ಕುಶಾಲನಗರ, ಆ. ೪: ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಟಾರ್ಪಲ್ ಹಾಗೂ ಕಿಟ್‌ಗಳನ್ನು ವಿತರಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಸತೀಶ್ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಟಣದ ಹಲವು ಫಲಾನುಭವಿಗಳಿಗೆ ನೀಡಲಾಯಿತು.

ಸಂಸ್ಥೆಯ ಕಾರ್ಯಕರ್ತರಾದ ಹೆಚ್.ಎಂ. ಚಂದ್ರ, ವೈಶಾಕ್, ಓಬಲ್ ರೆಡ್ಡಿ, ಮುನಿಸ್ವಾಮಿ, ಪ್ರವೀಣ್ ರಾವಲ್ ಮತ್ತು ಜಿತೇಶ್ ಪುರಿ ಇದ್ದರು.