ಮಡಿಕೇರಿ, ಆ. ೪: ಕೊಡಗು ಜಿಲ್ಲಾ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ವೇದಿಕೆಗೆ ಸದಸ್ಯರು ಬೇಕಾಗಿದ್ದಾರೆ. ಆದ್ದರಿಂದ ಈ ಸದಸ್ಯತ್ವ ಹೊಂದಲು ಬಯಸುವವರು ವಿದ್ಯುತ್ ಕ್ಷೇತ್ರದ ಬಗ್ಗೆ ಅನುಭವವುಳ್ಳವರು ಅಥವಾ ಸೂಕ್ತ ಜ್ಞಾನ ಹೊಂದಿರುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿಯನ್ನು ತಾ. ೧೦ ರೊಳಗೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರ ಕಚೇರಿ, ಕಾರ್ಯ ಮತ್ತು ಪಾಲನೆ ವಿಭಾಗ ಮಡಿಕೇರಿ ಇ-ಮೇಲ್ eeemಜಞ@ಛಿesಛಿmಥಿsoಡಿe.oಡಿg, ಛಿesಛಿeemಜಞ @gmಚಿiಟ.ಛಿom ಈ ಕಚೇರಿಗೆ ವಿವರವನ್ನು ಸಲ್ಲಿಸುವಂತೆ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.