ಮೂರ್ನಾಡು, ಜು. ೩೧: ಇಲ್ಲಿಗೆ ಸಮೀಪದ ಬಾಡಗ ಗ್ರಾಮದ ಮುಕ್ಕಾಟಿರ ಸತೀಶ್ ಅವರ ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಯಾದ ಕೆಸರು ಗದ್ದೆಯ ಕಾಲ್ಚೆಂಡು ಪಂದ್ಯಾಟವು ಜರುಗಿತು.

ಜಿಲ್ಲೆಯ ವಿವಿಧ ಭಾಗಗಳಿಂದ ೨೪ ತಂಡಗಳು ಪಾಲ್ಗೊಂಡಿದ್ದು, ಕೆಸರುಗದ್ದೆಯ ಪಂದ್ಯವನ್ನು ಮುಕ್ಕಾಟಿರ ಸತೀಶ್ ಉದ್ಘಾಟಿಸಿದರು. ಮೊದಲ ಬಹುಮಾನವನ್ನು ಲೋಕಲ್ ಬಾಯ್ಸ್ ಬಾಡಗ, ಎರಡನೆಯ ಬಹುಮಾನವನ್ನು ಕೊಂಡAಗೇರಿ ಬುಲೆಟ್ ಫ್ರೆಂಡ್ಸ್ ತಮ್ಮದಾಗಿಸಿಕೊಂಡರು.

ಬೇತ್ರಿ ಎಸ್‌ಈಎಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನಡೆಸಿದ ಈ ಪಂದ್ಯಾಟಕ್ಕೆ ಬಹುಮಾನಗಳನ್ನು ಅಬ್ದುಲ್ ಲತೀಫ್ ದಕ್ಷಿಣ ಆಫ್ರಿಕ ಹಾಗೂ ಮುಕ್ಕಾಟಿರ ಮಧುದೇವಯ್ಯ ಆಯೋಜಿಸಿದ್ದರು. ಸತೀಶ್ ಬಹುಮಾನಗಳನ್ನು ವಿತರಿಸಿ ನೆರೆದವರನ್ನು ವಂದಿಸಿದರು.