ಚೆಯ್ಯಂಡಾಣೆ, ಆ. ೪ : ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗಾಮದ ಚಂಡೀರ ಈರಪ್ಪ ಅವರ ಗದ್ದೆಗೆ ನಿನ್ನೆ ರಾತ್ರಿ ಲಗ್ಗೆ ಇಟ್ಟ ೪ ಕಾಡಾನೆ ಹಿಂಡು ನಾಟಿ ಮಾಡಲು ಸಿದ್ಧವಾಗಿದ್ದ ಪೈರುಗಳನ್ನು ತುಳಿದು ನಾಶಪಡಿಸಿದೆ. ಈ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ದಾಳಿ ನಡೆಸಿದರೂ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂದಾಯ ಇಲಾಖೆ, ಸರಕಾರ ಹಾಗೂ ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ಹೇಗೆ ಕೃಷಿಯನ್ನು ನಂಬಿಕೊAಡು ಬದುಕಲು ಸಾಧ್ಯ ಎಂದು ಈರಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.