ಚೆಯ್ಯಂಡಾಣೆ, ಜು. ೩೧: ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಮುಂದಿನ ೫ ವರ್ಷದ ಅವಧಿಗೆ ತಾ. ೩೦ ರಂದು ನಿಗದಿಯಾಗಿತ್ತು.
ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸಾಲಗಾರ ಕ್ಷೇತ್ರದಿಂದ ಸಾಮಾನ್ಯ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಮಹಿಳಾ ವರ್ಗ, ಹಿಂದುಳಿದ ವರ್ಗ ಪ್ರವರ್ಗ ಎ, ಹಿಂದುಳಿದ ವರ್ಗ ಪ್ರವರ್ಗ ಬಿ, ಮೀಸಲಿರಿಸಿದ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಯಾಗಿತ್ತು. ತಾ. ೨೪ ರಂದು ನಾಮಪತ್ರ ವಾಪಸಾತಿ ಅವಧಿ ಮುಗಿದ ನಂತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕೋಡಿರ ಎಂ. ನಾಣಯ್ಯ, ಐತಿಚಂಡ ಪಿ. ಮಾದಯ್ಯ, ಪಾಂಡAಡ ಎಂ. ಸುಬ್ರಮಣಿ, ಮೇದುರ ಎನ್. ಕುಶಾಲಪ್ಪ, ನೆಲ್ಲಚಂಡ ಟಿ. ಕಿರಣ್ ಕಾರ್ಯಪ್ಪ, ನಂಬಿಯಪAಡ ಎ. ಅಯ್ಯಮ್ಮ, ಸಾಲಗಾರರ ಮಹಿಳಾ ಕ್ಷೇತ್ರದಿಂದ ಬೆಪುಡಿಯಂಡ ಎಸ್. ಜಾನ್ಸಿ, ಕೆ.ಜೆ. ಶಾರದ, ಸಾಲಗಾರರ ಹಿಂದುಳಿದ ಪ್ರವರ್ಗ(ಎ)ಯಿಂದ ಕೈಪಂಗಡ ಕೆ. ಉತ್ತಪ್ಪ, ಸಾಲಗಾರರ ಹಿಂದುಳಿದ ಪ್ರವರ್ಗ(ಬಿ)ಯಿಂದ ಕೋಡಿರ ಎಂ. ತಮ್ಮಯ್ಯ, ಸಾಲಗಾರ ಪರಿಶಿಷ್ಟ ಪಂಗಡದಿAದ ಸೋಮಯ್ಯ ಎಂ.ಎ., ಸಾಲಗಾರರ ಪರಿಶಿಷ್ಟ ಜಾತಿಯಿಂದ ಗಂಗಮ್ಮ ಹೆಚ್.ಕೆ., ಸಾಲಗಾರರಲ್ಲದ ಕ್ಷೇತ್ರದಿಂದ ಐತಿಚಂಡ ಕೆ. ವನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಬಿ.ಜಿ. ಸಂದೀಪ್ ವಹಿಸಿದ್ದರು.