ಶ್ರೀಮಂಗಲ, ಆ. ೪: ಪ್ರಸಕ್ತ ವರ್ಷ ಬೇಸಿಗೆ ಕಾಲದಲ್ಲಿ ಸಕಾಲದಲ್ಲಿ ಮಳೆ ಬಾರದೆ ಅತಿಯಾದ ಉಷ್ಣಾಂಶದಿAದ ಬರಗಾಲದಿಂದ ಕಾಫಿ ಬೆಳೆಗೆ ನಷ್ಟವಾಗಿದ್ದು, ಇದೀಗ ಮಳೆಗಾಲದಲ್ಲಿ ೧೦ ದಿನ ಸುರಿದ ಅತಿ ಹೆಚ್ಚಿನ ಮಳೆ ಹಾಗೂ ಬಿರುಗಾಳಿಯಿಂದ ಫಸಲಿಗೆ ಕೊಳೆರೋಗದೊಂದಿಗೆ ಕಾಫಿ ಫಸಲು ಉದುರುತ್ತಿದೆ. ಇದೀಗ ಕಾಫಿ ಮಂಡಳಿ ಪ್ರಾಥಮಿಕ ಹಂತದ ಬೆಳೆ ನಷ್ಟ ಸಮೀಕ್ಷೆ ನಡೆಸುತ್ತಿದೆ. ಆದರೂ ಮುಂದಿನ ಎರಡು ತಿಂಗಳು ಮಳೆ ಇರುವುದರಿಂದ ನಂತರದಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಅಂತಿಮ ನಷ್ಟದ ವರದಿಯನ್ನು ಸಲ್ಲಿಸಬೇಕೆಂದು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಲ್ಲಿ ಕೋರಲಾಗಿದ್ದು ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಕೊಡಗು ಬೆಳೆಕಾರರ ಒಕ್ಕೂಟ ತಿಳಿಸಿದೆ.

ಗೋಣಿಕೊಪ್ಪ ಸಿಲ್ವರ್ ಸ್ಕೆöÊ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಅವರು ಈ ಬಗ್ಗೆ ಪ್ರಸ್ತಾಪಿಸಿ, ಈಗಾಗಲೇ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಜಗದೀಶ ಅವರೊಂದಿಗೆ ಸಮಾಲೋಚನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಕಾಫಿ ಮಂಡಳಿ ಕಂದಾಯ ಇಲಾಖೆಯೊಂದಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಬೆಳೆ ನಷ್ಟದ ಸಮೀಕ್ಷೆಯನ್ನು ಕೈಗೊಂಡಿದೆ. ಆದರೆ ಇದು ಅಂತಿಮ ವರದಿ ಆಗಬಾರದು. ಮುಂದೆ ಇನ್ನೂ ಎರಡು ತಿಂಗಳು ಮಳೆ ಇರುವುದರಿಂದ ನಷ್ಟದ ಪ್ರಮಾಣ

(ಮೊದಲ ಪುಟದಿಂದ) ಮುಂದುವರಿವ ಸಾಧ್ಯತೆ ಇರುವುದರಿಂದ ಬೆಳೆ ನಷ್ಟದ ಸಮೀಕ್ಷೆ ವರದಿಯನ್ನು ಸೆಪ್ಟೆಂಬರ್ ತಿಂಗಳು ಕಳೆದ ನಂತರವಷ್ಟೇ ಅಂತಿಮಗೊಳಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಈಗಾಗಲೇ ಸಮಾಲೋಚನೆ ಸಂದರ್ಭದಲ್ಲಿ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಕಾಫಿ ಬೆಳೆ ನಷ್ಟಕ್ಕೆ ಹೆಕ್ಟೇರಿಗೆ ಎನ್. ಡಿ. ಆರ್. ಎಫ್.ರೂ. ೧೮ ಸಾವಿರ ಹಾಗೂ ರಾಜ್ಯ ಸರ್ಕಾರ ಹೆಕ್ಟೇರಿಗೆ ರೂ.೧೦ ಸೇರಿಸಿ ಹೆಕ್ಟೇರಿಗೆ ರೂ.೨೮ ಸಾವಿರದಂತೆ ಎರಡು ಹೆಕ್ಟೇರಿಗೆ ರೂ.