ಮಡಿಕೇರಿ, ಆ. ೧: ಭಾರತ ಸರ ಕಾರದ ನ್ಯಾಷ ನಲ್ ಟೆಸ್ಟಿಂಗ್ ಏಜೆನ್ಸಿ (ಓಖಿಂ) ನಡೆಸಿರುವ ಎಇಇ ಮತ್ತು ಎಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಜಿಲ್ಲೆಯ ಯುವಕ ಚೆಕ್ಕೇರ ಕಾರ್ಯಪ್ಪ ಅರ್ಹತೆ ಗಳಿಸಿ ಸಾಧನೆ ತೋರಿದ್ದಾರೆ.
ಇದೀಗ ಇವರು ಧಾರವಾಡದ ಐಐಟಿ ಕಾಲೇಜಿಗೆ ನೇರ ಪ್ರವೇಶ ಪಡೆದಿದ್ದಾರೆ. ಕಾರ್ಯಪ್ಪ ಮೂಲತಃ ಹುದಿಕೇರಿಯ ೭ನೇ ಮೈಲ್ನವರಾದ ಮಡಿಕೇರಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿರುವ ಚೆಕ್ಕೇರ ಪ್ರಮೋದ್ ಹಾಗೂ ದಕ್ಷಿಣಕನ್ನಡ, ಉಡುಪಿ ಮಾರ್ಕೆಟಿಂಗ್ ಫೆಡರೇಷನ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ದರ್ಶನ್ ದಂಪತಿಯ ಪುತ್ರ.