ಕೂಡಿಗೆ, ಆ. ೪: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಬಳಿ ಕಾವೇರಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಂದಾಜು ೪೫ ರಿಂದ ೫೦ ವರ್ಷ ಪ್ರಾಯದ ಮಹಿಳೆ ಕತ್ತಿನಲ್ಲಿ ಬಿಳಿ ಬಣ್ಣದ ದಾರವಿದ್ದು ಅದರಲ್ಲಿ ಲಿಂಗ ಮತ್ತು ಒಂದು ಕೀ ಇದೆ. ನೀಲಿ ಬಣ್ಣದ ಸೀರೆ, ಹಳದಿ ಬಣ್ಣದ ಲಂಗ, ಖಾಕಿ ಬಣ್ಣದ ರವಿಕೆ ಧರಿಸಿದ್ದು, ತಲೆಗೂದಲು ಬಿಳಿಯಾಗಿರುತ್ತದೆ. ಮೃತ ಮಹಿಳೆ ವಾರಿಸುದಾರರು ಇದ್ದಲ್ಲಿ ೦೮೨೭೬-೨೭೮೪೩, ೯೪೮೦೮೯೪೯೩೬ ಸಂಪರ್ಕಿಸಲು ಪೊಲೀಸ್ ಇಲಾಖೆ ಪ್ರಕಟಣೆ ಕೋರಿದೆ.