ವೀರಾಜಪೇಟೆ, ಆ. ೪: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ವೇದಿಕೆ ಕೊಡಗು ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಇತಿಹಾಸ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ವಹಿಸಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ, ಕಾವೇರಿ ಎಜುಕೇಷನ್ ಸೊಸೈಟಿಯ ಹಿಂದೆ ನಾವು ಹೇಗಿದ್ದೆವು ಎಂಬುದನ್ನು ತಿಳಿಯಬೇಕಾದರೆ ನಾವು ಇತಿಹಾಸವನ್ನು ಓದಲೇಬೇಕು. ಇತಿಹಾಸವನ್ನು ನಾವು ಎಂದಿಗೂ ಮರೆಯಬಾರದು. ಅದು ಸ್ವಾರಸ್ಯಕರವಾದ ವಿಷಯವಾಗಿದೆ ಎಂಬುದಾಗಿ ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಅವರು ಭಾಗವಹಿಸಿ, ಇತಿಹಾಸದ ಮಹತ್ವ, ಭಾರತದ ಚರಿತ್ರೆಯನ್ನು ಮರೆಯಬಾರದು. ನಮ್ಮ ಭಾರತಾಂಬೆಯ ಚರಿತ್ರೆಯನ್ನು ಎಲ್ಲೆಲ್ಲೂ ಹಬ್ಬಿಸುವ ಕೆಲಸವನ್ನು ಉಪನ್ಯಾಸಕರು ಮಾಡಬೇಕೆಂಬುವುದಾಗಿ ಕಿವಿಮಾತು ಹೇಳಿದರು.

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಂಪಾಜೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಲೋಕ್ಯಾ ನಾಯ್ಕ್, ಕೊಡಗು ಇತಿಹಾಸ ವೇದಿಕೆ ಅಧ್ಯಕ್ಷ ನಾಗರಾಜು ಹಂಡ್ರAಗಿ, ಕಾರ್ಯಾಗಾರದ ‘ಪ್ರಾಜೆಕ್ಟ್ ಮತ್ತು ಅಸೈನ್‌ಮೆಂಟ್‌ಗಳ ಬಗ್ಗೆ ಮತ್ತು ಅಂಕಗಳನ್ನು ನೀಡುವುದರ ಬಗ್ಗೆ ಉಪನ್ಯಾಸಕರಿಗೆ ತಿಳಿಸಿಕೊಟ್ಟರು.

ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು. ೨೦೨೨-೨೦೨೩ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಕಲಾ ವಿಭಾಗ ಇತಿಹಾಸ ವಿಷಯದಲ್ಲಿ ಶೇಕಡ ೧೦೦ ಫಲಿತಾಂಶಕ್ಕೆ ಕಾರಣರಾದ ಹನ್ನೆರಡು ಇತಿಹಾಸ ಸಾಧಕ ಉಪನ್ಯಾಸಕರುಗಳನ್ನು ಕೊಡಗು ಇತಿಹಾಸ ವೇದಿಕೆ ಸಂಘದಿAದ ಸನ್ಮಾನಿಸಲಾಯಿತು.

ಆರಂಭದಲ್ಲಿ ದೀಪು ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡೈನಾ ಸ್ವಾಗತಿಸಿ, ಇತಿಹಾಸ ಉಪನ್ಯಾಸಕಿ ಅನುಪಮ. ಸಿ.ಪಿ. ನಿರೂಪಿಸಿ, ವಂದಿಸಿದರು.

ಇತಿಹಾಸ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ವಿವಿಧ ಕಾಲೇಜುಗಳ ಉಪನ್ಯಾಸಕ ವೃಂದದವರು ಮತ್ತು ಕಾವೇರಿ ಪದವಿಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಜರಿದ್ದರು.