ಮಡಿಕೇರಿ, ಆ. ೪: ಸಂಪಾಜೆಯಲ್ಲಿ ತಡರಾತ್ರಿ ಹೊಟೇಲೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ನಡೆದಿದೆ.
ಸಂಪಾಜೆ ಚೆಕ್ಪೋಸ್ಟ್ ಬಳಿ ಇರುವ ಹೊಟೇಲ್ ಸ್ವಾಗತ್ಗೆ ಕಳ್ಳರು ನುಗ್ಗಿ ಕೈಚಳಕ ತೋರಲು ಪ್ರಯತ್ನಪಟ್ಟಿದ್ದಾರೆ. ಹೊಟೇಲ್ ಮಾಲೀಕ ಚೆನ್ನಪ್ಪ ಅನಾರೋಗ್ಯದಿಂದ ಒಂದು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಾರೂ ಇಲ್ಲದ ಸಂದರ್ಭದಲ್ಲಿ ಹಿಂಬದಿ ಬಾಗಿಲಿನಿಂದ ಬೀಗ ಒಡೆದು ಕಳ್ಳರು ನುಗ್ಗಿದ್ದಾರೆ. ಈ ವೇಳೆ ಶಬ್ದ ಕೇಳಿ ಬಂದ ಹಿನ್ನೆಲೆ ಪಕ್ಕದ ಮನೆಯವರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಆದರೆ ಎಚ್ಚೆತ್ತ ಕಳ್ಳರು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ.