ಮಡಿಕೇರಿ, ಆ. ೩: ಕೊಡವ ನ್ಯಾಷನಲ್ ಕೌನ್ಸಿಲ್‌ನ ಬಹುಕಾಲದ ಬೇಡಿಕೆಯಾಗಿರುವ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಒದಗಿಸಲು ಆಯೋಗವೊಂದನ್ನು ರಚಿಸುವಂತೆ ಒತ್ತಾಯಿಸಿ ಮಾಜಿ ರಾಜ್ಯಸಭಾ ಸದಸ್ಯ, ವಕೀಲ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಉಚ್ಚ ನ್ಯಾಯಾಲಯದಲ್ಲಿ ಹಾಕಿದ್ದ ಅರ್ಜಿ ಸಂಬAಧ ಖುದ್ದು ಆಗಮಿಸಿ ವಾದ ಮಂಡಿಸಿದರು. ಭೂ-ರಾಜಕೀಯ ಸ್ವಾಯತ್ತತೆ ದೊರಕುವಂತೆ ಆಯೋಗವೊಂದನ್ನು ರಚಿಸುವಂತೆ ಸ್ವಾಮಿ ಹಾಗೂ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ಅವರು ಈ ಹಿಂದೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ಮೊದಲ ವಿಚಾರಣೆ ನಡೆದಿದ್ದು, ಸ್ವಾಮಿ ಅವರು ಹಾಜರಿದ್ದು, ಚೀಫ್ ಜಸ್ಟೀಸ್ ಪ್ರಸನ್ನ ಬಿ ವರಾಲೆ, ಜಸ್ಟಿಸ್ ಕಮಲ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ವಾದ ಮಂಡಿಸಿದರು.
ಅರ್ಜಿ ಸಂಬAಧ ಉತ್ತರಿಸಬೇಕಾಗಿದ್ದ ಕೇಂದ್ರ ಕಾನೂನು ಇಲಾಖೆ, ಕೇಂದ್ರ ಗೃಹ ಇಲಾಖೆ ಹಾಗೂ ಕರ್ನಾಟಕ ಸರಕಾರ ಪ್ರತಿಕ್ರಿಯಿಸಲು ೮ ವಾರಗಳ ಅವಧಿ ಕೋರಿದ್ದು, ಉಚ್ಚ ನ್ಯಾಯಾಲಯವು ೪ ವಾರಗಳ ಗಡುವನ್ನು ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೫ಕ್ಕೆ ನಿಗದಿಪಡಿಸಿದೆ.
ಸಿ.ಎನ್.ಸಿ ಪರ ವಕೀಲರಾದ ನಾರಾಯಣ್ ಕೀರನ್, ವಿಕ್ರಂ ಹೆಗಡೆ ಹಾಗೂ ಪರ್ಥ್ ಅವರುಗಳು ಹಾಜರಿದ್ದರು. ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ, ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಶ್ರೇಯಾ ನಾಚಪ್ಪ, ಕಾಂಡೆರ ಸುರೇಶ್, ಪಾರುವಂಗಡ ನವೀನ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚೆಂಬಾAಡ ಜನತ್, ಬೇಪಡಿಯಂಡ ದಿನು, ಕಿರಿಯಮಾಡ ಶರಿನ್, ಅಜ್ಜಿಕುಟ್ಟೀರ ಲೋಕೇಶ್, ಪುಲ್ಲೇರ ಕಾಳಪ್ಪ, ವಿರಾಟ್ ಹಿಂದೂ ಸಂಗಮದ ಸದಸ್ಯರಾದ ರವಿಶಂಕರ್ ಹಾಗೂ ನಟರಾಜ್ ಅವರುಗಳು ಬೆಂಗಳೂರಿನಲ್ಲಿ ಸ್ವಾಮಿ ಅವರನ್ನು ಸ್ವಾಗತಿಸಿದರು.