ಸೋಮವಾರಪೇಟೆ, ಆ. ೨: ಕಳೆದ ೧೦ ದಿನಗಳ ಕಾಲ ಆರ್ಭ ಟಿಸಿದ ಪುಷ್ಯ ಮಳೆಗೆ ಸೋಮ ವಾರಪೇಟೆ ವ್ಯಾಪ್ತಿಯ ಕೆರೆಗಳು ಬಹುತೇಕ ಭರ್ತಿಯಾಗಿವೆ.

ಬೇಸಿಗೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿ ಬತ್ತುವ ಹಂತದಲ್ಲಿದ್ದ ಕೆರೆಗಳು ಜೀವಕಳೆ ಪಡೆದುಕೊಂ ಡಿದ್ದು, ಮಳೆಯಿಂದಾಗಿ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ವಾಡಿಕೆಯಂತೆ ಪುನರ್ವಸು ಮಳೆ ಹೆಚ್ಚು ಸುರಿಯಬೇಕಿತ್ತು. ಆದರೆ ಪ್ರಸಕ್ತ ವರ್ಷ ಕೊನೆಯ ಎರಡು ದಿನಗಳು ಮಾತ್ರ ಪುನರ್ವಸು ಆರ್ಭಟಿಸಿದರೆ ಪುಷ್ಯ ಮಳೆಯು ಆರಂಭದಿAದಲೇ ವರ್ಷಾಧಾರೆ ಸುರಿಸಿದ ಹಿನ್ನೆಲೆ ಕೆರೆಗಳು ಬಹುತೇಕ ಭರ್ತಿಯಾಗಿದೆ.

ಇದರೊಂದಿಗೆ ಸಣ್ಣಪುಟ್ಟ ನದಿ ತೊರೆಗಳು, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಪುಷ್ಯ ಮಳೆಯ ಆರ್ಭಟ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಕಂಡುಬAದಿದೆ. ತಾ. ೩ ರಿಂದ ಆಶ್ಲೇಷ ಮಳೆ ಆರಂಭ ಗೊಳ್ಳುತ್ತಿದೆ. ಪುಷ್ಯ ಮಳೆಯ ಆರ್ಭಟಕ್ಕೆ ಪಟ್ಟಣದ ಆನೆಕೆರೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆನೆಕೆರೆ ತುಂಬಲು ಇನ್ನೂ ಐದಾರು ಅಡಿ ಬಾಕಿ ಇದೆ. ಇದರೊಂದಿಗೆ ಚೌಡ್ಲು ಕೆರೆ ಹಾಗೂ ಯಡೂರು ದೇವರ ಕೆರೆಗಳು ಭರ್ತಿಯಾಗಿವೆ.