ನೀರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ನೀರಿಲ್ಲದೆ ಯಾವುದೇ ಗಿಡ, ಮರ, ಬಳ್ಳಿ, ಪ್ರಾಣಿ ಸಂಕುಲ, ಮನುಷ್ಯರು ಕೂಡ ಜೀವಿಸಲು ಸಾಧ್ಯವೇ ಇಲ್ಲ. ನೀರಿಲ್ಲದೆ ಯಾವುದೇ ಬೆಳೆ, ವಸ್ತುಗಳನ್ನು ಕೂಡ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ನೀರಿಲ್ಲದೆ ಜಗತ್ತೇ ಇಲ್ಲ. ಹಾಗಾಗಿ ಸೃಷ್ಟಿಯ ಜಗತ್ತಿನ ಭೂಭಾಗದಲ್ಲಿ ಬಹುಭಾಗ ನೀರಿನಿಂದಾವೃತವಾಗಿದೆ.

ನೀರು ಜೀವನಕ್ಕೆ ಎಷ್ಟು ಅವಶ್ಯವೋ ಅದರಷ್ಟೇ ನೀರಿನ ಬಳಕೆಯೊಂದಿಗೆ ತಯಾರು ಮಾಡಲಾಗುವ ಚಹಾ ಕೂಡ ಮನುಷ್ಯ ಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ದಣಿದ ಮನಸ್ಸಿಗೆ ಉಲ್ಲಾಸಕ್ಕಾಗಿ ಚಹಾ ಸೇವನೆ ರೂಢಿಯಾಗಿದೆ. ನೀರು-ಚಹಾದ ನಂತರ ಅತಿ ಹೆಚ್ಚಿನ ಬಳಕೆಯಲ್ಲಿರುವದು ಬಿಯರ್. ಹಾಗಾಗಿ ಬಿಯರ್ ವಿಶ್ವದ ಅತ್ಯಂತ ಪ್ರಸಿದ್ಧ ಪಾನೀಯವೆಂಬ ಖ್ಯಾತಿಗಳಿಸಿದೆ ಎಂದರೆ ಅಚ್ಚರಿಯಾದರೂ ದಿಟ...!

ಸಾಮಾನ್ಯವಾಗಿ ಸಭೆ-ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ಮನರಂಜನೆಗಾಗಿ ಬಿಯರ್ ಸೇವನೆ ಮಾಡಲಾಗುತ್ತದೆ. ಮನಸ್ಸಿಗೆ ಒಂದಿಷ್ಟು ಆಹ್ಲಾದ ನೀಡುವ ಬಿಯರ್ ಒಂಚೂರು ಹೆಚ್ಚಾದರೆ ಮುದವನ್ನೂ ನೀಡುತ್ತದೆ. ಹಾಗಾಗಿ ಮದ್ಯಪ್ರಿಯರು ಒಂದಷ್ಟು ಹೆಚ್ಚಾಗೇ ಹೀರುತ್ತಾರೆ. ಸಂತೋಷವಾದಾಗಲೂ, ದುಃಖವಾದಾಗಲೂ, ಏಕಾಂಗಿಯಾಗಿರುವಾಗಲೂ, ನಿದ್ರೆ ಮಾಡಲೂ ಬಿಯರ್ ಕುಡಿಯುವವರು ಇದ್ದಾರೆ. ‘ಮದ್ಯ’ವೆಂದೇ ಪರಿಗಣಿಸಲ್ಪಟ್ಟಿರುವ ಈ ಬಿಯರ್‌ಗೂ ಜಗತ್ತಿನಲ್ಲಿ ಮಹತ್ವವಿದೆ ಎಂದರೆ ನಂಬಲಾಗದು. ಇದರ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ದಿನವೊಂದನ್ನು ನಿಗದಿಪಡಿಸಲಾಗಿದ್ದು, ಇಂದು ಅಂರ‍್ರಾಷ್ಟಿçÃಯ ಬಿಯರ್ ದಿನವಾಗಿದೆ...!

