ಮಡಿಕೇರಿ, ಜು. ೩೧: ಪೋರ್ಚುಗಲ್ ದೇಶದ ಲಿಸ್‌ಬನ್‌ನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ಗಳ ಒಕ್ಕೂಟವು ತಾ. ೧ರಿಂದ ಏರ್ಪಡಿಸಿರುವ ವಿಶ್ವ ಯುವ ಜನರ ದಿನ ಕಾರ್ಯಕ್ರಮದಲ್ಲಿ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ಮೈಸೂರು ಧರ್ಮಕ್ಷೇತ್ರದ ಪ್ರತಿನಿಧಿಯಾಗಿ ಮಡಿಕೇರಿಯಿಂದ ಶಿಯಾನ್ ಜಾನ್ಸನ್ ಭಾಗವಹಿಸಲಿದ್ದಾರೆ.

ಕ್ರೆöÊಸ್ತರ ಪರಮೋಚ್ಛ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಲಿದ್ದು, ಎಲ್ಲಾ ದೇಶಗಳಿಂದಲೂ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಇವರು ಸಂತ ಮೈಕಲರ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಾನ್ಸನ್ ಕೆ.ಎ. ಮತ್ತು ಟೀನಾ ಜೆ. ಫೆರ್ನಾಂಡಿಸ್ ದಂಪತಿ ಪುತ್ರಿ