೫೬ ಸಾವಿರ ಪರಿಹಾರ ನೀಡುತ್ತಿತ್ತು. ಆದರೆ ೨೦೨೦ರಲ್ಲಿ ಜಿಲ್ಲೆಗೆ ಕೇಂದ್ರ ಪ್ರಾಕೃತಿಕ ವಿಕೋಪ ಅಧ್ಯಯನ ತಂಡ ಮತ್ತು ೨೦೨೧ ರಲ್ಲಿ ಕೇಂದ್ರ ನೀತಿ ಆಯೋಗ ತಂಡ ಆಗಮಿಸಿದ ವೇಳೆ ಈ ಪರಿಹಾರ ಮೊತ್ತವನ್ನು ಹೆಕ್ಟೇರಿಗೆ ರೂ.೫೦ ಸಾವಿರದಂತೆ ಮತ್ತು ೫ ಹೆಕ್ಟೇರಿಗೆ ವಿಸ್ತರಿಸಬೇಕೆಂದು ಮನವಿಯನ್ನು ಕೊಡಗು ಬೆಳೆಗಾರರ ಒಕ್ಕೂಟ ಮಾಡಿತ್ತು. ಈ ಬಗ್ಗೆ ಎರಡು ತಂಡಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಕಾಫಿ ಮಂಡಳಿಯಿAದ ಸಹ ಎರಡು ತಂಡಗಳು ಅಭಿಪ್ರಾಯ ಕೇಳಿದ ಹಿನ್ನೆಲೆ ಮಂಡಳಿ ಸಹ ಈ ಶಿಫಾರಸ್ಸಿಗೆ ಸಕಾರಾತ್ಮಕವಾಗಿ ವರದಿ ನೀಡಿದೆ. ಆದರೂ ಸಹ ಕಾಫಿ ಬೆಳೆ ನಷ್ಟ ಪರಿಹಾರ ಮೊತ್ತ ಹೆಚ್ಚಳವಾಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಂಸದರು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಒತ್ತಡ ಹೇರಿ ಆದಷ್ಟು ಬೇಗ ಹೊಸ ಮೊತ್ತದ ಪರಿಹಾರವನ್ನು ಅನುಷ್ಠಾನಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಉಪನೋಂದಣಿ ಕಚೇರಿಯಲ್ಲಿ ಬೆಳೆಗಾರರು ಸಾಲ ಪಡೆಯುವಾಗ ಸಾಲದ ಮೊತ್ತದ ಶೇಕಡ ೧.೫ ರಷ್ಟು ಮೊತ್ತವನ್ನು ನೋಂದಣಿ ಶುಲ್ಕ ಎಂದು ಪಾವತಿಸಬೇಕಾಗಿತ್ತು. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಬೆಳೆಗಾರರಿಗೆ ಹೊರೆಯಾಗಿದ್ದ ಈ ಶುಲ್ಕವನ್ನು ಸರಕಾರ ರದ್ದುಪಡಿಸಿರಲಿಲ್ಲ. ಆದರೆ ಈ ಬಗ್ಗೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ನೀಡಿದ ಮನವಿಯಂತೆ ಈ ಹೆಚ್ಚುವರಿ ಶುಲ್ಕವನ್ನು ಸಹಕಾರ ಸಚಿವರು ರದ್ದು ಪಡಿಸಿದ್ದಾರೆ. ಇದರಿಂದ ಸಹಕಾರ ಸಂಘಗಳಿAದ ಸಾಲ ಪಡೆಯುವ ಬೆಳೆಗಾರರಿಗೆ ಉಳಿತಾಯವಾಗಿದ್ದು ಶಾಸಕರ ಸ್ಪಂದನೆಯನ್ನು ಸಭೆಯಲ್ಲಿ ಪ್ರಶಂಶಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸದಸ್ಯರುಗಳಾದ ಕಾಳಿಮಾಡ ತಮ್ಮ ಮುತ್ತಣ್ಣ, ಮದ್ರೀರ ಗಿರೀಶ್ ಗಣಪತಿ, ಕೋಳೆರ ಭಾರತಿ, ಚೆಂದೀರ ಸುಮಿತಾ ಅಪ್ಪಣ್ಣ, ಚೆಂದೀರ ಅಪ್ಪಣ್ಣ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ ಹಾಜರಿದ್ದರು.