ಎಲ್ಲ ವಯೋಮಾನದವರ ಅತ್ಯಂತ ಜನಪ್ರಿಯ ಪಾನೀಯವಾಗಿರುವ ಈ ಬಿಯರ್ ನೀರು ಮತ್ತು ಚಹಾದ ನಂತರದ ವಿಶ್ವದ ಅತ್ಯಂತ ಪ್ರಸಿದ್ಧ ಪಾನೀಯವೆಂಬ ಖ್ಯಾತಿ ಗಳಿಸಿದೆ. ಅತ್ಯಂತ ಹಳೆಯ ಪಾನೀಯವಾಗಿರುವ ಬಿಯರ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿ, ದಣಿವಾರಿಸಿದರೆ, ಒತ್ತಡದಲ್ಲಿರುವವರ ಮನಸ್ಸಿಗೆ ಮುದ ನೀಡುವದರೊಂದಿಗೆ ಚಿಂತೆ ದೂರ ಮಾಡುತ್ತದೆ. ವಿಶೇಷ ಸಂದರ್ಭ - ಆಚರಣೆಗಳಲ್ಲಿ ಬಿಯರ್ ಜೊತೆಗಿದ್ದರೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಬಿಯರ್ ಎಲ್ಲರ ಅಚ್ಚುಮೆಚ್ಚಿನ ಪಾನೀಯವಾಗಿದೆ.

೨೦೦೭ ರಲ್ಲಿ ಜಾರಿಗೆ

ಸ್ನೇಹಿತರೊಂದಿಗೆ ಒಂದುಗೂಡಲು, ಬಿಯರ್‌ನ ರುಚಿಯನ್ನು ಆಸ್ವಾದಿಸುವ ಸಲುವಾಗಿ ಅಂರ‍್ರಾಷ್ಟಿçÃಯ ಬಿಯರ್ ದಿನವನ್ನು ಆಚರಣೆಗೆ ತರಲಾಗಿದೆ.

ಬಿಯರ್ ಹಳೆಯ ಪಾನೀಯವಾಗಿದ್ದರೂ ದಿನಾಚರಣೆಯನ್ನು ಇತ್ತೀಚಿನ ವರ್ಷಗಳಿಂದ ಜಾರಿಗೆ ತರಲಾಗಿದೆ. ೨೦೦೭ರಲ್ಲಿ ಕ್ಯಾಲಿಫೊರ್ನಿಯಾದ ಸಾಂಟಾ ಕ್ರೂಜ್‌ನಲ್ಲಿ ಜೆಸ್ಸೆ ಅವ್ಶಲೋಮೊವ್ ಈ ಆಚರಣೆಯನ್ನು ಜಾರಿಗೆ ತಂದರು.

ಪ್ರಾರಂಭದಲ್ಲಿ ಅಂರ‍್ರಾಷ್ಟಿçÃಯ ಬಿಯರ್ ದಿನವು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಸಣ್ಣ ಸ್ಥಳೀಯ ಕಾರ್ಯಕ್ರಮದೊಂದಿಗೆ ಆರಂಭಗೊAಡು ಇದಿಗ ವಿಶ್ವದ ೨೦೭ ನಗರಗಳು, ೮೦ ದೇಶಗಳು ಮತ್ತು ೬ ಖಂಡಗಳನ್ನು ವ್ಯಾಪಿಸಿ ವಿಶ್ವಾದ್ಯಂತ ಹಬ್ಬದ ಆಚರಣೆಯಾಗಿ ಬೆಳೆದಿದೆ. ೨೦೦೭ ರಿಂದ ೨೦೧೨ ರವರೆಗೆ ಅಂರ‍್ರಾಷ್ಟಿçÃಯ ಬಿಯರ್ ದಿನವನ್ನು ಆಗಸ್ಟ್ ೫ ರಂದು ಆಚರಿಸಲಾಯಿತು. ೨೦೧೨ ರ ನಂತರ ಸಂಸ್ಥಾಪಕರು ಅಭಿಮಾನಿಗಳ ಸಮೀಕ್ಷೆ ನಡೆಸಿ ಈ ಆಚರಣೆಯನ್ನು ಆಗಸ್ಟ್ ಮೊದಲ ಶುಕ್ರವಾರಕ್ಕೆ ನಿಗದಿಪಡಿಸಿದರು. ಅಂದಿನಿAದ ವರ್ಷಂಪ್ರತಿ ಆಗಸ್ಟ್ ಮೊದಲ ಶುಕ್ರವಾರದಂದು ಅಂರ‍್ರಾಷ್ಟಿçÃಯ ಬಿಯರ್ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನದಲ್ಲಿ ಭಾಗವಹಿಸುವವರು ಪರಸ್ಪರ ಪಾನೀಯಗಳನ್ನು ಖರೀದಿಸುವ ಮೂಲಕ, ಪರಸ್ಪರ ‘ಬಿಯರ್ ಉಡುಗೊರೆ' ನೀಡುವ ಮೂಲಕ ಮತ್ತು ಬ್ರೂವರ್‌ಗಳು, ಬಾರ್ಟೆಂಡರ್‌ಗಳು, ಬಿಯರ್ ತಂತ್ರಜ್ಞರಿಗೆ ಕೃತಜ್ಞತೆ ವ್ಯಕ್ತಪಡಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ದಿನವನ್ನು ಹೆಚ್ಚಾಗಿ ಕ್ಲಬ್, ಪಬ್, ಬ್ರುವರಿಸ್ ಹಾಗೂ ಬಿಯರ್ ಪ್ರೇಮಿಗಳು ನಿಗದಿಪಡಿಸಿಕೊಳ್ಳುವ ಸ್ಥಳಗಳಲ್ಲಿ ಆಚರಿಸಲಾಗುತ್ತದೆ.

