ಮಡಿಕೇರಿ, ಆ. ೩: ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್ ಅಂಗ ಸಂಸ್ಥೆಗಳ ವತಿಯಿಂದ ತಾ. ೧೨ ರಂದು ಮೂರ್ನಾಡು ಗೌಡ ಸಮಾಜದಲ್ಲಿ ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಯೋಗ ಪರ್ಯಟನ ಕಾರ್ಯಕ್ರಮ ಜರುಗಲಿದೆ.
ಕೋಟದ ಮೂಡುಗಿಳಿಯಾರು ವಿನ ಸರ್ವಕ್ಷೇಮ ಆಸ್ಪತ್ರೆಯ ಎಂ.ಡಿ ಹಾಗೂ ಸಿ.ಇ.ಓ. ಡಾ. ವಿವೇಕ ಉಡುಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.