ಆಲೂರು-ಸಿದ್ದಾಪುರ, ಆ. ೩: ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾ ಶಕ್ತಿಯೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಬಡಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಬಡಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು.

ಈ ಶಾಲೆಯಲ್ಲಿ ೩೦ರಿಂದ ೪೫ ವಿದ್ಯಾರ್ಥಿಗಳು ಪ್ರತಿವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಶಾಲೆಯ ಮುಂಭಾಗ ಹೂತೋಟ ಹಾಗೂ ಗೋಡೆಯಲ್ಲಿ ಸರ್ಕಾರಿ ಬಸ್ ಮತ್ತು ರೈಲು ಮಾದರಿಯ ಚಿತ್ರ ಬಿಡಿಸಿ ಇದರ ಆಕರ್ಷಣೆಯಿಂದ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಶಾಲಾ ವ್ಯಾಪ್ತಿಯಲ್ಲಿ ಕೃಷಿಕರು, ಕೂಲಿ ಕಾರ್ಮಿಕರು ಹೆಚ್ಚಿರುವುದರಿಂದ ಖಾಸಗಿ ಶಾಲೆಗಳಿಗೆ ಯಾರು ಹೋಗುತ್ತಿಲ್ಲ. ಇದೆ ಶಾಲೆಗೆ ಸುಮಾರು ೨-೩ ಕಿ.ಮಿ. ದೂರದಿಂದ ಬರುತ್ತಿದ್ದಾರೆ. ದೂರದ ಮಕ್ಕಳನ್ನು ಈ ಶಾಲೆಯಲ್ಲಿರುವ ಮೂವರು ಶಿಕ್ಷಕರು ತಮ್ಮ ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದು, ಪೋಷಕರ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಶಾಲೆಯ ಶಿಕ್ಷಕಿ ಜಾನ್ಸಿ ಶಾಲೆಗೆ ಸೇರಿದ ವರ್ಷದಿಂದ ಈ ಶಾಲೆಯ ಮಕ್ಕಳಿಗೆ ಸ್ವೆಟರ್ ಹಾಗೂ ಟಿಶÀರ್ಟ್ ನೀಡುತ್ತಿದ್ದಾರೆ. ಜೊತೆಗೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ದಾನಿಗಳ ಸಹಕಾರದಿಂದ ಅದನ್ನು ಮುಂದುವರೆಸಿದ್ದಾರೆ.

ಶಾಲೆಯ ಮುಂಭಾಗದಲ್ಲಿರುವ ಹೂತೋಟದ ನಡುವೆ ತರಕಾರಿ ಗಿಡಗಳನ್ನು ಬೆಳೆದಿದ್ದು, ಬಿಸಿಯೂಟಕ್ಕೆ ಇಲ್ಲಿ ಬೆಳೆಯುವ ತರಕಾರಿಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಗ್ರಾಮಸ್ಥರ ಸಹಕಾರವಿದೆ ಎನ್ನುತ್ತಾರೆ ಈ ಶಾಲೆಯ ಶಿಕ್ಷಕರು.

ಈ ಶಾಲೆ ಅಂಕನಹಳ್ಳಿ ಆಲೂರು ಶನಿವಾರಸಂತೆಗೆ ಹೋಗುವ ರಸ್ತೆ ಬದಿಯಲ್ಲಿ ಇರುವುದರಿಂದ ದಾರಿಹೋಕರು ಈ ಶಾಲೆಯನ್ನು ನೋಡಿ ಭೇಟಿ ನೀಡದೆ ಮುಂದೆ ತೆರಳುವುದಿಲ್ಲ.

ಆಸಕ್ತಿಯಿಂದ ಈ ಶಾಲೆಗೆ ಭೇಟಿ ನೀಡಿ ಹೂತೋಟ ಹಾಗೂ ಗೋಡೆಯಲ್ಲಿ ಅರಳಿರುವ ಸರ್ಕಾರಿ ಬಸ್ ರೈಲ್ ನೋಡಿ ಹೂ ತೋಟದಲ್ಲಿ ಒಂದು ಸುತ್ತು ಹಾಕಿ ಮುಂದೆ ಸಾಗುತ್ತಾರೆ. - ದಿನೇಶ್ ಮಾಲಂಬಿ