ಹಳೆಯ ಸಾರಾಯಿ

ಬಿಯರ್ ವಿಶ್ವದ ಅತ್ಯಂತ ಹಳೆಯ ಪಾನೀಯವಾಗಿದೆ. ಹಳೆಯ ರೆಕಾರ್ಡ್ ರೆಸಿಪಿಯಾಗಿದೆ. ಮೊದಲೇ ತಿಳಿದಿರುವ ಹಾಗೆ ಬಾರ್ಲಿ ಬಿಯರ್ ಅನ್ನು ಸುಮಾರು ೫,೦೦೦ ಬಿ.ಸಿ.ಯಲ್ಲಿ ಗುರುತಿಸಬಹುದಾಗಿದೆ. ಜರ್ಮನಿಯ ವೈಹೆನ್‌ಸ್ಟೆಫಾನ್‌ನಲ್ಲಿ ವೈಹೆನ್ಸ್ಟೀಫನ್ ವಿಶ್ವದ ಅತ್ಯಂತ ಹಳೆಯ ಕಾರ್ಯಾಚರಣಾ ಸಾರಾಯಿ ಕೇಂದ್ರವಾಗಿದೆ.

ಬಿಯರ್ ವಿಶ್ವಾದ್ಯಂತ ಅತ್ಯಂತ ಜನಪ್ರಿಯ ಆಲ್ಕೊಹಾಲ್‌ಯುಕ್ತ ಪಾನೀಯವಾಗಿದೆ. ವಾಸ್ತವವಾಗಿ, ನೀರು ಮತ್ತು ಚಹಾದ ನಂತರ ಪ್ರಪಂಚದಲ್ಲಿ ಎಲ್ಲರೂ ಸಾಮಾನ್ಯವಾಗಿ ಸೇವಿಸುವ ಪಾನೀಯವಾಗಿದೆ.

ವಿಶ್ವದ ಪ್ರಬಲ ಪಾನೀಯ ‘ಸ್ನೇಕ್ ವೆನಮ್’ ಬಿಯರ್ ಆಗಿದ್ದು, ಪರಿಮಾಣದ ಪ್ರಕಾರ ಶೇ. ೬೭.೫ ಆಲ್ಕೋಹಾಲ್ ಅನ್ನು ಹೊಂದಿದೆ.

ಈ ಬಿಯರ್ ಅನ್ನು ೨೦೧೭ ರಲ್ಲಿ ಸ್ಕಾಟಿಷ್ ಬ್ರೂವರಿ ಬ್ರೂಮೀಸ್ಟರ್ ತಯಾರಿಸಿದ್ದಾರೆ.

ಬಿಯರ್‌ನಿಂದ ಪ್ರಯೋಜನಗಳು

ಮಾಲ್ಟೆಡ್ ಧಾನ್ಯಗಳು