ಸೋಮವಾರಪೇಟೆ, ಆ. ೪: ಹಾಲಿ ಪಿಎಸ್‌ಟಿ ಶಿಕ್ಷಕರು ಎಂದು ನೇಮಕವಾಗಿದ್ದು, ೧ ರಿಂದ ೭ನೇ ತರಗತಿಯವರೆಗೆ ಬೋಧಿಸಲು ನೇಮಕಗೊಂಡ ಶಿಕ್ಷಕರನ್ನು ಇಂದು ೧ ರಿಂದ ೫ನೇ ತರಗತಿಯವರೆಗೆ ಮಾತ್ರ ಬೋಧಿಸಲು ನಿಗಧಿಗೊಳಿಸಿರುವುದನ್ನು ಖಂಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಚನ್ನಬಸಪ್ಪ ಸಭಾಂಗಣದ ಎದುರು ಪ್ರತಿಭಟನೆ ನಡೆಸಿದರು.

೧ ರಿಂದ ೭ನೇ ತರಗತಿಗೆ ನೇಮಕವಾದ ಯಾವುದೇ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಯಾವುದೇ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವರ್ಗಾವಣೆ ಯಿಂದ ತೆರವಾದ ಹುದ್ದೆಗಳು ತನ್ನಿಂದ ತಾನೇ ಜಿಪಿಟಿ ಹುದ್ದೆಗಳಾಗಿ ಪರಿವರ್ತನೆೆ ಯಾಗಿವೆ. ಪಿಎಸ್‌ಟಿ ಶಿಕ್ಷಕರಿಗೆ ವರ್ಗಾ ವಣೆಗೆ ಸ್ಥಳಾವಕಾಶ ಸಿಗದಂತಾಗಿದೆ.

೬-೭ ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲು ಶಿಕ್ಷಕರು ವಂಚಿತರಾಗಿ ದ್ದಾರೆ. ಪ್ರಾಥಮಿಕ ಹಂತದಲ್ಲಿ ದೈಹಿಕ ಶಿಕ್ಷಣವನ್ನು ಒಂದು ವಿಷಯವಾಗಿ ಸೇರಿಸಿ ಪಠ್ಯ ನೀಡಿದ್ದು, ಬಹುತೇಕ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದಿದ್ದರೂ, ಆ ಪಠ್ಯವನ್ನು ಇರುವ ಶಿಕ್ಷಕರೆ ನಿರ್ವಹಿಸುತ್ತಿದ್ದೇವೆ. ಶಿಕ್ಷಕರನ್ನು ಹೊರತುಪಡಿಸಿ ಇತರ ಸರ್ಕಾರಿ ನೌಕರರಿಗೆ ವರ್ಗಾವಣೆಯಲ್ಲಿ ಇರದ ನಿಯಮಗಳು ಮತ್ತು ಮಾನದಂಡಗಳು ಶಿಕ್ಷಕರಿಗೆ ಮಾತ್ರ ರೂಪಿತವಾಗಿರುವುದು ಖಂಡನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ್ ಆರೋಪಿಸಿದರು.

ವ್ಯವಸ್ಥೆಯಲ್ಲಿ ಈ ಮೇಲಿನ ಎಲ್ಲಾ ದೋಷಗಳಿದ್ದು ಹಾಲಿ ಶಿಕ್ಷಕರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ. ಒಂದರಿAದ ೫ನೇ ತರಗತಿಗೆ ಸೀಮಿತಗೊಳಿಸಿರುವು ದರಿಂದ ನಾವು ಆ ತರಗತಿಯ ಮಕ್ಕಳಿಗೆ ಬೋಧಿಸುತ್ತೇವೆ ಮತ್ತು ಆ ವಿಭಾಗದ ಕೆಲಸಗಳನ್ನು ಮಾತ್ರ‍್ರ ನಿರ್ವಹಿಸುತ್ತೇವೆ. ೫ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಇತರೆ ಯಾವುದೇ

ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.

ನಮ್ಮ ಮನವಿಯನ್ನು ಈಗಾಗಲೇ ಶಾಸಕರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು ದೂರಿದರು.

ಪ್ರತಿಭಟನಾ ಸಂದರ್ಭ ಪದಾಧಿಕಾರಿಗಳಾದ ಪ್ರೇಮ, ಕವಿತಾ, ಎನ್.ಎಲ್. ಸುರೇಶ್, ಎನ್.ಎಂ. ನಾಗೇಶ್ ಉಮಾದೇವಿ, ಶಿವಕುಮಾರ್, ರವಿ, ಯೋಗೇಶ್, ಆಶಾ, ಸೌಭಾಗ್ಯ ಮತ್ತಿತರರು ಇದ್ದರು.