೇಟೋಳಿರ ರತ್ನ ಚರ್ಮಣ ಪಾಲ್ಗೊಳ್ಳಲಿದ್ದಾರೆ. ತೆನ್ನೀರ ರಾಧಾ ವಿಚಾರ ಮಂಡಿಸಲಿದ್ದು, ಈ ಸಂದರ್ಭ ಕೂಪದಿರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಗುವುದು. ಕಕ್ಕಡ ವಿಶೇಷತೆಯ ತಿಂಡಿ- ತಿನಿಸುಗಳ ಸಹಿತ ಕಾರ್ಯಕ್ರಮ ಜರುಗಲಿರುವುದಾಗಿ ಸಂಘಟಕರು ತಿಳಿಸಿದ್ದಾರೆ.