ಕೂಡಿಗೆ, ಆ. ೪: ಹಾರಂಗಿ ಅಣೆಕಟ್ಟೆಯು ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿ ಕಾವೇರಿ ನೀರಾವರಿ ನಿಗಮ ಹಾಗೂ ನೀರಾವರಿ ಇಲಾಖೆ ನಾಲೆಗಳ ಮೂಲಕ ನೀರನ್ನು ಹರಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆಯಾದ ಭತ್ತದ ನಾಟಿಗೆ ಸಂಬAಧಿಸಿದAತೆ ಗದ್ದೆಗಳ ಸಿದ್ಧತೆಯಲ್ಲಿ ಸಿದ್ಧರಾಗಿದ್ದಾರೆ.

ಈ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಟಿ ಗದ್ದೆಗಳನ್ನು ಸಿದ್ಧತೆ ಮಾಡುವ ಸಂದರ್ಭದಲ್ಲಿ ಸಾವಯವ ಗೊಬ್ಬರವನ್ನು ಹೆಚ್ಚು ಬಳಕೆ ಮಾಡುವದರಿಂದ ಮೂಲಕ ಭೂಮಿಯ ಲವಣಾಂಶವನ್ನು ಹೆಚ್ಚಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯು ಹೆಚ್ಚಾಗಿ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಯಾವುದೇ ರೋಗ ಹರಡದಂತೆ ತಡೆಗಟ್ಟಲು ಸಾವಯವ ಗೊಬ್ಬರ ಪೂರಕ ಹಾಗೂ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಮಾಡುತ್ತದೆ.

ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ನಾಟಿಗದ್ದೆಗಳನ್ನು ಸಿದ್ಧತೆ ಮಾಡುವ ಸಂದರ್ಭದಲ್ಲಿ ಎಲೆ ಗೊಬ್ಬರ ಮತ್ತು ಸಾವಯವ ಗೊಬ್ಬರ. ಎರೆಹುಳು ಗೊಬ್ಬರಕ್ಕೆ ಪೂರಕವಾದ ಸೆಣಬಿನ ಬೀಜದ ಸಸಿಗಳನ್ನು ಬೆಳೆಸಿಕೊಂಡು ನಾಟಿ ಗದ್ದೆಗಳ ಉಳುಮೆ ಮಾಡುವ ಸಮಯದಲ್ಲಿ ನೀರು ಮಿಶ್ರಣವಾಗಿ ಉಳುಮೆ ಮಾಡುವಾಗ ಮಣ್ಣಿನ ಸವಕಳಿ ಮೂಲಕ ಉತ್ತಮ ಗುಣಮಟ್ಟದ ಬೆಳೆ ತೆಗೆಯಬಹುದು. ಅದರಂತೆಯೇ ಅಚ್ಚುಕಟ್ಟು ಪ್ರದೇಶದ ರೈತರು ಸಾವಯವ ಗೊಬ್ಬರದ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸೋಮವಾರಪೇಟೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ಕುಶಾಲನಗರ ತಾಲೂಕು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾವಯವ ಗೊಬ್ಬರವನ್ನು ಹೆಚ್ಚು ಬಳಕೆ ಮಾಡಿಕೊಳ್ಳುವ ಬಗ್ಗೆ ಸಮಗ್ರವಾದ ಮಾಹಿತಿಯನ್ನು ರೈತರಿಗೆ ನೀಡಿದರು.

ಕೃಷಿ ಅಧಿಕಾರಿ ತಾಲೂಕಿನ ವಿವಿಧ ಗ್ರಾಮಗಳಾದ ತೊರೆನೂರು, ಶಿರಂಗಾಲ, ಹೆಬ್ಬಾಲೆ, ಹುಲುಸೆ ಮಾದಲಾಪುರ, ಹುದುಗೂರು ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಭತ್ತದ ನಾಟಿಗೆ ಗದ್ದೆಗಳನ್ನು ಉಳುಮೆ ಮಾಡುವ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮರ್ಪಕವಾದ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ, ಸೇರಿದಂತೆ ಪ್ರಗತಿಪರ ರೈತರುಗಳಾದ ಕಫೀನಪ್ಪ, ನಾಗರಾಜ್, ದಿವಾಕರ್, ಪ್ರಭಾಕರ್ ಇದ್ದರು.