ಮಡಿಕೇರಿ, ಆ. ೨: ನಗರದ ರೋಟರಿ ವತಿಯಿಂದ ಕನ್ನಂಡ ಬಾಣೆಯ ಅಂಗನವಾಡಿಗೆ ಕುರ್ಚಿ, ಬೆಡ್‌ಶೀಟ್, ನೆಲಹಾಸು ಮತ್ತು ಪ್ಲಾಸ್ಟಿಕ್ ಚಾಪೆಗಳನ್ನು ವಿತರಿಸಲಾಯಿತು. ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್, ಹಾಗೂ ಸದಸ್ಯರಾದ ಮಲ್ಲಿಗೆ ಪೈ ಮತ್ತು ಲಲಿತಾ ರಾಘವನ್ ಹಾಜರಿದ್ದರು.