ಕೂಡಿಗೆ, ಆ. ೩ : ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾ.ಪಂ. ನ ಎರಡನೇ ಅವಧಿಗೆ ಅಧ್ಯಕ್ಷ, ಉಪಾ ಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು.
ಅಧ್ಯಕ್ಷರಾಗಿ ಲತಾಬಾಯಿ (ಎಸ್.ಟಿ.ಮೀಸಲಾತಿ), ಉಪಾಧ್ಯ ಕ್ಷರಾಗಿ ಎಚ್.ಎಸ್.ಬಸವರಾಜು (ಸಾಮಾನ್ಯ ವರ್ಗ) ಅವಿರೋಧವಾಗಿ ಆಯ್ಕೆಯಾದರು. ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಎಸ್.ಬಿ.ಶ್ರೀಕಾಂತ್, ಸರಿತಾ, ಗೀತಾ, ಪ್ರದೀಪ್, ಭಾಗೀರಥಿ, ಧರ್ಮಪ್ಪ ಹಾಜರಿದ್ದರು.
ಸಿಹಿ ಹಂಚಿ ವಿಜಯೋತ್ಸವ ನಡೆ ಯಿತು. ಗ್ರಾಮದ ಪ್ರಮುಖರಾದ ಚಂದ್ರ ಶೇಖರ್, ಶ್ರೀನಿವಾಸ್, ಪ್ರಸನ್ನ, ಎನ್.ಎಸ್.ರಮೇಶ್, ಲೋಕೇಶ್, ಎಂ.ಪಿ. ಸುರೇಶ್, ಮಂಜುನಾಥ್, ಗ್ರಾಪಂ ಅಭಿ ವೃದ್ಧಿ ಅಧಿಕಾರಿ ಹೇಮಲತಾ, ಕಂದಾಯ ಇಲಾಖೆ ಸಿಬ್ಬಂದಿಗಳಾದ ಸಂತೋಷ್, ಲೋಹಿತ್, ಚೇತನ್ ಇದ್ದರು.