ವೀರಾಜಪೇಟೆ, ಜು. ೩೧ : ವೀರಾಜಪೇಟೆ ಕೊಡವ ಸೌಹಾರ್ದ ಕ್ರೇಡಿಟ್ ಕೋ ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ನಾಲ್ಕು ವರ್ಷಗಳು ಕಳೆದಿವೆ. ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿರುವುದರಿಂದ ಆರ್ಥಿಕ ವ್ಯವಹಾರಗಳು ಪ್ರಗತಿಯಲ್ಲಿ ಸಾಗಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಸಂಘದ ಸಭೆಯಲ್ಲಿ ಹೇಳಿದರು.
ಸಂಸ್ಥೆಯು ವೀರಾಜಪೇಟೆ, ಮಡಿಕೇರಿ, ಪೊನ್ನಂಪೇಟೆ ಮೂರು ತಾಲೂಕುಗಳನ್ನು ಒಳಗೊಂಡಿದೆ. ೧೨೩೫ ಸದಸ್ಯರುಗಳನ್ನು ಹೊಂದಿದೆ. ಪಾಲು ಬಂಡವಾಳ ೬೭.೫೬ ಲಕ್ಷಗಳಾಗಿದ್ದು ವಿವಿಧ ಠೇವಣಿಗಳಿಂದ ೫೨೬.೯೨ ಲಕ್ಷ ಸಂಗ್ರಹಣೆ ಆಗಿದೆ. ೩೯೦.೦೦ ಲಕ್ಷ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು ಶೇ ೯೮ ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ ೧೮೦ ಲಕ್ಷ ಹೂಡಿಕೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ೬ ಲಕ್ಷ ಲಾಭ ಗಳಿಸಿದ್ದು ೨೦೨೨-೨೩ನೇ ಸಾಲಿನಲ್ಲಿ ೧೧,೪೦,೬೮೬.೦೦ ಲಕ್ಷ ಲಾಭಗಳಿಸಿದೆ. ಮುಂದಿನ ಸಾಲಿನಲ್ಲಿ ಇನ್ನು ಹಚ್ಚಿನ ಲಾಭಗಳಿಸುವ ವಿಶ್ವಾಸ ಇದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ಸಹಕಾರಿ ವತಿಯಿಂದ ಹೊಸ ಶಾಖೆಯನ್ನು ಅಮ್ಮತ್ತಿಯಲ್ಲಿ ಪ್ರಾರಂಭಿಸಲು ಕಾರ್ಯಪ್ರವೃತರಾಗಿದ್ದು ನಮ್ಮ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ಆರಂಭಿಸಲು ಕ್ರಮ ಕ್ಯೆಗೊಳ್ಳಲಾಗುವುದು. ಸಂಸ್ಥೆಯು ಸಂಪೂರ್ಣ ಗಣಕೀಕೃತವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸೆಟ್ ಲಾಕರ್, ಕ್ಯಾಶ್ಲೆಸ್ ಸೇವೆಗಳಾದ ನೆಫ್ಟ್ ಆರ್.ಟಿ.ಜಿ.ಎಸ್, ಮೊಬೈಲ್ ಬ್ಯಾಂಕಿAಗ್ ಮತ್ತು ಇ ಸ್ಟಾö್ಯಂಪಿAಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಹಕಾರಿಯಲ್ಲಿ ಪಿಗ್ಮಿ ಸಾಲ ಸೇರಿ ದಂತೆ ಎಲ್ಲಾ ವಿಧದ ಸಾಲ ಸೌಲಭ್ಯ ಗಳನ್ನು ಆಧಾರ ದಾಖಲಾತಿ ಗಳೊಂದಿಗೆ ಸದಸ್ಯರಿಗೆ ವಿತರಿಸ ಲಾಗುತ್ತಿದೆ ಎಂದು ಹೇಳಿದರು. ಅಮತ್ತಿಯಲ್ಲಿ ನೂತನ ಶಾಖೆಯನ್ನು ಆರಂಭಿಸುವ ಬಗ್ಗೆ ಪರ ವಿರೋಧ ಚರ್ಚೆ ನಡೆದು ಸಂಸ್ಥೆಯ ಪ್ರಗತಿ ಹಿನ್ನಲೆಯಲ್ಲಿ ಮಹಾಸಭೆ ಒಪ್ಪಿಗೆ ನೀಡಿತು. ಚೇಮಿರ ಭೀಮಯ್ಯ, ಬಾಚಿರ ಜಗದೀಶ್, ಕುಲ್ಲಚಂಡ ಪೂಣಚ್ಚ, ಚೇಂದ್ರಿಮಾಡ ಪ್ರಿನ್ಸ್ ಸೋಮಯ್ಯ, ಚಂಬಾAಡ ಕರುಣ್ ಕಾಳಯ್ಯ, ಮುಲ್ಲೆಂಗಡ ಶಂಕರಿ ಪೊನ್ನಪ್ಪ, ಚಾರಿಮಂಡ ಪ್ರಕಾಶ್ ಮಾದಂಡ ಪೂವಯ್ಯ, ಅಮ್ಮಣಿಚಂಡ ರವಿ ಉತ್ತಪ್ಪ, ಪಟ್ಟಡ ಪೂವಣ್ಣ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಚೇಂದAಡ ವಸಂತ್ಕುಮಾರ್, ಕಾಂಡAಡ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ಚೇಂದ್ರಿಮಾಡ ಕೆ ನಂಜಪ್ಪ, ಕೇಳಪಂಡ ವಿಶ್ವನಾಥ್, ಕೊಂಗAಡ ಟಾಟ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ಕಾರ್ಯ ನಿರ್ವಹಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.